ಗೂಳೂರು: ಅಡಿಕೆ ಚೀಲಗಳನ್ನು‌ ಕಳ್ಳತನ‌ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಸನ್ನಕುಮಾರ್ (40) ಕಳ್ಳತನ‌ ಆರೋಪಿ. ಈ ತನನ್ನು ವಶಕ್ಕೆ ಪಡೆಯಲಾಗಿದ್ದು, 9 ಒಣಗಿದ ಅಡಿಕೆಯ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಅಡಿಕೆ‌ ಕಳ್ಳತನಕ್ಕೆ ಸಂಬಂಧಿಸಿದಂತೆ ಗೂಳೂರು ಹೋಬಳಿಯ ಕೋಡಿಹಳ್ಳಿಯಲ್ಲಿಯೇ ಎರಡು ಪ್ರಕರಣ ದಾಖಲಾಗಿದ್ದವು. ಪ್ರಕರಣ ಭೇದಿಸಲು ಪೊಲೀಸರ ತಂಡವನ್ನು ರಚಿಸಲಾಗಿತ್ತು.
ಪ್ರಕರಣವನ್ನು ಭೇದಿಸುವಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ.ಮರಿಯಪ್ಪ, ಬಿ.ಎಸ್. ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ಹಾಗೂ ಚಂದ್ರಶೇಖರ್ ಪೊಲೀಸ್ ಉಪಾಧೀಕ್ಷಕರು ತುಮಕೂರು ಉಪ-ವಿಭಾಗ, ಕ್ಯಾತ್ಸಂದ್ರ ವೃತ್ತ ನಿರೀಕ್ಷಕರಾದ ರಾಮಪ್ರಸಾದ್ ಮತ್ತು ಹೆಬ್ಬರು ಪೊಲೀಸ್ ಠಾಣೆ. ಪಿ.ಎಸ್.ಐ ಬೈರೇಗೌಡ ಜಿ.ಎಸ್. ಮತ್ತು ಸಿಬ್ಬಂದಿಗಳಾದ ಸಿದ್ದರಾಜು, ಸುರೇಶ್, ಪುಟ್ಟರಾಜು, ಬಸವರಾಜು, ವಿರೂಪಾಕ್ಷ ಪಾಟೀಲ ರವರುಗಳು ಪತ್ತೆ ಮಾಡುವಲ್ಲಿ ಶ್ರಮಿಸಿದ್ದು, ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ.ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.
(Visited 1 times, 1 visits today)