ಹುಳಿಯಾರು: ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ತಂಬಾಕು ಮುಕ್ತ ಅಭಿಯಾನದ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.
ಹುಳಿಯಾರಿನ ಬಸ್ ನಿಲ್ದಾಣ, ಡಾ.ರಾಜ್‌ಕುಮಾರ್ ರಸ್ತೆ ಸೇರಿದಂತೆ ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುತ್ತಿರುವವರಿಗೆ ವಿದ್ಯಾರ್ಥಿಗಳು ಗುಲಾಬಿ ಹೂ ನೀಡುವ ಮೂಲಕ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರು ತಂಬಾಕು ವ್ಯಸನದಿಂದ ಮುಕ್ತಿ ಹೊಂದುವAತೆ ಅರಿವು ಮೂಡಿಸಿದರು.
ಅರಿವು ಆಂದೋಲನಕ್ಕೆ ಪ್ರಾಂಶುಪಾಲರಾದ ಸಿ.ಜಿ.ಶೈಲಜಾ ಚಾಲನೆ ನೀಡಿ ಮಾತನಾಡಿ ತಂಬಾಕು ಸೇವನೆ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಆರೋಗ್ಯಕ್ಕೆ ಮಾರಕವಾಗುವ ತಂಬಾಕು ಸೇವನೆಯಿಂದ ದೂರ ಇರಬೇಕು ಎಂದು ಹೇಳಿದರು.
ತಂಬಾಕು, ಗುಟ್ಕಾ ಮತ್ತು ಸಿಗರೇಟ್ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮಾರಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 80 ಲಕ್ಷ ಮತ್ತು ಪ್ರತಿ ದಿನ 22 ಸಾವಿರ ಜನರು ತಂಬಾಕು ಸೇವನೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ಜಾಥಾದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ತಂಬಾಕು ವಿರೋಧಿ ಘೋಷಣೆ ಕೂಗಿದರು.
ಉಪನ್ಯಾಸಕರುಗಳಾದ ಹೆಚ್.ಎಸ್.ನಾರಾಯಣ್, ಹೆಚ್.ಎಂ.ಮAಜುನಾಥ್, ವಿ.ಲೋಕೇಶ್, ಟಿ.ಆರ್.ಪ್ರಸನ್ನ, ಎಂ.ಕೆ.ಮAಗಳಗೌರಮ್ಮ, ಮಧುಶ್ರೀ, ವಿಜಯಕುಮಾರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 1 times, 1 visits today)