ತುಮಕೂರು:
ಸಮಾನತೆ,ಸ್ವಾತಂತ್ರ, ಭಾತೃತ್ವ ಹಾಗೂ ಮಾನವೀಯ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತದ ಸಂವಿಧಾನ ಸಂಪೂರ್ಣವಾಗಿ ಜಾರಿಗೆ ಬರಬೇಕೆಂದರೆ,ಕೇಂದ್ರದಲ್ಲಿ ಮಯಾವತಿ ಅವರ ನೇತೃತ್ವದ ಬಿಎಸ್‍ಪಿ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಸಾಧ್ಯ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಹಾಗೂ ಉತ್ತರಪ್ರದೇಶದ ವಿಧಾನಪರಿಷತ್ ಮಾಜಿ ಸದಸ್ಯ ಥೋಮರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಬಿಎಸ್‍ಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಈ ದೇಶದ ಎಲ್ಲಾ ಬಡವರಿಗೆ, ಕೂಲಿಕಾರರಿಗೆ, ರೈತರಿಗೆ, ಶ್ರಮಜೀವಿಗಳಿಗೆ ಮೂರು ಹೊತ್ತಿನ ಊಟ,ಇರಲು ಮನೆ, ಹಾಕಲು ಬಟ್ಟೆಗಳು ಸಿಗಬೇಕು.ಆದರೆ ಇದುವರೆಗೂ ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳಿಂದ ಇದು ಸಾಧ್ಯವಾಗಿಲ್ಲ.ಸಂವಿಧಾನದಲ್ಲಿ ಈ ಎಲ್ಲಾ ಅಂಶಗಳು ಅಡಕವಾಗಿದ್ದರೂ, ಅವುಗಳು ಜಾರಿಯಾಗಿಲ್ಲ. ಶ್ರೀಮಂತರ ಪರವಾದ ನೀತಿಗಳು ಮಾತ್ರ ಜಾರಿಯಾಗುತ್ತಿಲ್ಲ.ಇವುಗಳ ವಿರುದ್ದ ಸೆಟೆದ್ದು ನಿಲ್ಲುವ ಧೈರ್ಯ ಇರುವುದು ಬಿಎಸ್ಪಿ ಪಕ್ಷಕ್ಕೆ ಮಾತ್ರ ಎಂದರು.
ದೇಶದಲ್ಲಿ ಇದುವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳ ರಾಜಕೀಯ ಪಕ್ಷಗಳು ಅತಿ ಕಡಿಮೆ ಸಂಖ್ಯೆಯಲ್ಲಿರುವ ಶ್ರೀಮಂತರು, ಉದ್ದಿಮೆದಾರರ ಪರವಾಗಿ ಕೆಲಸ ಮಾಡುತ್ತಿರುವ ಕಾರಣ, ಇಂದಿಗೂ ಬಡವರ ಸಂಖ್ಯೆ ಕಡಿಮೆಯಾಗಿಲ್ಲ.ಇದಕ್ಕೆ ಕಾರಣ ಬಡವರು ತಮ್ಮ ಓಟಿನ ಶಕ್ತಿಯನ್ನು ಅರ್ಥ ಮಾಡಿಕೊಂಡಿಲ್ಲ. ಕೇವಲ ಶ್ರೀಮಂತರ ಪರವಿರುವ ಪಕ್ಷಗಳು ನೀಡುವ ಆಸೆ, ಆಮೀಷಗಳಿಗೆ ತಮ್ಮ ಮತಗಳನ್ನು ಚಲಾಯಿಸುತ್ತಿದ್ದು, ಇದು ತಪ್ಪಬೇಕು.ತಮ್ಮ ಓಟಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು.ಆಗ ಮಾತ್ರ ಶ್ರಮಜೀವಿಗಳ ಪರವಾದ ಪಕ್ಷಗಳು ಅಧಿಕಾರಕ್ಕೆ ಬರಲು ಸಾಧ್ಯ ಎಂದು ಥೋಮರ್ ನುಡಿದರು.
ಬಡವರು,ದಿನ ದಲಿತರು ಹಾಗೂ ಶೋಷಿತರ ಪರವಾಗಿ ಇರುವ ಬಹುಜನ ಸಮಾಜಪಾರ್ಟಿಯ ಅಧ್ಯಕ್ಷರಾದ ಮಯಾವತಿ ಅವರ ಜನ್ಮ ದಿನ ಜನವರಿ 15ರಂದು ಇಡೀ ದೇಶದ ಬಹುಜನ ಬಂದುಗಳು ಅರ್ಥಿಕ ಸಹಾಯ ಧನ ದಿನವಾಗಿ ಆಚರಿಸ ಲಾಗುತ್ತಿದೆ.ಅಂದು ಒಂದೊಂದು ಸೆಕ್ಟರ್ ವತಿಯಿಂದ ಕನಿಷ್ಠ 1 ಲಕ್ಷ ರೂಗಳಂತೆ ಹಣ ಸಂಗ್ರಹಿಸಿ, ಪಕ್ಷಕ್ಕೆ ನೀಡಿದರೆ, 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಶ್ರೀಮಂತರ ಪರವುಳ್ಳ ಪಕ್ಷಗಳನ್ನು ಎದುರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪದಾಧಿ ಕಾರಿಗಳು ಹೆಚ್ಚಿನ ಗಮನಹರಿಸಬೇಕೆಂದು ಥೋಮರ್ ತಿಳಿಸಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ,ಜಾತಿ,ಧರ್ಮದ ಆಧಾರದಲ್ಲಿ ಇಂದು ಇಡೀ ದೇಶ ನಡೆಯುತ್ತಿದ್ದು,ಬಹುಜನರನ್ನು ನಿರ್ಲಕ್ಷಿಸಲಾಗುತ್ತಿದೆ.ಹಣ ಬಲ, ಮಾಧ್ಯಮಗಳ ಬಲ,ತೊಳ್ಬಲಗಳ ಮೂಲಕ ಅಧಿಕಾರವನ್ನು ನಡೆಸಲಾಗುತ್ತಿದೆ.ಇದು ಬದಲಾಗಬೇಕೆಂದರೆ, ಬಡವರು, ಶ್ರಮಜೀವಿಗಳು ಬದಲಾಗಬೇಕಿ ಎಂದರು.
ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ,ಈ ದೇಶದ ಶೋಷಿತರ ಪರವಾಗಿ ಹಲವಾರು ಹೋರಾಟಗಳನ್ನು ಅಂಬೇಡ್ಕರ್, ಕಾಂನ್ಷಿರಾಂ ರಂತಹ ಮಹಾನುಭಾವರು ನಡೆಸಿದ್ದಾರೆ.ಅವರ ಕಾಲಾನಂತರ ಕೇವಲ ಮನವಿ, ಧರಣಿಗಳಿಗೆ ಬಹುಜನರು ಸಿಮೀತವಾಗಿದ್ದಾರೆ.ಒಡೆದು ಹೋಗಿರುವ ಬಹುಜನರನ್ನು ಒಗ್ಗೂಡಿಸಿ,ಆಳುವ ವರ್ಗವಾಗಿ ರೂಪಿಸುವ ಗುರುತರ ಜವಾಬ್ದಾರಿ ನಮ್ಮಗಳ ಮೇಲಿದೆ ಎಂದರು.