ತುಮಕೂರು: ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರ ತುಮಕೂರು, ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ನ. 24 ರಂದು ಬೆಳಿಗ್ಗೆ ೧೦ ಗಂಟೆಗೆ ರ‍್ಪಡಿಸಲಾಗಿದೆ.
ಕರ‍್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ನೆರವೇರಿಸುವರು. ಅಧ್ಯಕ್ಷತೆಯನ್ನು ಬೆಂಗಳೂರಿನ ಆರ್‌ಎನ್‌ಎಸ್ ಪದವಿ ಪರ‍್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರವಿಶಂಕರ್ ಬಿ.ವಿ. ವಹಿಸಲಿದ್ದಾರೆ. ರ‍್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಲ್ಲಿಕರ‍್ಜುನ ಕೆಂಕೆರೆ ಮಂದಾರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಚಂದನವನ ಕಂಪು ಮಾಸ ಪತ್ರಿಕೆಯ ಸಂಪಾದಕಿಯಾದ ಚಿಕ್ಕಮಗಳೂರಿನ ವಾಣಿ ಅವರು ಬಾಳೊಂದು ಭಾವಗೀತೆ ಕೃತಿ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಫ್ಲೋರಿಡಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಝಕಾವುಲ್ಲಾ ಷರೀಫ್, ರ‍್ನಾಟಕ ಗ್ರಾಮ್ಮೆನ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಾದ ಪ್ರದೀಪ್ ಎಸ್., ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ಸಂಸ್ಥಾಪಕರಾದ ಗುರು ವಿದ್ವಾನ್ ಡಾ. ಸಾಗರ್ ಟಿ.ಎಸ್. ಭಾಗವಹಿಸಲಿದ್ದಾರೆ.
ಇದೇ ಸಂರ‍್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ಸಮಾಜ ರತ್ನ ಪ್ರಶಸ್ತಿ ಹಾಗೂ ತುಮಕೂರಿನ ಬಾಲ ಮತ್ತು ಯುವ ಕಲಾವಿದರಿಗೆ ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ ನೀಡಲಾಗುವುದು. ಸಭಾ ಕರ‍್ಯಕ್ರಮದ ನಂತರ ವಿದ್ವಾನ್ ಡಾ. ಸಾಗರ್ ಮತ್ತು ರತಿಕ ಸಾಗರ್ ಅವರ ನರ‍್ದೇಶನದಲ್ಲಿ ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ವಿದ್ಯರ‍್ಥಿಗಳಿಂದ ನೃತ್ಯ ರೂಪಕ ಮತ್ತು ಸರಿಗಮಪ ಖ್ಯಾತಿಯ ಗಾಯಕರಾದ ಡಾ. ಶ್ರವ್ಯ ಎಸ್ ರಾವ್, ಕು. ಸಾಕ್ಷಿ ಕಲ್ಲೂರ್ ಮತ್ತು ಸೋಮಶೇಖರ್ ತುಮಕೂರು ಇವರಿಂದ ಸಂಗೀತ ಕರ‍್ಯಕ್ರಮ ನಡೆಯಲಿದೆ.