ತುರುವೇಕೆರೆ: ಭೂಮಿಯಲ್ಲಿನ ಅಂತರ್‌ಜಲ ಹೆಚ್ಚಳಕ್ಕೆ ಚಕ್ ಡ್ಯಾಮ್ ನಿರ್ಮಾಣ ಮಾಡುವ ಯೋಜನೆಗಳನ್ನು ಸರ್ಕಾರ ನೀಡಬೇಕು ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಮಾಯಸಂದ್ರ ಹೋಬಳಿ ಹೊಣಕೆರೆ, ಬೋಮ್ಮೇನಹಳ್ಳಿ,ಹರಳಹಳ್ಳಿ, ನಾಗಲಾಪುರ ಗ್ರಾಮದಲ್ಲಿನ ಹಳ್ಳಗಳಿಗೆ ಹೇಮಾವತಿ ಇಲಾಖೆಯಿಂದ ಮುಂಜೂರಾಗಿರುವ ಚಕ್ ಡ್ಯಾಮ್ ಗಳಿಗೆ ಭೂಮಿ ಪೂಜೆ ನೆರವೇರಸಿ ಮಾತನಾಡಿದ ಅವರು ಮಳೆಗಾಲದಲ್ಲಿ ಮಳೆಯ ನೀರು ಪೋಲಾಗದಂತೆ ಕ್ರಮ ವಹಿಸುವಂತಹ ಕಾರ್ಯಕ್ರಮವನನು ಕೈಗೊಳ್ಳಬೇಕು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವಂತಹ ಮಳೆಯ ನೀರನ್ನು ಸಂಗ್ರಹಿಸಿ ಬೂಮಿಯಲ್ಲಿ ಹಿಂಗಿಸುವAತಹ ಕೆಲಸ ಮಾಡಿದರೆ ಭೂಮಿಯಲ್ಲಿ ಅಂತರ್ ಜಲ ಮಟ್ಟ ಹೆಚ್ಚಾಗಿ ಬೇಸಿಗೆಯಲ್ಲಿ ಬೋರ್‌ವೆಲ್‌ಗಳಲ್ಲಿ ಸಮರ್ಪಕವಾಗಿ ಸಿಗಲಿದೆ ಇದರಿಂದ ರೈತರಿಗೆ ಬೆಳೆಗಳನನು ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಬದಲ್ಲಿ ಮುಖಂಡರಾದ ರಾಜೀವ್ ಕೃಷ್ಣಪ್ಪ, ಸೋಮಶೇಖರಯ್ಯ, ಶಂಕರೇಗೌಡ, ಪ್ರೇಮಕುಮಾರ್, ದೀಪು ಸೇರಿದಂತೆ ಇತರರು ಇದ್ದರು.
(Visited 1 times, 1 visits today)