ತಿಪಟೂರು : ಕಲ್ಪತರು ನಾಡಿನಲ್ಲಿ 1922 ರಿಂದ ಬಡ, ಹಿಂದುಳಿದ, ರೈತ ಮಕ್ಕಳು ವಿದ್ಯಾವಂತರಾಗಲು ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಸಮಾಜಕ್ಕೆ ಸತ್ಪ್ರಜೆಯಾಗಿ ರೂಪಿಸಿ, ಶರಣರ ಚಿಂತನೆಗಳನ್ನು ಮನೆ ಮನಗಳಲ್ಲಿ ಬಿತ್ತಿ ಸದ್ದು ಗದ್ದಲವಿಲ್ಲದೆ ಕೊಡುಗೆ ಸಲ್ಲಿಸುತ್ತಿರುವ ಸಿಡ್ಲೆಹಳ್ಳಿ ಮಹಾ ಸಂಸ್ಥಾನ ಮಠ, ಶ್ರೀ ಗುರುಕುಲನಂದಾಶ್ರಮದಲ್ಲಿ ನವಂಬರ್ 24 ನೇ ಭಾನುವಾರದಂದು ಗುರುಕುಲದ ಹಿರಿಯ ವಿದ್ಯಾರ್ಥಿಗಳು ಹಾಗೂ ಸದ್ ಭಕ್ತರು ಲಿಂಗೈಕ್ಯ ಪಟ್ಟದ ಶ್ರೀ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳವರ 114 ನೇ ಸಂಸ್ಮರಣೆ ಹಾಗೂ ಪ್ರಸಕ್ತ ಶ್ರೀಗಳ 27 ನೇ ಪೀಠಾರೋಹಣ, ಧಾರ್ಮಿಕ ಸಮಾರಂಭ ಆಯೋಜಿಸಿರುತ್ತಾರೆ. ಪರಂಪರೆಯAತೆ ಈ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ ಕೊಡಮಾಡುವ ‘ಗುರುಕುಲಶ್ರೀ’ ಗೌರವ ಪ್ರಶಸ್ತಿಯನ್ನು ಈ ವರ್ಷ ನೈಸರ್ಗಿಕ ಕೃಷಿ ವಿಜ್ಞಾನಿಯಾದ ,ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರ ದೊರಕುವಲ್ಲಿ ರಾಸಾಯನಿಕ ಮುಕ್ತ ಕೃಷಿ ಹಾಗೂ ಕುಲಾಂತರಿ ತಳಿ ನಿಷೇದದ ಬಗ್ಗೆ ದೊಡ್ಡಹೊಸೂರು ಸತ್ಯಾಗ್ರಹ ಮಾಡಿ ನಾಡಿನ ಸಹಸ್ರಾರು ರೈತರಲ್ಲಿ ಅರಿವು ಮೂಡಿಸುವ ಸೇವಾ ಕಾರ್ಯದಲ್ಲಿ ನಿರತರಾಗಿರುವ ಗಾಂಧೀಜಿ ಸಹಜ ಬೇಸಾಯ ಆಶ್ರಮದ ಸಂಸ್ಥಾಪಕರಾದ ಡಾ. ಹೆಚ್ ಮಂಜುನಾಥ್ ಪಾತ್ರರಾಗಿದ್ದಾರೆ.
(Visited 1 times, 1 visits today)