ತುಮಕೂರು: ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ  ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ತುಮಕೂರು ಜಿಲ್ಲಾ ಬಾಲಕ-ಬಾಲಕಿಯರ ಕಬಡ್ಡಿ ತಂಡಗಳ ಆಯ್ಕೆ ಪ್ರಕ್ರಿಯೆಯನ್ನು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನ. 15 ರಂದು ಬೆಳಿಗ್ಗೆ 8.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಆಸಕ್ತ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸುವಂತೆ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಕೃಷ್ಣೇಗೌಡ ಪ್ರಕಟಣೆಯಲ್ಲ ಕೋರಿದ್ದಾರೆ.

ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ  ಕೋಲಾರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಜೂನಿಯರ್ ಕಬಡ್ಡಿ ಚಾಂಪಿಯನ್‌ ಶಿಪ್-2024ನ್ನು ಕೋಲಾರದ ಬೈರೇಗೌಡ ನಗರ ಮೈದಾನದಲ್ಲಿ ನ. 22 ರಿಂದ 24 ರವರೆಗೆ ಆಯೋಜಿಸಲಾಗಿದೆ. ಈ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲಿಚ್ಚಿಸುವ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನ. 15 ರಂದು ನಡೆಯಲಿದೆ.

ಈ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲಿಚ್ಚಿಸುವ ಬಾಲಕ ಕ್ರೀಡಾಪಟುಗಳು 70 ಕೆ.ಜಿ. ಮೀರಬಾರದು, 20 ವರ್ಷ (31-01-2025ಕ್ಕೆ) ಮೀರಿರಬಾರದು. ಬಾಲಕಿಯರು 65 ಕೆ.ಜಿ ಮೀರಬಾರದು 20 ವರ್ಷ (31-01-2025ಕ್ಕೆ) ಮೀರಿರಬಾರದು.

ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕ್ರೀ‌ಡಾಪಟುಗಳಿಗೆ ಮ್ಯಾಟ್ ಮೇಲೆ ನಡೆಯುವ ಪ್ರಯುಕ್ತ ಮ್ಯಾಟ್-ಶೂ, ಸಮವಸ್ತ್ರ ಕಡ್ಡಾಯ. ಜನ್ಮದಿನಾಂಕ ದೃಢೀಕರಣ (ಎಸ್ಸೆಸ್ಸೆಲ್ಸಿ, ಮಾರ್ಕ್ಸ್ ಕಾರ್ಡ್) ಕಡ್ಡಾಯವಾಗಿ ತರುವುದು.

ಹೆಚ್ಚಿನ ಮಾಹಿತಿಗಾಗಿ ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕೆ.ಆರ್. ರವೀಂದ್ರ (ಮೊ: 9448314137), ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ ಜಿ.ಹೆಚ್. (ಮೊ: 9448661083, 9380872294) ಹಾಗೂ ಖಜಾಂಚಿ ಟಿ.ಜಿ. ನಟರಾಜು (ಮೊ: 9980040439) ರವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

(Visited 1 times, 1 visits today)