ತುಮಕೂರು: ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆ ಇವರನ್ನು e್ಞÁಪಕದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಹಿರಿಯರ ಹಬ್ಬದ ರೀತಿ ಸ್ವಾತಂತ್ರ ಹೋರಾಟಗಾರರ ಸ್ಮರಣೆ ಕಾರ್ಯಕ್ರಮ ನಡೆಯಬೇಕು ಎಂದು ತುಮಕೂರು ಜಿಲ್ಲಾ ಸ್ವಾತಂತ್ರ ಹೋರಾಟಗಾರರ ಸಂಘ ಹಾಗೂ ಉತ್ತರಾಧಿಕಾರಿಗಳ ಸಂಘದ ಕಾರ್ಯಾಧ್ಯಕ್ಷರಾದ ಆಶಾ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ನಗರದ ಬಾಪೂಜಿ ಸಭಾಂಗಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆವತಿಯಿAದ ಆಯೋಜಿಸಿದ್ದ ಜಿಲ್ಲೆಯ ಸ್ವಾತಂತ್ರ ಹೋರಾಟಗಾರರ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಸಂಘದ ವತಿಯಿಂದ ಪ್ರತಿವರ್ಷ ವಿಜಯದಶಮಿಯ ದಿನದಂದು ಸ್ವಾತಂತ್ರ ಹೋರಾಟಗಾರರ ಸಂಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದರು.

ನಮ್ಮ ತಾತ ಬಿ.ಸಿ.ನಂಜುAಡಯ್ಯ ಹಾಗೂ ಅಜ್ಜಿಯವರು ಸ್ವಾತಂತ್ರ ಹೋರಾಟಗಾರರಿದ್ದರು. ಅನೇಕ ಗುಪ್ತ ಸಭೆಗಳು ನಮ್ಮ ಮನೆಯಲ್ಲಿ ನಡೆದಿದ್ದವು ಎಂಬುದನ್ನು ಆಗಾಗ್ಗೆ ತಿಳಿಸುತಿದ್ದರು. ಇಂತಹ ಹೋರಾಟಗಾರರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಸರಕಾರ, ಸಂಘ ಸಂಸ್ಥೆಗಳು ಸೇರಿ, ನಗರದಲ್ಲಿರುವ ವೃತ್ತಗಳಿಗೆ, ರಸ್ತೆಗಳಿಗೆ ಅವುಗಳ ಹೆಸರು ಇಡುವ ಮೂಲಕ, ಅವರುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಹಾಗೆಯೇ ತುಮಕೂರು ನಗರದಲ್ಲಿರುವ ವೀರಸೌಧದಲ್ಲಿ ಜಿಲ್ಲೆಯ 34 ಸ್ವಾತಂತ್ರ ಹೋರಾಟಗಾರರಿಗೆ ಸಂಬAಧಿಸಿದ ಭಾವಚಿತ್ರ ಮತ್ತು ಹೋರಾಟದ ವಿವರಗಳನ್ನು ಒಳಗೊಂಡ ಪ್ಲಕ್ಸ್ ಅಥವಾ ಪೋಟೋ ಆಳವಡಿಸುವ ಮೂಲಕ ವೀರಸೌಧವನ್ನು ಸ್ವಾತಂತ್ರ ಹೋರಾಟಗಾರರ ಚಿರಸ್ಮರಣಿಯ ಕೇಂದ್ರವಾಗಿ ರೂಪಿಸಬೇಕೆಂದು ಆಶಾ ಪ್ರಸನ್ನಕುಮಾರ್ ತಿಳಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ ನಮಗೆ ಹಿರಿಯರು ನೀಡಿದ ಭಿಕ್ಷೆ. ಅನೇಕ ಮಹನೀಯರ ತ್ಯಾಗ ಬಲಿದಾನದ ಮೂಲಕ ನಮಗೆ ಈ ಸ್ವಾತಂತ್ರ ಲಭಿಸಿದೆ. ಇವರುಗಳನ್ನು ಸ್ಮರಿಸುವುದು ನಮ್ಮಗಳ ಅದ್ಯ ಕರ್ತವ್ಯವಾಗಿದೆ. ಹೇಗೆ ಹಿರಿಯರ ಹಬ್ಬವನ್ನು ಕುಟುಂಬದ ಹಿರಿಯರ ನೆನಪಿಗಾಗಿ ಮಾಡುತ್ತೇವೆಯೋ ಅದೇ ರೀತಿ, ಸ್ವಾತಂತ್ರ ಹೋರಾಟಗಾರರ ಸಂಸ್ಮರಣೆ ಕಾರ್ಯಕ್ರಮ ಜರುಗಬೇಕಿದೆ.ಅಲ್ಲದೆ ಕಷ್ಟಪಟ್ಟ ಕಟ್ಟಿದ ವೀರಸೌಧದ ಒಂದು ತಿಂಗಳ ಬಾಡಿಗೆ 70 ಸಾವಿರ ರೂಗಳು ಜಿಲ್ಲಾಡಳಿತಕ್ಕೆ ಸೇರುತ್ತದೆ.ಆದರೆ ಕಟ್ಟಡ ಮಾತ್ರ ಹಾಳು ಸುರಿಯುತ್ತಿದೆ. ಕಟ್ಟಡದ ಬಾಡಿಗೆಯಿಂದ ಬರುವ ಹಣದಲ್ಲಿ ಸ್ವಾತಂತ್ರ ಹೋರಾಟಗಾರರ ಮ್ಯೂಸಿಯಂ ಆರಂಭಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ.ಜಿಲ್ಲೆಯ ಸ್ವಾತಂತ್ರ ಹೋರಾಟಗಾರರ ಬಗ್ಗೆ ಕಿರು ಪುಸ್ತಕ ಮುಂದ್ರಣದ ಜೊತೆಗೆ,ಸ್ವಾತಂತ್ರ ಹೋರಾಟಗಾರರ ಕುಟುಂಬದವರ ವೈದ್ಯಕೀಯ ವೆಚ್ಚ, ಇನ್ನಿತರ ಖರ್ಚುಗಳಿಗೆ ಬಳಕೆ ಮಾಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕೆಂದರು.

ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಬಸವಯ್ಯ ಮಾತನಾಡಿ,ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದವರನ್ನು ಸ್ಮರಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಜಿಲ್ಲೆಯ 34 ಜನ ಸ್ವಾತಂತ್ರ ಹೋರಾಟಗಾರರಲ್ಲಿ ಕೆಲವರ ಪೋಟೋಗಳು ಮಾತ್ರ ನಮಗೆ ಲಭ್ಯವಾಗಿವೆ. ಅವುಗಳನ್ನು ಇಲ್ಲಿ ಆನಾವರಣ ಮಾಡಲಾಗಿದೆ. ಉಳಿದವುಗಳನ್ನು ಸಂಗ್ರಹಿಸಿ ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ಶ್ರಮಿಸುವುದಾಗಿ ತಿಳಿಸಿದರು.

ಗಾಂಧೀಯ ಕುರಿತು ಮಾತನಾಡಿದ ಗಾಂಧಿ ಪ್ರತಿಷ್ಠಾನದ ಪ್ರೊ.ಜಿ.ಬಿ.ಶಿವರಾಜು, ಇಂದಿನ ಯುವ ಪೀಳಿಗೆಗೆ ಗಾಂಧಿ ಒಂದು ತಮಾಸೆಯ ವ್ಯಕ್ತಿಯಾಗಿರುವುದು ವಿಷಾದದ ಸಂಗತಿಯಾಗಿದೆ.ನನ್ನ ಜೀವನವೇ ಸಂದೇಶ ಎಂದು ಅತ್ಯಂತ ಸರಳವಾಗಿ ಬದುಕಿ, ತಾನು ನಂಬಿದ್ದ ಅಹಿಂಸಾ ತತ್ವದ ಮೂಲಕವೇ ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಲು ಹಗಲಿರುಳು ಶ್ರಮಿಸಿದ ಮಹಾನ್ ಸಂತ. ಇಂತಹ ವ್ಯಕ್ತಿಯನ್ನು ಸಮಗ್ರವಾಗಿ ಯುವಜನತೆಗೆ ಪರಿಚಯಿಸುವ ಮೂಲಕ ಸ್ವಾತಂತ್ರದ ಹಿಂದಿನ ತ್ಯಾಗ, ಬಲಿದಾನದ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಜಿಲ್ಲೆಯ ಸ್ವಾತಂತ್ರ ಹೋರಾಟಗಾರರ ಕುರಿತು ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿದರು. ವೇದಿಕೆಯಲ್ಲಿ ಪ್ರೊ.ಚಂದ್ರಣ್ಣ, ಹರೀಶ್, ಅಶೋಕ್ ರಾಜವರ್ಧನ್,ಹಿರಿಯ ಸ್ವಾತಂತ್ರ ಹೋರಾಟಗಾರರಾದ ಟಿ.ಆರ್.ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)