ಪಾವಗಡ: ರಾಜಕೀಯ ಮೇಲಾಟದಿಂದಾಗಿ 13ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಶಾಲಾ ಕಟ್ಟಡ ಇಂದು ಅನೈತಿಕ ತಾಣವಾಗಿದ್ದು ಬೆಲೆ ಬಾಳುವ ವಸ್ತುಗಳ ನಾಪತ್ತೆಯಾಗುತ್ತಿವೆ ಎಂಬುದು ಗ್ರಾಮಸ್ಥರು ದೂರಾಗಿದೆ.
ಪಾವಗಡ ತಾಲ್ಲೂಕಿನ ಆರಸೀಕೆರೆ ಗ್ರಾಮದಲ್ಲಿ 8ವರ್ಷಗಳ ಹಿಂದೆ ಆದರ್ಶಶಾಲೆಗಾಗಿ 13ಕೋಟಿವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇದುವರೆಗೂ ಪಾವಗಡ ನಗರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೂ ಸ್ಥಳಾಂತರ ಗೊಳ್ಳದೆ ಸರ್ಕಾರಿ ಆದರ್ಶ ಶಾಲೆಯಕಟ್ಟಡ ಅನೈತಿಕ ತಾಳವಾಗಿ ಬಾಗಿಲುಗಲು ಕಿಟಕಿಗಳು ಗೆದ್ದಲು ಹಿಡಿದು ಹಾಳಾಗಿವೆ ಬೆಲೆ ಬಾಳುವ ವಸ್ತುಗಳು ಹಾಳಾಗಿವೆ ಕಟ್ಟಡದ ಒಳದ ಬಾಗದಲ್ಲಿ ಗಿಡಗೆಂಟಿಗಳು ಅಳುದ್ದ ಬೆಳೆದು ಕಾಡು ಪ್ರಾಣಿಗಳ ಅವಾಸಸ್ಥಾನವಾಗಿ ಮಾರ್ಪಟ್ಟಿದೆ ಮತ್ತು ಕಿಟಕಿಗಾಜು ಪ್ಯಾನ್ ಇನ್ನಿತರೆ ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿವೆ ಎಂಬುದು ನಾಗರೀಕರ ದೂರಾಗಿದೆ.
ತಾಲ್ಲೂಕಿಗೆ ಅದರ್ಶಶಾಲೆ ಮುಂಜೂರು ಆದಾಗ ಇದ್ದ ಸರ್ಕಾರಿ ಕಟ್ಟಡವೊಂದರಲ್ಲಿ ತಾತ್ಕಾಲಿಕವಾಗಿ ಪ್ರಾರಂಭಮಾಡಲಾಯಿತು ಅನಂತರ ನಿವೇಶನಕ್ಕಾಗಿ ಹುಡುಕಾಟ ಪ್ರಾರಂಭವಾಯಿತು 10ಎಕರೆ ಜಾಗ ಸಿಗದೆ ಇದ್ದಾಗ ಅರಸೀಕೆರೆ ಗ್ರಾಮದವರು 21ಎಕರೆ ಜಾಗವನ್ನು ರಾಜ್ಯಪಾಲರ ಹೆಸರಿಗೆ ನೊಂದಾಯಿಸಿದ್ದಾರೆ ಹೀಗಾಗಿ ಸರ್ಕಾರ ಆ ಜಾಗದಲ್ಲಿ ಕಟ್ಟಡ ಕಟ್ಟಲು 13ಕೋಟಿಹಣ ಮುಂಜೂರು ಮಾಡಿ ಕಟ್ಟಡವೂ ನಿರ್ಮಾಣವಾದ ನಂತರ ಅಲ್ಲಿನ ಶಿಕ್ಷಕರ ಚಿತಾವಣೆಯಿಂದಾಗಿ ಮತ್ತು ನಗರದ ವಿದ್ಯಾರ್ಥಿಗಳ ಪೋಷಕರು ನ್ಯಾಯಾಲಯದ ಮೆಟ್ಟಿಲು ಏರಿ ಸ್ಥಳಾಂತರಕ್ಕೆ ತಡೆ ಆಜ್ಞೆ ತಂದರು ತದನಂತರದಲ್ಲಿ ಹೆಚ್ಚುವರಿ ನ್ಯಾಯಾಲಯ ಮೂಲಭೂತ ಸೌಲಭ್ಯ ಇರುವೆಡೆಗೆ ಸ್ಥಳಾಂತರಿಸಬೇಕು ಎಂದು ಆದೇಶ ಮಾಡಿದ್ದರು ಯಾವುದೇ ಮೂಲಭೂತಸೌಲಭ್ಯಗಳು ಇಲ್ಲದೆ ಇರುವ ಕಟ್ಟಡಗಳಲ್ಲಿ ಶಾಲೆ ನಡೆಸುತ್ತಿದ್ದಾರೆ.
