ತುಮಕೂರು: ಅಕ್ರಮವಾಗಿ ನಾಡಾ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಕುಖ್ಯಾತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅವರು ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಯಲ್ಲಿ ಮಾತನಾಡಿದ ಅವರು, ಗುಬ್ಬಿ ತಾಲ್ಲೂಕು ತಿದ್ದೂರು ಗ್ರಾಮದ ವಾಸಿಗಳಾದ ಆರೋಪಿ ಮಧುಚಂದ್ರ & ಶಿವ ಕುಮಾರ್ ರವರು ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದ ನಾಡ ಬಂದೂಕಿನೊಂದಿಗೆ ಬೇಟೆಗೆ ಬಂದಾಗ ಚೈತ್ರರವರ ಗಂಡ ರ‍್ಶನ್ ಆಕ್ಷೇಪಿಸಿದಾಗ ಬಂದೂಕು ಕೆಳಗೆ ಬಿದ್ದು ಫೈರ್ ಆಗಿ ಚೈತ್ರ ರವರಿಗೆ ಗಾಯ ಆಗಿದೆ. ಚೈತ್ರ ರವರ ಹೇಳಿಕೆ ಮೇರೆಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ರ‍್ಮ್ಸ್ ಆಕ್ಟ್ ಮತ್ತು 125(ಎ) ಬಿಎನ್‌ಎಸ್ ರೀತ್ಯಾ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದ ಎಂದು ತಿಳಿಸಿದ್ದಾರೆ.
ತನಿಖಾ ಕಾಲದಲ್ಲಿ ತುಮಕುರು ಜಿಲ್ಲೆಯಲ್ಲಿ 25-30 ಸಾವಿರ ರೂ ಗಳಿಗೆ ಅಕ್ರಮ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿರುವ ಜಾಲ ಸಕ್ರಿಯವಾಗಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕರ‍್ಯಪ್ರವೃತ್ತರಾದ ಪೊಲೀಸರು 6 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಹಾಗೂ ಆರೋಪಿಗಳ ಕಡೆಯಿಂದ ಯಾವುದೇ ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಹೊಂದಿದ್ದ ಬಂದೂಕುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ. ಮಧುಚಂದ್ರ ಟಿ.ಆರ್. 29ರ‍್ಷ, ಶಿವಕುಮಾರ್ ಸಿ.ಬಿನ್. 24ರ‍್ಷ, ಮಂಜುನಾಥ 39 ರ‍್ಷ, ತಿಮ್ಮರಾಜ 45ರ‍್ಷ, ರವೀಶ್ 50ರ‍್ಷ, ಇಮ್ರಾನ್ ಪಾಷಾ 40ರ‍್ಷ, ಬಂಧಿತ ಆರೋಪಿಗಳಾಗಿದ್ದಾರೆ. ಈ ಮೇಲ್ಕಂಡ ಆರೋಪಿಗಳ ಕಡೆಯಿಂದ ಅಕ್ರಮವಾಗಿ ಹೊಂದಿದ್ದ ಒಟ್ಟು 04 ಬಂದೂಕುಗಳು, ಬಂದೂಕಿನ ಬಿಡಿಭಾಗಗಳು ಹಾಗೂ ಸದರಿ ಬಂದೂಕುಗಳನ್ನು ತಯಾರಿಸಲು ಬೇಕಾಗಿದ್ದ ಉಪಕರಣಗಳು ಮತ್ತು ಕಚ್ಚಾ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಅನೇಕ ಬಂದೂಕುಗಳನ್ನು ವಶಪಡಿಸಿಕೊಳ್ಳಬೇಕಾಗಿರುತ್ತದೆ. ಈ ಬಂದೂಕುಗಳನ್ನು ಖರೀದಿ ಮಾಡಿದವರು ಕಾಡು ಪ್ರಾಣಿಗಳನ್ನು
ಬೇಟೆಯಾಡಲು
ಉಪಯೋಗಿಸುತ್ತಿದ್ದುದಾಗಿ ತಿಳಿದುಬಂದಿರುತ್ತೆ. ತಿಮ್ಮರಾಜು ಮತ್ತು ರವೀಶ ರವರು ತಮ್ಮ ಊರಿನಲ್ಲಿಯೇ ಅಕ್ರಮವಾಗಿ ಬಂದೂಕು ತಯಾರಿಸುತ್ತಿದ್ದು ಇದಕ್ಕೆ ಬೇಕಾದ ಮೆಷಿನರಿ ಕೆಲಸವನ್ನು ಲೇತ್ ಮತ್ತು ಡ್ರಿಲ್ಲಿಂಗ್ ಮೆಷಿನ್ ಮೂಲಕ ಇಮ್ರಾನ್ ಮಾಡಿಕೊಟ್ಟಿರುತ್ತಾನೆ ಎಂದು ತಿಳಿದು ಬಂದಿರುತ್ತೆ. ಇನ್ನು ಕೆಲವು ಜನರ ಬಳಿ ಅಕ್ರಮವಾಗಿ ನಾಡ ಬಂದೂಕು ಇರುವ ಬಗ್ಗೆ ಮಾಹಿತಿ ಇದ್ದು ಅವುಗಳ ಪತ್ತೆ ಕರ‍್ಯ ಮುಂದುವರೆದಿರುತ್ತೆ. ಇದರಿಂದ ಮುಂದೆ ಜಿಲ್ಲೆಯಲ್ಲಿ ಆಗಬಹುದಾದಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಿದಂತಾಗಿರುತ್ತೆ ಎಂದು ಅವರು ವಿವರಿಸಿದರು. ಕೆಸ್ತೂರು ಗ್ರಾಮದ ಪರ‍್ಯಾದುದಾರರಾದ ಬಸವರಾಜು ಅವರು ಶಿರಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗ ನಿಲ್ಲಿಸಿದ್ದ ತಮ್ಮ ದ್ವಿಚಕ್ರ ವಾಹನ ಕಳವಾಗಿದೆ ಎಂದು ದೂರು ನೀಡಿದ್ದರು ಹಾಗೂ ಮತ್ತೊಬ್ಬ ದೂರುದಾರ ಸೀತಾರಾಮ ಎಂಬುವವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಅರಳಿ ಮರದ ಹತ್ತಿರ ಬೈಕ್ ನಿಲ್ಲಿಸಿ ತಮ್ಮ ಮಗನನ್ನು ಬಸ್ಸಿಗೆ ಹತ್ತಿಸಿ ಹಿಂತಿರುಗಿ ಬಂದಾಗ ಬೈಕ್ ಕಳವಾಗಿರುವುದಾಗಿ ದೂರು ನೀಡಿದ್ದರು. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಆಶೋಕ್ ಕೆ.ವಿ ಐ.ಪಿ.ಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷರುಗಳಾದ ವಿ.ಮರಿಯಪ್ಪ, ಅಬ್ದುಲ್ ಖಾದರ್ ರವರ ಮರ‍್ಗರ‍್ಶನದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ನಂತರ ತನಿಖಾ ತಂಡ ಪ್ರಸಾದ್, ಆಂದ್ರಪ್ರದೇಶದ ನವೀನ್ ಕುಮಾರ್, ನಾಗೇಶ್ವರ ಈ ಆರೋಪಿಗಳನ್ನು ಪತ್ತೆ ಮಾಡಿ 32 ಲಕ್ಷ ಬೆಲೆ ಬಾಳುವ 63 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.