ತುಮಕೂರು: ಸ್ವಾತAತ್ರö್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ವಕೀಲರ ಸಾಧನೆ ಅವಿಸ್ಮರಣೀಯ,ವಕೀಲರು ರಾಜಕೀಯ,ಸಹಕಾರ,ವಕೀಲ ವೃತ್ತಿ,ಸಮಾಜಸೇವೆ,ಧಾರ್ಮಿಕ ವಲಯ ಹೀಗೆ ನಾನಾ ವಿಭಾಗಗಳಲ್ಲಿ ವಕೀಲರು ಸಮಾಜಮುಖಿಯಾಗಿ ಕೆಲಸ ಮಾಡಿ ಸಮಾಜದ ಅಭ್ಯುದಯಕ್ಕಾಗಿ ದುಡಿದಿದ್ದಾರೆ,ಮುಂದೆಯೂ ವಕೀಲರು ನೊಂದವರ,ದೀನ-ದಲಿತರ,ಬಡವರ ನೋವಿಗೆ ಕಣ್ಣೀರಿಗೆ ಧ್ವನಿಯಾಗಿ ಕೆಲಸ ಮಾಡಲಿ ಎಂದು ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಹೇಳಿದರು.
ಅವರು ಇಂದು ತುಮಕೂರು ಜಿಲ್ಲಾ ವಕೀಲರ ಸಂಘದಲ್ಲಿ ರಾಜ್ಯೋತ್ಸವ ಪ್ರಶಸ್ತಿ,ಕನಕಶ್ರೀ ಪ್ರಶಸ್ತಿ,ಸಹಕಾರರತ್ನ ಪ್ರಶಸ್ತಿ ಪಡೆದ ವಕೀಲರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನ ಉಪಾಧ್ಯಕ್ಷರು ಮತ್ತು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹೆಬ್ಬಾಕಮಲ್ಲಿಕಾರ್ಜುನಯ್ಯನವರು ನನಗೆ ಎಲ್ಲಾ ಅಭಿನಂದನೆಗಳಿಗಿAತ ವಕೀಲರ ಸಂಘ ನೀಡಿದ ಸನ್ಮಾನ ದೊಡ್ಡದು,ನಾನು ಸಹಕಾರ ರಂಗದಲ್ಲಿ,ಸಮಾಜಸೇವೆಯಲ್ಲಿದ್ದು ಕಳೆದ 30 ವರ್ಷಗಳಿಂದ ಸಮಾಜದ ಅಭ್ಯುದಯಕ್ಕಾಗಿ ದುಡಿಯುತ್ತಿದ್ದೇವೆ,ಮುಂದೆಯೂ ಸಮಾಜಕ್ಕಾಗಿ ಸಹಕಾರ ರಂಗದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಿ ಬಡ ಮತ್ತು ಮಧ್ಯಮ ವರ್ಗದವರಿಗೋಸ್ಕರ ಹಲವಾರು ಕಾರ್ಯಕ್ರಮ ರೂಪಿಸಿ ಅವರಿಗೆ ಆರ್ಥಿಕ ಚೈತನ್ಯ ತುಂಬಲು ಶ್ರಮಿಸುತ್ತೇನೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಕನಕಶ್ರೀ ಪ್ರಶಸ್ತಿ ಸ್ವೀಕರಿಸಿದ ಆರ್.ತಿಪ್ಪೇಸ್ವಾಮಿ ರವರು ಮಾತನಾಡುತ್ತಾ ಸಂಘ ಈ ಹಿಂದೆ ಯಾರಿಗೂ ಇಂತಹ ಗೌರವ ನೀಡಿಲ್ಲ ನಮ್ಮ ಸಾಧನೆಯನ್ನು ಗುರುತಿಸಿ ಜಿಲ್ಲಾಡಳಿತ ನಿನ್ನೆ ನಡೆದ ಕನಕದಾಸರ ಜಯಂತಿಯಲ್ಲಿ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಇಂದು ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ವೈಯಕ್ತಿಕವಾಗಿ 5ಜನ ವಕೀಲರಿಗೆ ಸನ್ಮಾನ ಕಾರ್ಯಕ್ರಮ ಮಾಡಿರುವುದು ಮುಂದಕ್ಕೆ ಎಲ್ಲರಿಗೂ ಮಾದರಿ ಎಂದರು.
ಪೋಕ್ಸೋ ಜಿಲ್ಲಾ ನ್ಯಾಯಾಲಯದ ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀಮತಿ ಕೆ.ಎಸ್.ಆಶಾರವರು ಮಾತನಾಡಿ ನಾನು ಎ.ಪಿ.ಪಿ.ಆದ ನಂತರ 50 ಪ್ರಕರಣಗಳಲ್ಲಿ ವಾದ ಮಂಡಿಸಿ ಆರೋಪಿಗಳಿಗೆ ಜೀವಾವಧಿ ಮತ್ತು ಇತರೆ ಶಿಕ್ಷೆ ಕೊಡಿಸಿದ್ದೇನೆ,ಹಳ್ಳಿ ಹಳ್ಳಿಗೆ ಹೋಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಕಾನೂನು ಅರಿವು ಕಾರ್ಯಕ್ರಮ ಮಾಡಿ ಎಲ್ಲರಿಗೂ ಕಾನೂನು ಜಾಗೃತಿ ಮೂಡಿಸುತ್ತಿದ್ದೇನೆ ಇದನ್ನು ಗಮನಿಸಿ ಜಿಲ್ಲಾಡಳಿತ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಇಂದು ಜಿಲ್ಲಾ ವಕೀಲರ ಸಂಘ ನನ್ನನ್ನು ಗುರುತಿಸಿ ಸನ್ಮಾನ ಮಾಡಿರುವುದು ನಮಗೆ ಮತ್ತಷ್ಟು ಹುರುಪು ಬಂದು ಜವಾಬ್ದಾರಿ ಹೆಚ್ಚಿಸಿದೆ ಎಂದರು.
ವೇದಿಕೆಯಲ್ಲಿ ಪ್ರಶಸ್ತಿ ಪುರಸ್ಕೃತರಾದ ಟಿ.ಎನ್.ಆಶಾಕಿರಣ್,ರಾಜಣ್ಣ, ಖಜಾಂಚಿ ಕೆ.ಎಲ್.ಭಾರತಿ,ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಎಸ್.ಮೋಹನ್, ಮಂಜುಳ.ಹೆಚ್.ಎನ್, ಮತ್ತು ವಕೀಲರಾದ ಬಿ.ಜಿ.ಸತೀಶ್,ನವೀನ್ ನಾಯಕ್,ಜೆ.ಕೆ.ಅನಿಲ್,ಉಪಸ್ಥಿತರಿದ್ದರು.
(Visited 1 times, 1 visits today)