ತುಮಕೂರು: ಪಾಶ್ಚಾತ್ಯರ ಅನುಕರಣೆಯನ್ನು ತ್ಯಜಿಸಿ, ದಾಸ್ಯ ಶಿಕ್ಷಣವನ್ನು ಬದಲಿಸಿ, ಶುದ್ಧ ಚಿಂತನೆಯಿAದ ಇಂದಿನ ಶಿಕ್ಷಣವನ್ನು ಭಾರತೀಕರಣಗೊಳಿಸಿದರೆ ಮಾತ್ರ ಸಮರ್ಥ ಭಾರತವನ್ನು ಕಟ್ಟಬಹುದು ಎಂದು ಬೆಂಗಳೂರಿನ ವಿಭು ಅಕಾಡೆಮಿಯ ಮುಖ್ಯಸ್ಥೆ ಡಾ. ವಿ. ಬಿ. ಆರತಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯವು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಮರ್ಥ ಚಿಂತನೆ ಮತ್ತು ವಿಕಸಿತ ಪಥ’ ವಿಷಯದ ಕುರಿತು ಮಾತನಾಡಿದರು.
ಸಮರ್ಥ ಚಿಂತನೆಯ ವ್ಯಕ್ತಿತ್ವ ನಿರ್ಮಾಣದ ಶಿಕ್ಷಣ ಭಾರತೀಯರದ್ದಾಗಿತ್ತು. ದೇಹ ಬುದ್ಧಿ ಮನಸ್ಸನ್ನು ಸಶಕ್ತಗೊಳಿಸುವ ಉದ್ಯೋಗದಾತ ವಿದ್ಯೆ ಭಾರತೀಕರಣವಾಗಿತ್ತು. ಭಾರತದ ಮೇಲೆ ಆದ ಸಾವಿರಾರು ವರ್ಷಗಳ ಆಕ್ರಮಣದಿಂದಾಗಿ, ಮೆಕಾಲೆ ನಮ್ಮ ಶಿಕ್ಷಣಕ್ಕೆ ಕೊಟ್ಟ ಪೆಟ್ಟಿನಿಂದಾಗಿ ನಾವೆಲ್ಲರೂ ದಾಸ್ಯ ಶಿಕ್ಷಣವನ್ನು ಈಗಲೂ ಅನುಸರಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತವೇ ನಮ್ಮ ಅಸ್ಮಿತೆ. ಎಲ್ಲ ವೈವಿಧ್ಯಗಳ ಜೊತೆ ಬದುಕುವುದೇ ಭಾರತ. ಆಕ್ರಮಣಗಳ ಪೆಟ್ಟು ತಿಂದರೂ ಸಹ ಭಾರತೀಯರು ಸ್ವಾಭಿಮಾನದಿಂದ ಎದೆ ಎತ್ತಿ ನಿಂತಿರುವುದಕ್ಕೆ ಕಾರಣ ನಮ್ಮಲ್ಲಿರುವ ಪ್ರಕೃತಿಗೆ ಅನುಗುಣವಾದ ವೈವಿಧ್ಯತೆ. ವಿದೇಶಕ್ಕೆ ಹಾರಿ ದಾಸ್ಯ ಶಿಕ್ಷಣದ ಪದ್ಧತಿಯನ್ನು ಪುನಃ ಕಲಿಯುವ ಬದಲು ಭಾರತದಲ್ಲೇ ಉಳಿದು ಭಾರತವನ್ನು ನೋಡಿ ಬದುಕನ್ನು, ರಾಷ್ಟçವನ್ನು ಬಲಿಷ್ಠವಾಗಿ ನಿರ್ಮಿಸೋಣ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ, ಹೃದಯಾಂತರಾಳದಲ್ಲಿ ಶಿಸ್ತು, ಸಂಯಮ, ತಾಳ್ಮೆ, ಸಂಸ್ಕಾರವಿಲ್ಲದ ವಿದ್ಯಾಥಿಗಳಿಂದ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ. ಯುವಸಮೂಹವನ್ನು ದಾರಿ ತಪ್ಪಿಸುವ ಶಿಕ್ಷಣ ಪದ್ಧತಿ ನಮ್ಮದಾಗಿರುವುದು ವಿಪರ್ಯಾಸ. ಮಂಗಳ ಗ್ರಹಕ್ಕೆ ಏರುತ್ತಿರುವ ಮನುಷ್ಯನಿಗೆ ಸಮಾಜದ ಮನದ ಅಂಗಳಕ್ಕೆ ಇಳಿಯಲು ಆಗುತ್ತಿಲ್ಲ ಎಂದು ಹೇಳಿದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಪ್ರಂಪಚಕ್ಕೆ ಸಂಸ್ಕಾರ ಕಲಿಸಿದ ಭಾರತವನ್ನು ಆಕ್ರಮಣಗಳು ಅಲುಗಾಡಿಸಲು ಸಾಧ್ಯವಾಗಲಿಲ್ಲ. 21ನೆಯ ಶತಮಾನದ ಮಕ್ಕಳಿಗೆ ಬದುಕಿನ ಕಷ್ಟಗಳ ಅರಿವಿಲ್ಲ. ದೇಶ ಕಟ್ಟುವ ಕಾಳಜಿ, ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನಲ್ಲೂ ಬರಬೇಕು ಎಂದರು.
ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ. ರವೀಂದ್ರ ಕುಮಾರ್ ಬಿ. ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಡಾ. ಸುನೀತ ವಿ. ಗಾಣಿಗೇರ್ ನಿರೂಪಿಸಿದರು. ಸಹ ಪ್ರಾಧ್ಯಾಪಕ ಡಾ. ವೇಣುಗೋಪಾಲ ಬಿ. ಎನ್. ವಂದಿಸಿದರು.

(Visited 1 times, 1 visits today)