ತುಮಕೂರು: ಕಾರ್ಮಿಕರು ಮತ್ತು ರೈತರು ಜಂಟಿಯಾಗಿ ಸಂಯುಕ್ತ ಕಿಸಾನ್ ಮೊರ್ಚ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ದೇಶದ್ಯಂತ ಇಂದು ನಡೆದ ಪ್ರತಿಭಟನೆಯ ಭಾಗವಾಗಿ ತುಮಕೂರು ನಗರದಲ್ಲಿ ಸಹ ಪ್ರತಿಭಟನೆಯನ್ನು ನಡೆಸಲಾಯಿತು, ದಿ; 26 – 11-2024 ರಂದು ಬೆಳಿಗ್ಗೆ -11 ಗಂಟೆಗೆ ನಗರದ ಸ್ವಾತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಛೇರಿಯ ತನಕ ನೂರಾರು ರೈತ – ಕಾರ್ಮಿಕರ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿಯನ್ನು ಸಹ ನಡೆಸಲಾಯಿತು, ಅರಂಭಿಕವಾಗಿ ರೈತ ಮುಖಂಡ ಬಿ.ಉಮೇಶ್ ಅವರು ಪ್ರಾಸ್ತವಿಕ ಮಾತುಗಳನ್ನು ಅಡಿದರು .
ಧರಣೀಯನ್ನು ಉದ್ದೇಶಿಸಿ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕರಾದ ಸಿ. ಯತಿರಾಜು ಅವರು ಮಾತನಾಡಿ ಕಾರ್ಪೊರೇಟ್‌ಗಳು ಮತ್ತು ಅತಿ ಶ್ರೀಮಂತರನ್ನು ಶ್ರೀಮಂತಗೊಳಿಸುವ ಗುರಿಯನ್ನು ಹೊಂದಿರುವ ಓಆಂ3 ಸರ್ಕಾರದ ನೀತಿಗಳೊಂದಿಗೆ ಭಾರತದ ದುಡಿಯುವ ಜನರು ಆಳವಾದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್-ಡ್ಯಾಮ್ ಮೂಲಕ ಭೂಮಿ ಮತ್ತು ಬೆಳೆಗಳ ಡಿಜಿಟಲೀಕರಣವನ್ನು ಹೇರುತ್ತಿz ಎಂದು ಅಪಾಧಿಸಿದರು. ಹೋರಾಟದಲ್ಲಿ ಸಿಐಟಿಯು ಎನ್. ಕೆ ಸುಬ್ರಮಣ್ಯ, ಕಟ್ಟಡ ಕಾರ್ಮಿಕರ ಸಂಘ ಕಲೀಲ್, ರಂಗಧಾಮಯ್ಯ, ಪುಟ್ಪಾತ್ ವ್ಯಾಪಾರಿಗಳ ಸಂಘದ ವಸೀಂ ಅಕ್ರಂ. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಚಂದ್ರಶೇಖರ್ ಇದ್ದರು.
(Visited 1 times, 1 visits today)