ಸ್ಥಳೀಯವಾಗಿ ಕೆಲಸ ಮಾಡುವ ಶಿಕ್ಷಕರ ಚಿತಾವಣೆ ಮತ್ತು ರಾಜಕಾರಣಿಗಳ ಮೇಲಾಟದಲ್ಲಿ 13ಕೋಟಿವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಕಟ್ಟಡ ಪಾಳು ಬಿದಿದ್ದೆ ಶಿಕ್ಷಣಕೇಂದ್ರವಾಗಿ ಬೆಳೆಯಬೇಕಾಗಿದ್ದ ಅರಸೀಕೆರೆ ಗ್ರಾಮ ದ ಕನಸು ಭಗ್ನವಾಗಿದೆ ಇದಲ್ಲದೆ ಇದೇ ಜಾಗದಲ್ಲಿ ಅರ್ ಎಂ ಎಸ್ ಸಿ ಶಾಲೆಯ ಕಟ್ಟಡವನ್ನು ಕಟ್ಟಿದ್ದು ಆರ್ ಎಂ ಎಸ್ ಎ ಶಾಲೆಯೂ ಸ್ಥಳಾಂತರ ವಾಗದೆ ಪಾವಗಡ ನಗರದಲ್ಲಿ ಕಸ್ತೂರಿ ಭಾ ಶಾಲೆಯಲ್ಲೇ ಅದರ ಪಾಠೋಪಕರಣಗಳು ಪೀಠೋಪಕರಣಗಳು ಹುಳು ತಿನ್ನುತ್ತಾ ಬಿದ್ದಿವೆ ಮಕ್ಕಳು ಮೂಲಭೂತ ಸೌಲಭ್ಯವಿಲ್ಲದೆ ಇದ್ದರೂ ಅನಿವಾರ್ಯವಾಗಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಹೀಗಾಗಿ ಪಾವಗಡತಾಲ್ಲೂಕಿನ ಅದರ್ಶಶಾಲೆಗೆ ಗ್ರಹಣ ಹಿಡಿದ ಶಾಲೆಯಾಗಿ ಮಾರ್ಪಟ್ಟಿದೆ ಈಗಲಾದರೂ ಚುನಾಯಿತ ಪ್ರತಿನಿಧಿಗಳು ಆಸಕ್ತಿ ವಹಿಸಿ ಶಾಲೆ ಸ್ಥಳಾಂತರ ಮಾಡುವ ಮೂಲಕ ಕಟ್ಟಡದ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಗ್ರಾಮೀಣ ಮಕ್ಕಳಿಗೆ ಆದರ್ಶಶಾಲೆಯಲ್ಲಿ ಓದುವ ಕನಸನ್ನು ನನಸಾಗಿಸಬೇಕು ಎಂಬುದೇ ನಿರೀಕ್ಷೆಯಾಗಿದೆ.
ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ ಗೋಟೋರಿ ಅವರು ಪಾವಗಡ ನಗರದಲ್ಲಿ ಶಾಲೆ ನಡೆಯುತ್ತಿರುವ ಸ್ಥಳಕ್ಕೆ ಮತ್ತು ಅರಸೀಕೆರೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕಟ್ಟಡವನ್ನು ವೀಕ್ಷಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂರುತ್ತೇನೆ ಎಂದು ತಿಳಿಸಿದ್ದಾರೆ.
ಈ ವೇಳೆ ಮಧುಗಿರಿ ಡಿ.ಡಿ.ಪಿ.ಐ.ಗಿರಿಜಮ್ಮ.ತಹಶಿಲ್ದಾರ ವರದರಾಜೆ.ಕ್ಷೇತ್ರ ಶಿಕ್ಷಣಾಧಿಕಾರಿ ಇಂದಿರಮ್ಮ. ಅರಸೀಕೆರೆ ಗ್ರಾಮಸ್ಥರು ತಿಪ್ಪೆಸ್ವಾಮಿ.ಇತರರು ಇದ್ದರು.
(Visited 1 times, 1 visits today)