ತುಮಕೂರು: ಕಾಲೇಜಿನ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುವಾಗಲೇ ಉದ್ಯಮಿಯಾಗಲು ಗುರಿಯಿಟ್ಟುಕೊಂಡು ಸರ್ಕಾರದಿಂದ ಸಿಗುವ ಅನುದಾನಗಳನ್ನು ಬಳಸಿಕೊಂಡು ನಿಮ್ಮ ಯೋಜನೆಗಳು ಮತ್ತು ಆವಿಷ್ಕಾರಗಳಿಗೆ ಮಾಡಿದಾಗ ಮಾತ್ರ ದೊಡ್ಡ ಉದ್ಯಮಿಯಾಗಬಹುದು ಎಂದು ಕರ್ನಾಟಕ ಸರ್ಕಾರದ ಖಜಾನೆ ಇಲಾಖೆಯ ತಾಂತ್ರಿಕ ಸಮಾಲೋಚಕರಾದ ಚೈತನ್ಯ ನಾಯಕ್ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟಾçನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದ ವತಿಯಿಂದ ಇಂದು ಹಮ್ಮಿಕೊಂಡಿದ್ದ “ಬ್ರಾಡ್ ಕಾಸ್ಟ್-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವಾಗಲೇ ಪ್ರಾಜೆಕ್ಟ÷್ಗಳನ್ನು ಮಾಡಲು ಮುಂದಾಗಿ, ನಾಲ್ಕು ವರ್ಷ ಪೂರ್ಣಗೊಳಿಸಿದ ನಂತರ ಉದ್ಯೋಗಿಗಲಾಗುತ್ತೇನೆ ಎಂದು ಕಾಲಹರಣ ಮಾಡಬೇಡಿ ಎಂದು ಚೈತನ್ಯ ನಾಯಕ್ ಕಿವಿ ಮಾತು ಹೇಳಿದರು.
ಪ್ರಾಂಶುಪಾಲರಾದ ಡಾ. ಎಂಎಸ್ ರವಿಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್ನಿಂದಲೇ ಪ್ರಾಜೆಕ್ಟ್ಗಳನ್ನು ಹೊಸ ಐಡಿಯಾಗಳೊಂದಿಗೆ ಪ್ರಾರಂಭ ಮಾಡಬೇಕು. ಆಗ ಮಾತ್ರ ಆರನೇ ಸೆಮಿಸ್ಟರ್ನ ಕೊನೆಯಲ್ಲಿ ಉತ್ತಮ ಪ್ರಾಜೆಕ್ಟ್ ಗಳು ಹೊರಬರಲಿವೆ. ಹಲವಾರು ರೀತಿಯ ಸ್ಪರ್ಧೆಗಳಿದ್ದು, ನಿಮ್ಮ ವ್ಯಕ್ತಿತ್ವ ಬರವಣಿಗೆ ಶೈಲಿ, ಕ್ರೀಡೆಗಳಲ್ಲಿ ಬೆಳವಣಿಗೆಯನ್ನು ಕಾಣಬೇಕು. ನಿಮ್ಮ ಉದ್ದೇಶವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಲೆಕ್ಟಾçನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥರಾದ ಡಾ. ಸವಿತಾ ಡಿ ತೊರವಿ ಪ್ರಾಧ್ಯಾಪಕರ ಸಂಯೋಜಕರು ಡಾ. ಜೀವಿತ್ ಎಸ್.ಎಚ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು