ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ಹಾಗೂ ತುಮಕೂರು ಜಿಲ್ಲಾ ಕುಳುವ ಮಹಾಸಂಘ (ರಿ.)ವತಿಯಿಂದ ನವೆಂಬರ್ 17 ರ ಭಾನುವಾರ ಬೆಳಗ್ಗೆ 10:30 ಗಂಟೆಗೆ ಕನ್ನಡ ಭವನದಲ್ಲಿ ನಿಜ ನುಲಿಚಂದಯ್ಯ ಅವರ 917 ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಕುಳುವ ಮಹಾ ಸಂಘದ ಜಿಲ್ಲಾಧ್ಯಕ್ಷ ಲೋಕೇಶ್ ಸ್ವಾಮಿ ತಿಳಿಸಿದ್ದಾರೆ.
ಕರ್ನಾಟದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ಸಾಮಾಜಿಕ ಪರಿವರ್ತನಾ ಕ್ರಾಂತಿಯು 12ನೇ ಶತಮಾನದಲ್ಲಿ ಬಸವಾದಿ ಪ್ರಮಥರಿಂದ ಕಾಯಕತ್ವದ ಆಧಾರದಲ್ಲಿ ಜಾತಿ, ಲಿಂಗ, ಧರ್ಮವೆಂಬ ಬೇಧಭಾವವಿಲ್ಲದೆ ಶರಣರ ದಾಸೋಹದ ಮೂಲಕ ಕಾಯಕಗೈದವರುಶರಣ ಶ್ರೀ ನುಲಿಯ ಚಂದಯ್ಯ. ಇವರು ಬಸವಣ್ಣನವರ ಸಮಕಾಲೀನರಾಗಿದ್ದು, ಅವರ ಜೊತೆ ಕೈಜೋಡಿಸಿದ ಪ್ರಮುಖ ಶರಣರಲ್ಲಿ ಇವರು ಒಬ್ಬರಾಗಿರುತ್ತಾರೆ. ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿರುವ ಇವರು ಹುಟ್ಟಿದ್ದು ವಿಜಾಪುರ ಜಿಲ್ಲೆ ಶವಣಗಿ, ಮುಂದೆ ಕಲ್ಯಾಣಕ್ಕೆ ಬಂದು, ಕಾಯಕ ದಾಸೋಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಯುನ್ನತಿ ಕಂಡುಕೊAಡರು. ಮೆದೆ ಹುಲ್ಲಿನ ಹಗ್ಗ ಹೊಸೆಯುವ ಕಾಯಕ ಮಾಡಿ, ಅದರ ಮಾರಾಟದಿಂದ ಬಂದ ಆದಾಯದಿಂದ ಗುರು ಲಿಂಗ ಜಂಗಮ ಸೇವೆಗೆ ಬಳಸುತ್ತಿದ್ದರು. ಚಂದೇಶ್ವರಲಿAಗ ಎಂಬ ಅಂಕಿತನಾಮದಲ್ಲಿ ಅವರು ರಚಿಸಿದ 46 ವಚನಗಳು ಲಭ್ಯವಾಗಿವೆ. ಚಂದಯ್ಯನವರದ್ದು ಬಹುಮುಖ ವ್ಯಕ್ತಿತ್ವವಾಗಿದ್ದು, ಇವರ ನಡೆ ನುಡಿ ಕಾಯಕನಿಷ್ಠೆ ಪುರಾಣ ಕಥೆಗಳನ್ನು ವರ್ಣಿತವಾಗಿವೆ.ಇಂತಹ ನಿಜಶರಣರು ಕುಳುವ ಸಮುದಾಯಕ್ಕೆ ಸೇರಿದವರೆಂಬುದು ಹೆಮ್ಮೆಯ ವಿಚಾರವಾಗಿದೆ. ಇವರ ಜಯಂತಿಯನ್ನು ಸರಕಾರವೇ ಪ್ರತಿವರ್ಷದ ನೂಲು ಹುಣ್ಣಿಮೆ ದಿನದಂದು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಅವಕಾಶ ಕಲ್ಪಿಸಿದೆ.ಇದಕ್ಕಾಗಿ ಸರಕಾರಕ್ಕೆ ಕುಳುವ ಮಹಾಸಭಾ ಆಭಿನಂದನೆ ಸಲ್ಲಿಸುತ್ತದೆ.ಜಯಂತಿ ಅಂಗವಾಗಿ ನಗರದ ಬಿ.ಜಿ.ಎಸ್.ವೃತ್ತದಿಂದ ಎಂ.ಜಿ.ರಸ್ತೆ,ಹೊರಪೇಟೆ ಮುಖ್ಯರಸ್ತೆಯ ಮೂಲಕ ಕನ್ಬಡಭವನದವರೆಗೆ ಬೆಳಗ್ಗೆ 9 ಗಂಟೆಗೆ ನುಲಿಚಂದಯ್ಯ ಅವರ ಭಾವಚಿತ್ರದ ಮೆರವಣಿಗೆಯನ್ನು ಹಮ್ಮಿಕೊಳ್ಳ ಲಾಗಿದೆ.ಕುಳುವ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಜಿಲ್ಲಾ ಅಧ್ಯಕ್ಷ ಲೋಕೇಶ್ ಸ್ವಾಮಿ ಮನವಿ ಮಾಡಿದ್ದಾರೆ.
