ಹುಳಿಯಾರು: ದೇಶದ ಎಲ್ಲಾ ಕಾನೂನುಗಳ ತಾಯಿ ಸಂವಿಧಾನ. ನಾವು ನೆಮ್ಮದಿ ಮತ್ತು ಖುಷಿಯಿಂದ ಇರಲು ಅದೇ ಕಾರಣ. ಸಂವಿಧಾನವನ್ನು ಪ್ರೀತಿಸುವವರು ಹಾಗೂ ಗೌರವಿಸುವವರು ಎಂದೂ ಕೂಡಾ ಸುಂದರ ಬದುಕನ್ನು ನಡೆಸಬಹುದು ಎಂದು ರಾಜ್ಯಶಾಸ್ತç ಉಪನ್ಯಾಸಕ ಟಿ.ಆರ್.ಪ್ರಸನ್ನ ತಿಳಿಸಿದರು.

ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಸಂವಿಧಾನವು ಇಲ್ಲೇ ಕುಳಿತು ರಚಿಸಿದ್ದಲ್ಲ. ಇದಕ್ಕಾಗಿ ಅನೇಕ ದೇಶಗಳ ಕಾನೂನುಗಳನ್ನು ಅಧ್ಯಯನ ಮಾಡಿ ಅಳವಡಿಸಲಾಗಿದೆ. ಭಾರತದ ಸಂವಿಧಾನ ರಚನೆಗೆ 2 ವರ್ಷ 9 ತಿಂಗಳು 18 ದಿನ ಹಿಡಿಯಿತು. 2015 ರ ವರೆಗೆ ‘ಲಾ ಡೇ’ ಎಂದು ಕರೆಯಲಾಗುತ್ತಿದ್ದ ದಿನವನ್ನು ಇದೀಗ ‘ಸಂವಿಧಾನ ದಿನ’ ಎಂದು ಕರೆಯಲಾಗುತ್ತಿದೆ ಎಂದರು.

ಸಂವಿಧಾನ ಅತ್ಯಂತ ಪವಿತ್ರ ಗ್ರಂಥ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಆಶಯದ ಸಂವಿಧಾನ ನಮಗೆಲ್ಲರಿಗೂ ಮಹಾನ್ ಗ್ರಂಥವಾಗಿದೆ. ಸಮಾನತೆ, ಸೌಹಾರ್ದತೆ ಸಾಧಿಸುವಲ್ಲಿ ಸಂವಿಧಾನವು ದಾರಿದೀಪವಾಗಿದೆ. ಜಾಗತಿಕವಾಗಿ ಹೆಸರಾದ ಮತ್ತು ಅನೇಕ ದೇಶಗಳಿಗೆ ಮಾದರಿಯಾದ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾಕಾಲ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾoಶುಪಾಲರಾದ ಸಿ.ಜಿ.ಶೈಲಜಾ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಎಚ್.ಎಂ.ಮAಜುನಾಥ್, ಮಂಗಳಗೌರಮ್ಮ, ಮಧುಶ್ರೀ, ಎಚ್.ಎಸ್.ನಾರಾಯಣ, ವಿಜಯಕುಮಾರಿ ಹಾಗೂ ವಿದ್ಯಾರ್ಥಿನಿಯರುಗಳು ಹಾಜರಿದ್ದರು.

(Visited 1 times, 1 visits today)