ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಸೇರಿ ಜಿಲ್ಲೆಯ ಹಿರಿಯ ಸಾಹಿತಿಗಳಾದ ಕೊರಟಗೆರೆ ತಾಲ್ಲೂಕು ಜಟ್ಟಿ ಅಗ್ರಹಾರದ ಕೃಷ್ಣಮೂರ್ತಿಯವರನ್ನು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಅಗ್ರಹಾರ ಕೃಷ್ಣಮೂರ್ತಿ ಎಂದೇ ಪ್ರಸಿದ್ಧರಾದ ಇವರು ಭಾರತ ಸರ್ಕಾರದ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ 30 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಈ ಸಂಸ್ಥೆಯಡಿ ಸಾಹಿತ್ಯ ಮತ್ತು ಭಾಷೆಗಳ ಅಭಿವೃದ್ಧಿ ಬಗ್ಗೆ ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದಾರೆ. ಎಲ್ಲಾ ಭಾಷೆಗಳ ನಡುವೆ ಪರಸ್ಪರ ಭಾಷಾಂತರ ಚಟುವಟಿಕೆ, ಪುಸ್ತಕ ಪ್ರಕಟಣೆ ಮಾಡಿದ್ದಾರೆ. ಪಂಡಿತ್ ಜವಹರಲಾಲ್ ನೆಹರು ಸ್ಥಾಪಿಸಿದ ರಾಷ್ಟಿçÃಯ ಸಂಸ್ಥೆಯಾದ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಶಾಸ್ತಿçÃಯ ಭಾಷೆಯ ಕಡತಗಳನ್ನು ಪರಿಶೀಲಿಸಿ ನಿರಂತರ ಸಭೆಗಳನ್ನು ಆಯೋಜಿಸಿ ಕನ್ನಡ ಭಾಷೆಗೆ ಶಾಸ್ತಿçÃಯ ಭಾಷೆಯ ಸ್ಥಾನಮಾನ ದೊರಕಲು ಕಾರಣಕರ್ತರೂ ಆಗಿದ್ದಾರೆ. ಆ ಸಂಸ್ಥೆಯ ದಕ್ಷಿಣ ಭಾರತದ ಪ್ರಾದೇಶಿಕ ಕಛೇರಿ ಬೆಂಗಳೂರಿನಲ್ಲಿ ಸ್ಥಾಪಿಸಲು ಶ್ರಮಿಸಿದ್ದಾರೆ.
ಪ್ರೊ. ಎಂ.ಎA.ಕಲಬುರ್ಗಿ ಜೊತೆಗೂಡಿ 12ನೇ ಶತಮಾನದ ಶಿವಶರಣರ 2500 ವಚನಗಳನ್ನು 15 ಬೇರೆ ಬೇರೆ ಭಾರತೀಯ ಭಾಷೆಗಳಿಗೆ ಅನುವಾದಗೊಳಿಸಿದ್ದಾರೆ. ಇವರು ಬೆಳದಿಂಗಪ್ಪನ ಪೂಜೆ ಎಂಬ ಸಂಶೋಧನ ಗ್ರಂಥ, ನೀವು ಮತ್ತು ಪ್ರೀತಿ ಎಂಬ ಕಾದಂಬರಿ, ಬಹುವಚನ ಎಂಬ ವಿಮರ್ಶಾಕೃತಿ, ಧ್ಯಾನ ಎಂಬ ಕವನ ಸಂಕಲನ, ಜೊತೆಗೆ ಅನೇಕ ಕನ್ನಡ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಗೊಳಿಸಿದ್ದಾರೆ. ಇವರು ಕುವೆಂಪು ನೂರು ನಮನ ಎಂಬ 100 ಲೇಖಕ/ಲೇಖಕಿಯರ ಪುಸ್ತಕಗಳನ್ನು ಸಂಪಾದಿಸಿ ಏಕಕಾಲದಲ್ಲಿ ಪ್ರಕಟಿಸಿದ್ದಾರೆ.
ಪ್ರಗತಿಪರ ಚಿಂತಕರಾದ ಅಗ್ರಹಾರ ಕೃಷ್ಣಮೂರ್ತಿಯವರು 25 ವಿದೇಶಗಳಲ್ಲಿ ಆಯೋಜನೆಗೊಂಡ ಭಾರತೀಯ ಸಾಹಿತ್ಯ ಕುರಿತ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದಾರೆ.
ಇವರಿಗೆ ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ವರ್ಧಮಾನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ದೆಹಲಿ ಕರ್ನಾಟಕ ಸಂಘದ ವಿಶಿಷ್ಟ ಕನ್ನಡಿಗ ಪ್ರಶಸ್ತಿ, ಪೂರ್ಣಚಂದ್ರ ತೇಜಸ್ವಿ ಪ್ರಶಸ್ತಿ ಮುಂತಾದವುಗಳು ಸಂದಾಯವಾಗಿವೆ.
ನವೆಂಬರ್ 29, 30ರಂದು ತುಮಕೂರು ನಗರದ ಗಾಜಿನ ಮನೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ. ಸಹೃದಯ ಕನ್ನಡಾಭಿಮಾನಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನಂತಿಸುತ್ತದೆ.
ಭಾವಚಿತ್ರ : 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪನವರ ನೇತೃತ್ವದಲ್ಲಿ ಕಾರ್ಯದರ್ಶಿಗಳಾದ ಡಾ. ಡಿ.ಎನ್.ಯೋಗೀಶ್ವರಪ್ಪ, ಕೆ.ಸಣ್ಣಹೊನ್ನಯ್ಯ ಕಂಟಲಗೆರೆ, ಕೋಶಾಧ್ಯಕ್ಷರಾದ ಎಂ.ಹೆಚ್.ನಾಗರಾಜು, ಸಂಚಾಲಕರಾದ ಕೆ.ಎಸ್.ಉಮಾಮಹೇಶ್‌ರವರು ಅವರಿಗೆ ಸಮ್ಮೇಳನ ಅಧ್ಯಕ್ಷರ ಆಯ್ಕೆ ತಿಳಿಸಿ ಅಧಿಕೃತ ಆಹ್ವಾನ ನೀಡಿದರು.