ತುಮಕೂರು: ಬಡವರು,ದೀನ ದಲಿತರು, ಶೋಷಿತರ ಪರವಾಗಿ ಸದಾ ಮಿಡಿಯುತಿದ್ದ ಮಾಜಿ ಪ್ರಧಾನ ಮಂತ್ರಿಗಳಾದ ಇಂದಿರಾಗಾAಧಿ ಅವರು,ಈ ದೇಶ ಕಂಡು ಅಪ್ರತಿಮ ರಾಜಕಾರಣಿ, ಆಡಳಿತಗಾರರಾಗಿದ್ದರು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರು ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಮೊದಲ ಪ್ರಧಾನಿ ನೆಹರು ಅವರ ಸುಪುತ್ರಿಯಾಗಿ,ಸುಮಾರು 17 ವರ್ಷಗಳ ಕಾಲ ಭಾರತದ ಚುಕ್ಕಾಣಿ ಹಿಡಿದು, ತಮ್ಮ ಗಟ್ಟಿ ನಿರ್ಧಾರಗಳಿಂದ ಉಕ್ಕಿನ ಮಹಿಳೆ ಎಂಬ ಬಿರುದು ಪಡೆದರು.ಅವರು ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮ ಹಾಗೂ,ಬ್ಯಾಂಕುಗಳ, ಸಾರಿಗೆ ರಾಷ್ಟಿçÃಕರಣ ಅತಿ ಮಹತ್ವದ ವಿಚಾರಗಳಾಗಿವೆ ಎಂದರು.
ಕಾAಗ್ರೆಸ್ ಪಕ್ಷ ಭಾರತವಲ್ಲದೆ, ನೆರೆ ಹೊರೆಯ ರಾಷ್ಟçಗಳು ಸುಭೀಕ್ಷೆವಾಗಿರಬೇಕು ಎಂದು ಭಾವಿಸಿದ್ದರು.ಆದರೆ ಫಲವಾಗಿ ಅಮೃತಸರದ ಗೋಲ್ಡನ್‌ಟೆಂಪಲ್ ವಿವಾದ ಹಾಗೂ ಶ್ರೀಲಂಕಾಕ್ಕೆ ಭಾರತೀಯ ಶಾಂತಿ ಪಾಲನಾ ಪಡೆಯನ್ನು ಕಳುಹಿಸಿದ್ದ ಕ್ಕಾಗಿ ಇಂದಿರಾಗಾAಧಿ ಮತ್ತು ರಾಜೀವ್‌ಗಾಂಧಿ ಹುತಾತ್ಮರಾದರು.ಆದರೆ ಭಾರತೀಯ ಜನತಾ ಪಾರ್ಟಿಯ ನಾಯಕರು ದೇಶದ ಇತಿಹಾಸ ಗೊತ್ತಿಲ್ಲದೆ,ನೆಹರು ಕುಟುಂಬವನ್ನು ಟೀಕಿಸುತ್ತಾರೆ.ಆದರೆ ಕಳೆದ ಒಂದುವರೆ ವರ್ಷದಿಂದಲೂ ನಮ್ಮದೇ ಭಾಗವಾಗಿರುವ ಮಣಿಪುರ ಹೊತ್ತಿ ಉರಿಯುತ್ತಿದ್ದರೂ,ಪ್ರಪಂಚ ಸುತ್ತುವ ಪ್ರಧಾನಿ ಮೋದಿ ಅತ್ತ ತಿರುಗಿಯೂ ನೋಡಿಲ್ಲ.ಸ್ನೆಹಿತರ ಉದ್ದಾರಕ್ಕಾಗಿ ವಿದೇಶ ತಿರುಗುವ ಮೋದಿಗೆ,ಮಣಿಪುರದ ಜನರಿಗೆ ಕನಿಷ್ಠ ಸಾಂತ್ವಾನ ಹೇಳಲು ಸಮಯವಿಲ್ಲ.ಇದು ಈಶ್ಯಾನ ರಾಜ್ಯಗಳ ಜನರ ದುರ್ದೈವ ಎಂದು ಚಂದ್ರಶೇಖರಗೌಡ ನುಡಿದರು.
ಡಿಸಿಸಿ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ,ಇಂದು ದೇಶ ಆಘೋಷಿತ ತುರ್ತು ಪರಿಸ್ಥಿತಿ ಇದೆ. ಇಂದಿನ ಎಲ್ಲಾ ಮುಖ್ಯವಾಹಿನಿಯ ಪತ್ರಿಕೆಗಳನ್ನು ನೋಡಿದರೆ, ಸುಮಾರು 17 ವರ್ಷಗಳ ಕಾಲ ದೇಶವನ್ನು ಮುನ್ನೆಡೆಸಿದ ಉಕ್ಕಿನ ಮಹಿಳೆ ಇಂದಿರಾಗಾAಧಿ ಅವರ ಬಗ್ಗೆ ಒಂದೇ ಒಂದು ಪದವಿಲ್ಲ.ಜನಮಾನಸದಿಂದ ಅವರನ್ನು ಮರೆಸಲು ಎಲ್ಲಾ ರೀತಿಯ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಇದನ್ನು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಇಂದು ಇಂದಿರಾಗಾAಧಿ ಅವರ 107 ವರ್ಷಗಳ ಜನ್ಮ ಜಯಂತಿ. ಲಾಲಾ ಬಹುದ್ದೂರಶಾಸ್ತಿçಯವರ ಅಕಾಲಿಕ ಮರಣದಿಂದ ತೆರವಾದ ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡವರು.ಅAದಿನ ವಿರೋಧಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಉಕ್ಕಿನ ಮಹಿಳೆ ಎಂದು ಕರೆಯಿಸಿಕೊಂಡವರು.ಇAತಹವರನ್ನು ದೇಶದ ಜನರು ಮರೆಯಲು ಸಾಧ್ಯವೇ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾರಾಜಣ್ಣ ವಹಿಸಿದ್ದರು.ಮಹಿಳಾ ಮುಖಂಡರಾದ ಸುಜಾತ, ವರಲಕ್ಷಿö್ಮ, ವಿಜಯಲಕ್ಷಿö್ಮ, ಸೌಭಾಗ್ಯ,ಗೀತಮ್ಮ ಸೇರಿದಂತೆ 10ಕ್ಕೂ ಹೆಚ್ಚು ಮಹಿಳಾ ಮುಖಂಡರನ್ನು ಗೌರವಿಸಲಾಯಿತು.ಮುಖಂಡರಾದ ಲೋಕೇಶಸ್ವಾಮಿ, ಸೈಯದ್ ಪೀರ್,ನಯಾಜ್ ಅಹಮದ್, ಅತೀಕ್ ಅಹಮದ್, ಸಿದ್ದಲಿಂಗೇಗೌಡ,ಹೆಬ್ಬೂರು ಶ್ರೀನಿವಾಸಮೂರ್ತಿ, ಲಿಂಗರಾಜು, ರೇವಣ್ಣ ಸಿದ್ದಯ್ಯ, ಸೇವಾದಳದ ಮುಖಂಡರು ಉಪಸ್ಥಿತರಿದ್ದರು.

(Visited 1 times, 1 visits today)