ತುಮಕೂರು: ದೇಶದ ಹೆಸರನ್ನು ಎತ್ತಿ ಹಿಡಿಯಲು ಎನ್‌ಸಿಸಿ ಕೆಡೆಟ್‌ಗಳು ಶ್ರಮಿಸುತ್ತಾರೆ. ಅವರ ಅವಿರತ ಶ್ರಮ ಮತ್ತು ಸಮರ್ಪಣಾ ಮನೋಭಾವವು ದೇಶದ ಕೀರ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ತುಮಕೂರಿನ 4 ಕೆಎಆರ್ ಬೆಟಾಲಿಯನ್‌ನ ಸುಬೇದಾರ್ ಮೇಜರ್ ದಿನೇಶ್ ಸಿಂಗ್ ಸಂತಸ ವ್ಯಕ್ತಪಡಿಸಿದರು.
ವಿವಿ ಕಲಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಎನ್‌ಸಿಸಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ರಕ್ಷಣಾ ಅಧಿಕಾರಿಗಳಾಗಿ ಯಶಸ್ಸನ್ನು ಸಾಧಿಸಿದ ನಂತರ ತಮ್ಮ ಪ್ರಯಾಣವನ್ನು ರೂಪಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಪೋಷಕರು ಮತ್ತು ಶಿಕ್ಷಕರ ಕೊಡುಗೆಗಳನ್ನು ಗೌರವಿಸಬೇಕು. ಎನ್‌ಸಿಸಿಯಲ್ಲಿ ಹಿರಿಯರು ಮತ್ತು ಕಿರಿಯರ ನಡುವಿನ ಸಮನ್ವಯಕ್ಕೆ ಕಾರಣ ಶಿಸ್ತು ಮತ್ತು ಒಗ್ಗಟ್ಟು ಎಂದರು.
ಎನ್‌ಸಿಸಿ ಮಹಿಳಾ ತರಬೇತುದಾರೆ ಭವ್ಯಶ್ರೀ ಮಾತನಾಡಿ, ವಾರಕ್ಕೊಮ್ಮೆ ನಡೆಯುವ ಎನ್‌ಸಿಸಿ ವಿದ್ಯಾರ್ಥಿಗಳ ಮೆರವಣಿಗೆಯಿಂದ ಪ್ರೇರೇಪಿತರಾದ ಅನೇಕ ಸಾರ್ವಜನಿಕರಿದ್ದಾರೆ. ಅವರಲ್ಲಿ ರಾಷ್ಟಿçÃಯ ಮನೋಭಾವ ಉತ್ಕೃಷ್ಟಗೊಂಡಿದೆ. ಎನ್‌ಸಿಸಿ ಸಹಪಠ್ಯ ಚಟುವಟಿಕೆಗಳ ಜೊತೆಗೆ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದತ್ತ ಗಮನಹರಿಸಬೇಕು. ಎನ್‌ಸಿಸಿ ಕ್ಷೇತ್ರದಲ್ಲಿ ಎ ಮತ್ತು ಬಿ ಗ್ರೇಡ್ ಪ್ರಮಾಣಪತ್ರಗಳನ್ನು ಗಳಿಸುವಲ್ಲಿ ಶಿಕ್ಷಣವು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಎನ್‌ಸಿಸಿ ಬಹುಶಿಸ್ತಿನ ಕ್ಷೇತ್ರವಾಗಿರುವುದರಿಂದ ಹೆಚ್ಚಿನ ಮಹಿಳೆಯರು ಎನ್‌ಸಿಸಿಗೆ ಸೇರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎನ್‌ಸಿಸಿ ವಿದ್ಯಾರ್ಥಿಗಳು ಯಾವಾಗಲೂ ‘ಮಾಡು ಇಲ್ಲವೇ ಮಡಿ’ ಎಂಬ ಮನೋಭಾವವನ್ನು ಹೊಂದಿರುತ್ತಾರೆ ಎಂದು ಹೇಳಿದರು.
ಉಪನ್ಯಾಸಕ ವಾಸುದೇವ ಡಿ. ಎಂ. ಉಪಸ್ಥಿತರಿದ್ದರು.