ಕೊರಟಗೆರೆ: ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಬಫರ್‌ಡ್ಯಾಂ ನಿರ್ಮಾಣದ ಸ್ಥಳ ವಿಕ್ಷಣೆ ಮತ್ತು 12ಗ್ರಾಮದ ರೈತರ ಜೊತೆ ಸಮಾಲೋಚನೆ ಸಮಾವೇಶದ ಹೇಲಿಪ್ಯಾಡ್ ಸ್ಥಳಕ್ಕೆ ಗುರುವಾರ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮತ್ತು ಪೊಲೀಸ್ ವರಿಷ್ಟಾಧಿಕಾರಿ ಅಶೋಕ್‌ವೆಂಕಟ್ ಬೇಟಿನೀಡಿ ಗ್ರಾಮ ಮತ್ತು ಜಮೀನಿನ ಪರಿಶೀಲನೆ ನಡೆಸಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಬೂಚನಹಳ್ಳಿ ಗ್ರಾಮಕ್ಕೆ ಗುರುವಾರ ತುಮಕೂರು ಜಿಲ್ಲಾಧಿಕಾರಿ ಬೇಟಿನೀಡಿ ಪರಿಶೀಲನೆ ನಡೆಸಿ ರೈತರಿಂದ ಮನವಿ ಸ್ವೀಕರಿಸಿದರು. ನಂತರ ಅಧಿಕಾರಿಗಳ ಜೊತೆ ಚರ್ಚಿಸಿ ಹೇಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳ ಮತ್ತು ಬಂದೋಬಸ್ತ್ ವಿಚಾರವಾಗಿ ಮಾಹಿತಿ ಪಡೆದರು. ಸಮಾವೇಶದ ವೇಳೆ ಯಾವುದೇ ರೀತಿಯ ಗೊಂದಲ ಆಗದಂತೆ ರೈತರಿಗೆ ಮನವರಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಂಡಿ ಕಾಲಿಗೆ ಬಿದ್ದ ರೈತ..
ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಹೇಲಿಪ್ಯಾಡ್ ಸ್ಥಳ ಪರಿಶೀಲನೆ ನಡೆಸಲು ಆಗಮಿಸಿದ ವೇಳೆ ಸ್ಥಳೀಯ ರೈತನೋರ್ವ ನಮ್ಮ ಜಮೀನು ಮತ್ತು ಮನೆ ಕಿತ್ತುಕೊಳ್ಳಬೇಡಿ. ನಮ್ಮ ಊರಿನಲ್ಲೇ ನಮಗೇ ಬದುಕಲು ಅವಕಾಶ ಮಾಡಿಕೋಡಿ. ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ನಮ್ಮನ್ನು ಒಕ್ಕಲು ಎಬ್ಬಿಸುವ ಕೆಲಸ ಮಾಡಬೇಡಿ ಎಂದು ಕಾಲಿಗೆ ಬಿದ್ದು ಗೋಳಾಟ ನಡೆಸಿದ ಘಟನೆ ನಡೆಯಿತು.
ಪರಿಶೀಲನೆ ವೇಳೆ ತಹಶೀಲ್ದಾರ್ ಮಂಜುನಾಥ, ಸಿಪಿಐ ಅನಿಲ್, ತಾಪಂ ಇಓ ಅಪೂರ್ವ, ಪಿಎಸೈ ಯೊಗೀಶ್, ರೇಣುಕಾ, ಮಂಜುನಾಥ, ಕಂದಾಯ ಇಲಾಖೆಯ ಮಧುಚಂದನ್, ಕೃಷ್ಣಮೂರ್ತಿ, ಚಿನ್ನಹಳ್ಳಿ ಪಿಡಿಓ ಶ್ರೀಧರ್, ಸೇರಿದಂತೆ ಎತಿಸಮಾವೇಶಕ್ಕೆ ನಮ್ಮ ವಿರೋಧ ಇಲ್ಲ. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹಸಚಿವ ಡಾ.ಜಿ.ಪರಮೇಶ್ವರ ನೇತೃತ್ವದ ಬೈರಗೊಂಡ್ಲು ಬಫರ್‌ಡ್ಯಾಂ ಸ್ಥಳ ವಿಕ್ಷಣೆ ಮತ್ತು ಬೂಚನಹಳ್ಳಿ ಸಮಾವೇಶಕ್ಕೆ ನಮ್ಮ ವಿರೋಧವಿಲ್ಲ. ದೊಡ್ಡಬಳ್ಳಾಪುರ ಗಡಿಯಲ್ಲಿ ನಿರ್ಮಾಣ ಮಾಡಲು ಬಫರ್‌ಡ್ಯಾಂ ಸ್ಥಳಾಂತರಕ್ಕೆ ಈಗಾಗಲೇ ರಾಜ್ಯ ಸರಕಾರದ ಆದೇಶ ಮಾಡಿದೆ.
