ತುಮಕೂರು: ನಗರಕ್ಕೆ ಹೊಂದಿಕೊAಡAತಿರುವ ಬೆಳಗುಂಬ ಗ್ರಾಮದಲ್ಲಿ ಶ್ರೀಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯದ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಳಸ ಸ್ಥಾಪನೆ ಕಾರ್ಯಕ್ರಮ ನಡೆಯಿತು, ಆದರೆ ಈ ಕಾರ್ಯಕ್ರಮದಲ್ಲಿ ನಡೆದದ್ದೆಲ್ಲವೂ ಅಧ್ವಾನ ಎಂಬ ಆರೋಪ ಕೇಳಿ ಬಂದಿದೆ.
ಮುಜರಾಯಿ ಇಲಾಖೆಗೆ ಸೇರುವ ಈ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಅನ್ನೋದು ಅದ್ಯಾವ ಮೂಲೆ ಸೇರಿತ್ತೋ ಗೊತ್ತಿಲ್ಲ. ದೇವಾಲಯ ಅಭಿವೃದ್ಧಿ ಗೆ ಶ್ರಮಿಸಿದ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡರನ್ನು ಕಡೆಗಣಿಸಿದ ಜಿಲ್ಲಾಡಳಿತ ಅವರಿಗೂ ಅವಮಾನಿಸುವ ಕೆಲಸ ಮಾಡಿದೆ.
ನವೆಂಬರ್ 8 ರಿಂದ 11 ರ ವರೆಗೆ ದೇವಾಲಯ ಉದ್ಘಾಟನೆ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು, ಆದರೆ ಕಾರ್ಯಕ್ರಮದ ಮೂರು ರೀತಿಯ ಕರಪತ್ರ ಮುದ್ರಿಸಿ ಭಕ್ತರನ್ನು ಮತ್ತು ಗ್ರಾಮಸ್ಥರನ್ನು ಗೊಂದಲಕ್ಕೆ ದೂಡುವ ಕೆಲಸವೂ ಆಗಿದೆ, ಈ ರೀತಿ ಮೂರು ರೀತಿ ಕರಪತ್ರ ಮುದ್ರಿಸಿದ್ದರ ಹಿಂದಿನ ಉದ್ದೇವೇನಿತ್ತು ಎಂದು ಭಕ್ತರು ಪ್ರಶ್ನಿಸಿದ್ದಾರೆ.
ಇನ್ನು ಶಾಸಕ ಸುರೇಶ್ ಗೌಡ ಅವರು ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ್ದರು, ಸರ್ಕಾರದಿಂದ 75 ಲಕ್ಷ ಹಾಗೂ ತಮ್ಮ ಸ್ವಂತ ಹಣ 50 ಲಕ್ಷ ರೂ. ನೀಡಿ ಸುಂದರ ದೇಗುಲ ನಿರ್ಮಾಣಕ್ಕೆ ಸಾಥ್ ನೀಡಿದ್ದರು, ಆದರೆ ಸುರೇಶ್ ಗೌಡರನ್ನು ಕಾರ್ಯಕ್ರಮದಲ್ಲಿ ಕಡೆಗಣಿಸುವ ಮೂಲಕ ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ, ಇಷ್ಟೇ ಇಲ್ಲದೆ ಕರಪತ್ರ ದಲ್ಲಿ ವೇದಿಕೆ ಕಾರ್ಯಕ್ರಮ ಎಂದು ಮುದ್ರಿಸಿ ಶಾಸಕರನ್ನು ಆಹ್ವಾನಿಸಲಾಗಿಸಲಾಗಿತ್ತು, ಆದರೆ ಅಲ್ಲಿ ವೇದಿಕೆ ಇರಲಿಲ್ಲ, ಇಲ್ಲೂ ಮತ್ತೆ ಶಾಸಕರಿಗೆ ಅವಮಾನ.
ಇನ್ನು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಹಿಂದೆ ಬೆಳಗುಂಬಕ್ಕೆ ಭೇಟಿ ನೀಡಿದಾಗ ಸಿದ್ದರಾಮೇಶ್ವರ ದೇಗುಲ ಅಭಿವೃದ್ಧಿಗೆ ಸರ್ಕಾರದಿಂದ ನಾಲ್ಕು ಕೋಟಿ ಹಾಗೂ ವೈಯಕ್ತಿಕವಾಗಿ ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಐವತ್ತು ಲಕ್ಷ ಹಣ ನೀಡುವುದಾಗಿ ಹೇಳಿದ್ದರು, ಇಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದ್ದಾರೆ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಬಹುದಿತ್ತು, ಆದರೆ ಆ ಕಾರ್ಯವೂ ನಡೆಯಲಿಲ್ಲ, ಸೋಮಣ್ಣ ಅವರು ಕಾರ್ಯಕ್ರಮದಲ್ಲಿ ಕಾಣಲೇ ಇಲ್ಲ, ಆಹ್ವಾನ ಪತ್ರಿಕೆಯಲ್ಲಿ ಸಚಿವರ ಹೆಸರಿದೆಯಾದರೂ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಕೂಡ ಕಾರ್ಯಕ್ರಮಕ್ಕೆ ಬರಲೇ ಇಲ್ಲ, ಅಧಿಕಾರಿಗಳು ಸಚಿವರಿಗೆ ಇಂಥದೊAದು ಕಾರ್ಯಕ್ರಮ ಇದೇ ಎಂದು ಜ್ಞಾಪಿಸಿದ್ರೋ ಇಲ್ಲವೋ ಗೊತ್ತಿಲ್ಲ, ಇಲ್ಲಿ ಆಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ವಂತು ಎದ್ದು ಕಾಣುತ್ತಿದೆ.