ನವೆಂಬರ್ 17ರ ಭಾನುವಾರ ನಡೆಯುವ ನುಲಿಚಂದಯ್ಯ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿರೇಮಠಾಧ್ಯಕ್ಷರಾದ ಡಾ.ಶ್ರೀಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.ಕೇಂದ್ರ ಸರಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರ ಘನ ಉಪಸ್ಥಿತಿಯಲ್ಲಿ ಗೃಹ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಸಹಕಾರ ಮತ್ತು ಹಾಸನ ಜಿಲ್ಲಾ ಉಸ್ಯುವಾರಿ ಸಚಿವರಾದ ಕೆ.ಎನ್.ರಾಜಣ್ಣ,ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗು ಶಿರಾ ಶಾಸಕರಾದ ಟಿ.ಬಿ.ಜಯಚಂದ್ರ,ಕೆಎಸ್‌ಆರ್‌ಟಿಸಿ ಅಧ್ಯಕರು ಹಾಗು ಗುಬ್ಬಿ ಶಾಸಕರಾದ ಎಸ.ಆರ್.ಶ್ರೀನಿವಾಸ ಅವರುಗಳು ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕರಾದ ಜಿ.ಬಿ.ಜೋತಿಗಣೇಶ್ ವಹಿಸುವರು.ವಿಶೇಷ ಆಹ್ವಾನಿತರಾಗಿ ಜಿಲ್ಲೆಯ ಎಲ್ಲಾಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು ಭಾಗವಹಿಸಲಿದ್ದಾರೆ.ಅಲ್ಲದೆ ವಿವಿಧ ಪಕ್ಷಗಳ ಮುಖಂಡರುಗಳು, ಕುಳುವ ಮಹಾಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಅಖಿಲ ಕರ್ನಾಟಕ ಕುಳುವ ಮಹಾಸಂಘ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಅವರು ನುಲಿಚಂದಯ್ಯ ಅವರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕುಳುವ ಸಮಾಜದ ಏಳಿಗೆಗಾಗಿ ದುಡಿದ ಐವರು ಹಿರಿಯರಿಗೆ ನುಲಿಚಂದಯ್ಯ ಜಿಲ್ಲಾ ಮಟ್ಟದ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಂಧುಗಳು ಸಾರ್ವಜನಿಕರು ಆಗಮಿಸಿ ಯಶಸ್ವಿಗೊಳಿಸುವಂತೆ ತುಮಕೂರು ಜಿಲ್ಲಾ ಕುಳುವ ಮಹಾಸಂಘ ಅಧ್ಯಕ್ಷ ಲೋಕೇಶ್ ಸ್ವಾಮಿ ಮನವಿ ಮಾಡಿದ್ದಾರೆ.