ಈಗ ಮತ್ತೋಮ್ಮೆ ಪರಿಶೀಲನೆ ನಡೆಸಿದಾಗ್ಲು ಸಹ ನಮ್ಮ 12ಗ್ರಾಮಗಳು ಮುಳುಗಡೆ ಆಗದಂತೆ ಅನುಕೂಲ ಕಲ್ಪಿಸಬೇಕಿದೆ ಎಂದು ರೈತರು ಮನವಿ ಮಾಡಿದರು.
ಸಮಾವೇಶದ ಮಾಹಿತಿಯೇ
ಗೌಪ್ಯ: ಬೂಚನಹಳ್ಳಿ ಸಮೀಪ ನ.26ರಂದು ನಡೆಯುವ ಸಮಾವೇಶದ ಮಾಹಿತಿಯು ಇನ್ನೂ ಗೌಪ್ಯವಾಗಿದೆ. ತುಮಕೂರು ಜಿಲ್ಲಾಧಿಕಾರಿ ಹೇಲಿಪ್ಯಾಡ್ ಸ್ಥಳ ಪರಿಶೀಲನೆ ನಡೆಸಲು ಆಗಮಿಸಿದಾಗ ಪತ್ರಕರ್ತರು ಕೇಳಿದಾಗ ಇನ್ನೂ ದಿನಾಂಕ ನಿಗಧಿ ಆಗಿಲ್ಲ ಎಂದು ತಿಳಿಸಿದ್ದಾರೆ.
ತಾಲೂಕು ಮಟ್ಟದ ಅಧಿಕಾರಿಗಳ ಬಳಿ ವಿಚಾರಿಸಿದಾಗ ಮಾಹಿತಿ ಇನ್ನೂ ನಮಗೇ ಸರಿಯಾಗಿ ಬಂದಿಲ್ಲ ಎಂಬ ಉತ್ತರವನ್ನು ನೀಡಿ ಸಮಾವೇಶದ ಮಾಹಿತಿಯನ್ನು ಗೌಪ್ಯವಾಗಿ ಇರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ವಹಿತಾಸಕ್ತಿಗೆ ರೈತರ ಜಮೀನು ಬಲಿ
ಬೈರಗೊಂಡ್ಲು ಬಫರ್‌ಡ್ಯಾಂ ಈಗಾಗಲೇ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಆಗಿದೆ. 12ಗ್ರಾಮದ ರೈತರ ಮನವಿಗೆ ನಮ್ಮ ಕ್ಷೇತ್ರದ ಗೃಹಸಚಿವರು ಸ್ಪಂಧಿಸಿದ್ದಾರೆ. ಎತ್ತಿನಹೊಳೆ ಇಂಜಿನಿಯರ್ ತಮ್ಮ ಭೂಮಿ ಉಳಿಸಿಕೊಳ್ಳಲು ನಮ್ಮ ಜಮೀನು ಬಲಿಕೊಡ್ತಿದ್ದಾರೆ.
| ಶಿವಕುಮಾರ್.
ರೈತ. ಕೋಳಾಲ