ತುಮಕೂರು: ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಎಂಜಿನಿಯರಿAಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಲೀಲಾ ಬಿ.ಎನ್. ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಸಂದಿದೆ. ಲೀಲಾ ಬಿ.ಎನ್. ಅವರು, ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಡಸ್ಟಿçÃಯಲ್ ಇಂಜಿನಿಯರಿAಗ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ಎನ್.ಡಿ.ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ‘ಇನ್ವೆಸ್ಟೀಗೇಷನ್ ಆಪ್ ಸ್ಟçಕ್ಚರ್ , ಮೆಕಾನಿಕಲ್ ಪ್ರಾಪರ್ಟೀಸ್, ವೇರ್ ಪ್ರಾಪರ್ಟೀಸ್ ಅಂಡ್ ಮೆಷಿನಬಲಿಟೀ, ಎವಾಲಿಯೇಷನ್ ಆಫ್ ಎ16061 ಅಲೈ ಸಬ್ಜೆಕ್ಟೆಟೆಡ್ ಟು ಬಾರೋನ್ ಕಾರ್ಬೈಡ್ ರೀಇನ್ಪೊರ‍್ಸ್ಮೆಂಟ್’ ವಿಷಯ ಕುರಿತ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರತಿದೆ. ತುಮಕೂರು ನಗರದ ವಾಸಿಯಾದ ಲೀಲಾ ಬಿ.ಎನ್. ಅವರು ಎಸ್‌ಎಸ್‌ಐಟಿಯ ಮೆಕಾನಿಕಲ್ ಎಂಜಿನಿಯರಿAಗ್ ಎಂಜಿನಿಯರಿAಗ್ ವಿಭಾಗದಲ್ಲಿ ಕಳೆದ 5 ವರ್ಷದಿಂದ ಹಾಗೂ ಇತರೆ ಸಂಸ್ಥೆಗಳಲ್ಲಿ 10 ವರ್ಷದಿಂದ ಸಹಾಯಕ ಪ್ರಾಧ್ಯಾಪಕರಾಗಿ ರಾಜ್ಯ ಮತ್ತು ರಾಷ್ಟಿçÃಯ ಮಟ್ಟದಲ್ಲಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗÀಳನ್ನು ಮಂಡಿಸಿದ್ದಾರೆ.ಅಭಿನAದನೆ: ವಿಟಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಲೀಲಾ ಬಿ.ಎನ್ ಅವರನ್ನು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ವಿಭಾಗದ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಅಭಿನಂದಿಸಿದೆ.

(Visited 1 times, 1 visits today)