ಅಭಿವೃದ್ಧಿ ಗೆ ಶ್ರಮಿಸಿದ ಸುರೇಶ್ ಗೌಡರನ್ನು ಕಡೆಗಣಿಸಿ ತಮ್ಮ ಮೂಗಿನ ನೇರಕ್ಕೆ ಎಂಬAತೆ ಗುರುಸಿದ್ದರಾಮೇಶ್ವರ ದೇಗುಲ ಉದ್ಘಾಟನೆ ಅದ್ಯಾವ ಪುರುಷಾರ್ಥಕ್ಕೆ ನಡೆಯಿತೋ, ಮುಜರಾಯಿ ಇಲಾಖೆಗೆ ಏನಾಗಿದೆ ಎಂದು ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ, ಜಿಲ್ಲಾಡಳಿತಕ್ಕೆ ಇದು ಕಪಾಳ ಮೋಕ್ಷವೇ ಸರಿ.
ರಾಜ್ಯಪಾಲರ ಗಮನಕ್ಕೆ ತಂದು ಹೋರಾಟ ಮಾಡಲಾಗುವುದು:
ಗುರು ಸಿದ್ದರಾಮೇಶ್ವರ ಸ್ವಾಮಿ ದೇಗುಲಕ್ಕೆ ತನ್ನದೇ ಆದ ಇತಿಹಾಸ ಹಾಗೂ ಅಪಾರ ಭಕ್ತರಿದ್ದಾರೆ. ಇಂಥ ದೇಗುಲ ಜೀರ್ಣೋದ್ಧಾರ ಹಾಗೂ ಉದ್ಘಾಟನೆ ಕಾರ್ಯಕ್ರಮ ಬಹಳ ಅಚ್ಚುಕಟ್ಟಗಿ ನಡೆಯಬೇಕಿತ್ತು, ಆದರೆ ಮುಜರಾಯಿ ಇಲಾಖೆ ಬೇಕಾಬಿಟ್ಟಿಯಾಗಿ ಕಾರ್ಯಕ್ರಮ ಮಾಡಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ, ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ಅವರು ದೇಗುಲದ ಅಭಿವೃದ್ಧಿ ಗೆ ಶ್ರಮಿಸಿ ಸ್ವಂತವಾಗಿ ಹಣ ನೀಡಿದ್ದಾರೆ, ಮಾಜಿ ಶಾಸಕರು ದೇಗುಲ ಅಭಿವೃದ್ಧಿಗೆ ದೇಣಿಗೆ ನೀಡಿದ್ದಾರೆ, ಭಕ್ತರು ಸಹ ತಮ್ಮ ಕೈಲಾದ ಕಾಣಿಕೆ ಕೊಟ್ಟಿದ್ದಾರೆ, ಹೀಗಿರುವಾಗ ಮುಜರಾಯಿ ಇಲಾಖೆ ಇವೆಲ್ಲವನ್ನು ಪರಿಗಣಿಸದೆ ಬೇಕಾಬಿಟ್ಟಿ ಕಾರ್ಯಕ್ರಮ ಮಾಡಿ ಭಕ್ತರಲ್ಲಿ ಅಸಹನೆ ಮೂಡುವಂತೆ ಮಾಡಿದೆ, ಮೂರು ರೀತಿ ಕರಪತ್ರ ಮುದ್ರಿಸಿ ಇಡೀ ಕಾರ್ಯಕ್ರಮದ ದಿಕ್ಕನ್ನೇ ತಪ್ಪಿಸಲಾಗಿತ್ತು, ಈ ಅವಾಂತರ, ಅಧ್ವಾನಗಳಿಗೆ ಹೊಣೆಗಾರರು ಯಾರು ಎಂಬುದನ್ನು ಮುಜರಾಯಿ ಇಲಾಖೆ ಅಧಿಕಾರಿಗಳು ಭಕ್ತರಿಗೆ ತಿಳಿಸಬೇಕಿದೆ, ಈ ನಿರ್ಲಕ್ಷದ ಕಾರ್ಯಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಇಲ್ಲವಾದಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ಗಮನಕ್ಕೆ ತಂದು ಹೋರಾಟ ಮಾಡಲಾಗುವುದು.
– ಬೆಳಗುಂಬ ವೆಂಕಟೇಶ್, ಸಾಮಾಜಿಕ ಹೋರಾಟಗಾರ, ಬೆಳಗುಂಬ ನಿವಾಸಿ