ಹುಳಿಯಾರು: ವಾರಕ್ಕೊಮ್ಮೆ ಹುರುಳಿಕಾಳು, ನುಗ್ಗೆಸೊಪ್ಪಿನ ಸಾರು ತಿನ್ನುವುದರಿಂದ ಆರೋಗ್ಯವಾಗಿರಬಹುದು ಎಂದು ಹಂದನಕೆರೆ ಶ್ರೀಮಠದ ಗುರುಗಳಾದ ವೇದಮೂರ್ತಿ ರುದ್ರಾರಾಧ್ಯರು ತಿಳಿಸಿದರು.
ಹುಳಿಯಾರಿನ ಸನ್ಮಾರ್ಗ ಥಿಯಾಸಾಫಿಕಲ್ ಸೊಸೈಟಿಯ ಥಿಯಾಸಾಫಿಕಲ್ ಸೇವಾ ವಿಭಾಗ ಮತ್ತು ಶ್ರೀ ಗುರು ಗೋಸೇವಾ ಪರಿವಾರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಣ್ಣೆಯಲ್ಲಿ ಖರೀದ ಪದಾರ್ಥಗಳು, ಸಿಹಿ ತಿಂಡಿಗಳು ಹಾಗೂ ಜಂಕ್ ಫುಡ್‌ಗಳಿಂದ ದೂರ ಇರಬೇಕು. ಬೆಳಗ್ಗೆ ಬೆಡ್ ಕಾಫಿ ಬಿಟ್ಟು ಕಷಾಯ ಕುಡಿಯಿರಿ, ಬೆಳಗ್ಗೆ 9 ರೊಳಗೆ ಮದ್ಯಾಹ್ನ 1 ರೊಳಗೆ ಸಂಜೆ 7 ರೊಳಗೆ ಊಟತಿಂಡಿ ತಿನ್ನಿ. ತಿಂದ ಬಳಿಕ ಯತ್ತೇಚ್ಚವಾಗಿ ನೀರು ಕುಡಿಯದೆ ಸ್ವಲ್ಪ ಸಮಯದ ನಂತರ ಕುಡಿಯಬೇಕು. ತಿಂದ ನಂತರ ನೂರೆಜ್ಜೆಯಷ್ಟಾದರೂ ನಡೆಯಬೇಕು. ಬಹುಮುಖ್ಯವಾದಿ ತಿಂಗಳಿಗೆರಡು ಬಾರಿಯಾದರೂ ಉಪವಾಸ ಮಾಡಬೇಕು. ನಿಯಮಿತವಾದ ವ್ಯಾಯಾಮ, ಕಾಲಕಾಲದ ಹಣ್ಣುಗಳನ್ನು ತಿನ್ನುವ ಅಭ್ಯಾಸ ಇದ್ದರೆ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದರು.
ಪಂಚಗವ್ಯ ಚಿಕಿತ್ಸಾ ತಜ್ಞರಾದ ಡಾ.ಡಿ.ಪಿ.ರಮೇಶ್ ಮಾತನಾಡಿ ಶೌಚಾಲಯಕ್ಕೆ ಕೂರಲಾಗದಂತೆ ಮಂಡಿ ನೋವು ಅನುಭವಿಸುತ್ತಿರುವವರು ಅರ್ಧ ಗ್ಲಾಸ್ ಹಾಲಿಗೆ ಅರ್ಧ ಗ್ಲಾಸ್ ನೀರು, ಒಂದು ಚಿಟಕಿ ಅರಿಸಿನ, ಒಂದು ಚಮಚ ತುಪ್ಪ ಬೆಸರಿ ನಿತ್ಯ ಎರಡು ಬಾರಿ ಸೇವಿಸಿದರೆ ಹತ್ತದಿನೈದು ದಿನಗಳಲ್ಲಿ ಸರಿಯಾಗುತ್ತದೆ. ಆದರೆ ಇಂತಹ ಸರಳ ಮನೆಮದ್ದು ಬಿಟ್ಟು ದುಭಾರಿ ವೆಚ್ಚದ ಇಂಗ್ಲೀಷ್ ಮೆಡಿಸಿನ್‌ಗೆ ಮಾರುಹೊಗುತ್ತಿರುವುದು ವಿಪರ್ಯಾಸ ಎಂದರಲ್ಲದೆ ಪಂಚಗವ್ಯ ಚಿಕಿತ್ಸೆಯಿಂದ ಕ್ಯಾನ್ಸರ್ ಕೂಡ ವಾಸಿ ಮಾಡಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಥಿಯಾಸಾಫಿಕಲ್ ಸೊಸೈಟಿ ಅಧ್ಯಕ್ಷರಾದ ಬಸವರಾಜಪ್ಪ ವಹಿಸಿದ್ದರು. ಸೇವಾ ವಿಭಾಗದ ಅಧ್ಯಕ್ಷ ಎಚ್.ಬಿ.ಸತೀಶ್, ಗುರು, ಉಪನ್ಯಾಸಕ ನರೇಂದ್ರಬಾಬು, ಥಿಯಾಸಾಫಿಕಲ್‌ನ ಎಂ.ಆರ್.ಗೋಪಾಲ್, ಜಗದೀಶ್ ಮತ್ತಿತರರು ಇದ್ದರು.