ತುಮಕೂರು: ಮಾದಕ ವ್ಯಸನ ಇಂದು ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಿದೆ. ಈ ವ್ಯಸನದಿಂದ ಸಮಾಜವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಸಿದ್ದಾರ್ಥ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್‌ರವಿಪ್ರಕಾಶ್ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾನಿಲಯದಲ್ಲಿ ಬಯೋ ಮೆಡಿಕಲ್ ಇಂಜಿನಿಯರಿAಗ್ ವಿಭಾಗದಿಂದ ಶನಿವಾರದಂದು ಆಯೋಜಿಸಿದ್ದ ‘ಬಯೋ ಮೆಡ್ ಸ್ಪಾರ್ಕ2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಹೆಚ್ಚಾಗಿ ಮಕ್ಕಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದರಿಂದಾಗಿ ಸಮಾಜದ ಆರೋಗ್ಯ ಹಾಳಾಗುತ್ತಿದೆ. ಹಲವಾರು ಪೋಷಕರಿಗೆ ಮಾದಕ ವ್ಯಸನದ ಸಾಮಾಜಿಕ ಪಿಡುಕು ಬಹುದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ. ಹೀಗೆ ಮುಂದುವರಿದರೆ ಇಡೀ ಒಂದು ಯುವ ತಲೆಮಾರು ನಾಶವಾಗುವ ಭೀತಿಯಿದೆ. ಹಾಗಾಗಿ ನಾವೆಲ್ಲರೂ ಈ ಮಾದಕ ವ್ಯಸನದ ವಿರುದ್ಧ ಹೋರಾಡಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಡಾ.ಎಂಎಸ್‌ರವಿಪ್ರಕಾಶ್ ಅವರು ಕರೆ ನೀಡಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಕೆವಿಎಂ ಮೆಡ್‌ಟೆಕ್‌ನ ಸಂಸ್ಥಾಪಕ ನಿರ್ದೇಶಕರಾದ ವೈಶ್ಣಮಿ ಕೃಷ್ಣನ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಅಭ್ಯಾಸವನ್ನು ರೂಢಿಸಿಕೊಂಡು ನೆಮ್ಮದಿ ಜೀವನ ನಡೆಸಬೇಕು. ಉತ್ತಮ ಸಾಮಾಜಿಕ ಜೀವನ ನಡೆಸಲು ಶೈಕ್ಷಣಿಕ ಸಾಧನೆಯನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ರಾಜು ಎ.ಎಸ್ ಸಿಬ್ಬಂದಿ ಸಂಯೋಜಕರಾದ ಡಾ. ಪೂರ್ಣಿಮ, ಪ್ರೊ. ಲತಾ.ಕೆ ವಿದ್ಯಾರ್ಥಿ ಸಂಯೋಜಕರಾದ ಜೀವನ್‌ಎಂ.ಎಸ್, ರಕ್ಷಿತ ಮತ್ತು ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.