ತಿಪಟೂರು: ವಾಹನಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಸಿ, ವಾಹನದ ಆರೋಗ್ಯವನ್ನು ಕಾಪಾಡಬೇಕು ನಮ್ಮ ನಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಡುವ ಮೂಲಕ ಪರಿಸರವನ್ನು ಉಳಿಸಲು ಕಾರ್ಯ ಪ್ರವೃತ್ತರಾಗಬೇಕೆಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್‌ದಾಸ್ ತಿಳಿಸಿದರು.

ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಯೋಜನೆ ಮಾಡಿದ್ದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿನಿತ್ಯ ರಸ್ತೆಗೆ ಹೊಸದಾಗಿ ವಾಹನಗಳು ಬರುತ್ತಿದ್ದು ಸಂಚಾರ ದಟ್ಟಣೆಯು ಹೆಚ್ಚಳವಾಗುತ್ತಿದೆ, ಅದರಿಂದ ಬರುವ ಹೊಗೆಯು ಪರಿಸರವನ್ನು ಹಾಳು ಮಾಡುತ್ತಿದ್ದು, ಇದರಿಂದ ಅನೇಕ ಮನುಷ್ಯನ ಆರೋಗ್ಯವು ಅಪಾಯಕಾರಿಯಾಗುವ ಲಕ್ಷಣಗಳು ಹೆಚ್ಚಾಗುತ್ತಿದೆ ಆದ್ದರಿಂದ ಪರಿಸರವನ್ನು ಉತ್ತಮ ಸ್ಥಿತಿಯಲ್ಲಿರಲು ಪ್ರತಿ ವಾಹನ ಸವಾರರು ಸುಮಾರು ಆರು ತಿಂಗಳಿಗೊಮ್ಮೆ ವಾಹನ ತಪಾಸಣೆ ಮಾಡಿಸಬೇಕು ಎಂದು ತಿಳಿಸಿದರು.

ವಾಹನ ನಿರೀಕ್ಷಕರಾದ ನಂದೀಶ್ ಬಿ.ಎಸ್ ಮಾತನಾಡಿ ನಿಮ್ಮ ನಿಮ್ಮ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳದಿದ್ದರೆ ಸರ್ಕಾರದಿಂದ ನಿರ್ಧರಿಸಿರುವ ದಂಡವನ್ನು ವಿಧಿಸಲಾಗುವುದು ಆದ್ದರಿಂದ ನಿಮ್ಮ ವಾಹನಗಳ ಮಾಲಿನ್ಯ ತಪಾಸಣೆ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಅಧೀಕ್ಷಕರಾದ ಎಚ್.ಎಸ್.ಚೇತನ್ ಮಾತನಾಡಿ ಸರ್ಕಾರವು ವಾಯುಮಾಲಿನ್ಯ ತಪಾಸಣೆಗೆ ಕಾರ್ಯಕ್ರಮಕ್ಕೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು, ಸಾರ್ವಜನಿಕರು ಉಪಯೋಗಿಸಿಕೊಳ್ಳದಿದ್ದರೆ ಸರ್ಕಾರದ ಈ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಗುರುರಾಜ್.ಬಿ.ಕೆ, ಅಶೋಕ್‌ಕುಮಾರ್.ಎಸ್ ಮತ್ತು ಕಚೇರಿಯ ಸಿಬ್ಬಂದಿ, ವಾಹನ ಸವಾರರು, ಸಾರ್ವಜನಿಕರು ಭಾಗವಹಿಸಿದ್ದರು.

(Visited 1 times, 1 visits today)