ಮಧುಗಿರಿ: ದೂರವಾಣಿಯಿಂದ ವಿದ್ಯಾರ್ಥಿಗಳ ಜೀವನ ವಿಕಾಸವಾಗಬೇಕೆ ಹೊರತು ವಿಕಾರವಾಗಬಾರದು, ಎಂದು ಕುಂಚಿಟಿಗ ಮಹಾ ಸಂಸ್ಥಾನ ಮಠ ಶ್ರೀಕ್ಷೇತ್ರ ಹೊಸದುರ್ಗ ಶ್ರೀ ಶ್ರೀ ಶಾಂತವೀರ ಮಹಾ ಸ್ವಾಮೀಜಿ ತಿಳಿಸಿದ್ದಾರೆ. ಕೊರಟಗೆರೆ ತಾಲೂಕಿನ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನ ಮಠದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇರಕಸಂದ್ರ ಕಾಲೋನಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು* ದೂರಸಂಪರ್ಕ ಅನೇಕ ಸಾಂಸಾರಿಕ ತೊಡಕುಗಳಿಗೆ ಕಾರಣವಾಗಿದೆ ಶಿಕ್ಷಣವೆಂದರೆ ಕೇವಲ ಉದ್ಯೋಗಕ್ಕಾಗಿ ಅಲ್ಲ ಶಿಕ್ಷಣವನ್ನು ಸಂಸ್ಕಾರಕ್ಕಾಗಿ ಸನ್ನಡತೆಗಾಗಿ ಸದಾಚಾರಕ್ಕಾಗಿ ಸದುವಿನಯಕ್ಕಾಗಿ ಪಡೆದಾಗ ಶಿಕ್ಷಣಕ್ಕೆ ಮೌಲ್ಯ ಸಿಗುತ್ತದೆ ಕೇವಲ ಅಂಕಗಳಿಕೆಗಾಗಿ ಶಿಕ್ಷಣಕ್ಕೆ ಮಾರುಹೋಗಿರುವ ಇಂದಿನ ವಿದ್ಯಾರ್ಥಿಗಳು ಮತ್ತು ಪೋಷಕರು ನೈತಿಕ ಶಿಕ್ಷಣದಿಂದ ದೂರಸರಿತಿರುವುದು ಆತಂಕಕಾರಿ ಬೆಳವಣಿಗೆ ಗುರುಕುಲ ಮಾದರಿ ಸಾಮಾಜಿಕ ಬದ್ಧತೆ ಜನಪರ ಜೀವ ಪರ ಸೌಹಾರ್ದ ಸಹಬಾಳ್ವೆಯ ಶ್ರೇಷ್ಠ ಶಿಕ್ಷಣದ ಅಗತ್ಯತೆ ಇಂದು ಹೆಚ್ಚಾಗಿ ಬೇಕಾಗಿದೆ ರಾಷ್ಟ್ರೀಯ ಸೇವ ಯೋಜನೆಯ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ರೂಡಿಸಿಕೊಂಡು ಬದುಕನ್ನು ಶಿಸ್ತಿನ ಸುಭದ್ರ ಅಡಿಪಾಯದೊಂದಿಗೆ ಜೀವನ ನಡೆಸಲು ರಾಷ್ಟ್ರೀಯ ಯೋಜನೆ ಅತ್ಯಂತ ಅವಶ್ಯಕವಾಗಿದೆ ಗ್ರಾಮೀಣ ಬದುಕಿನ ಜೀವನ ಶೈಲಿಯ ಅಧ್ಯಯನ ಬಡತನದ ಅರಿವು ಸ್ವಚ್ಛತೆಯ ಶಿಸ್ತಿನ ಅರಿವು ರಾಷ್ಟ್ರೀಯ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಲಭಿಸುತ್ತದೆ ಹಾಗಾಗಿ ಎಲ್ಲ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಸಮಾಜಮುಖಿಯಾಗಿ ಆಲೋಚಿಸುವ ಮೂಲಕ ಆದರ್ಶ ಬದುಕನ್ನು ರೂಡಿಸಿಕೊಳ್ಳಲು ಮತ್ತು ಅಳವಡಿಸಿಕೊಳ್ಳಲು ಒಳ್ಳೆಯ ಸಾಹಿತ್ಯಗಳನ್ನ ಓದುವ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಆಶೀರ್ವಚನ ನೀಡಿದರು.
(Visited 1 times, 1 visits today)