ಚಿಕ್ಕನಾಯಕನಹಳ್ಳಿ; ವಕ್ಫ್ ಆಸ್ತಿ ವಿಷಯ ಹುಟ್ಟಾಕಿರೋರೇ ಬಿಜೆಪಿಗರು ಈ ಆಸ್ತಿ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯ ಅಧ್ಯಕ್ಷ ಎಚ್ ಎಂ ರೇವಣ್ಣ ಹೇಳಿದರು.
ಅವರು ಚಿಕ್ಕನಾಯಕನಳ್ಳಿಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರಿಸುತ್ತಾ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ವಕ್ಫ್ ಆಸ್ತಿಗಳನ್ನು ಉಳಿಸುವಂತೆ ಬರೆದಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರದ ಆದೇಶವನ್ನು ಪಾಲಿಸಲು ಹೊರಟಿತ್ತು.
ಮಸೀದಿ ಹಾಗೂ ಮಸೀದಿಯ ಜಾಗ ಕಬ್ರ ಸ್ಥಾನ ಮತ್ತು ಅದರ ಜಾಗ ದರ್ಗಾ ಹಾಗೆ ಅದರ ಜಾಗ ಇವೆಲ್ಲವನ್ನು ದೇಣಿಗೆ ಕೊಟ್ಟಿರುವುದು ಬರುತ್ತದೆ ಒರೆತು ಇದು ಯಾವುದು ರೈತರ ಜಾಗವಲ್ಲ ಬಿಜೆಪಿಗರು ಸುಳ್ಳನ್ನೇ ಮನೆ ದೇವರನ್ನಾಗಿ ಸಿಕೊಂಡು ಬೂಟಾಟಿಕೆ ಮಾಡುತ್ತಾ ಅವರು ಇಂತಹದರಲ್ಲಿ ಕಾಲ ಕಳೆಯುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗಲೇ ವಕ್ಫ್ ಆಸ್ತಿಯ ಬಗ್ಗೆ 2000ಕ್ಕೂ ಹೆಚ್ಚು ನೋಟಿಸ್ ಅನ್ನು ನೀಡಿದ್ದು ಅಲ್ಲದೆ ಬಿಜೆಪಿಯ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಆಗ ಕಮಿಟಿ ಅಧ್ಯಕ್ಷರಾಗಿದ್ದಾಗ ಅವರೇ ವಕ್ಫ್ ಆಸ್ತಿಯ ಗುರುತಿಸುವ ಕಾರ್ಯಕ್ಕೆ ಹುಟ್ಟು ಹಾಕಿದ್ದರು ಅದನ್ನು ಯಡಿಯೂರಪ್ಪ ವಿಧಾನಸೌಧದಲ್ಲಿ ಹುಟ್ಟಿ ಹಾಕಿದರು ಇಂದು ಅವರಿಂದಲೇ ಬೀದಿಗಿಳಿದು ಕುಮಾರ್ ಬಂಗಾರಪ್ಪ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಹಾಸ್ಯಾಸ್ಪದ ಎಂದು ಅವರು ಇಂತಹ ಬೆಳವಣಿಗೆಗಳು ಬಿಜೆಪಿಗೆ ಶೋಭೆ ತರುವಂತದ್ದಲ್ಲ. ಸರ್ಕಾರದಿಂದ ಆಗಬಾರದಂತ ತಪ್ಪಾಗಿದ್ದರೆ ನಿಜಕ್ಕೂ ವಿರೋಧ ಮಾಡಿ ಹೋರಾಟ ಮಾಡಲಿ. ನ್ಯಾಯೋಚಿತವಲ್ಲದ ವಿಷಯ ಗಳನ್ನು ಮುಂದಿಟ್ಟುಕೊAಡು ಹೋರಾಟ ಮಾಡಲು ಹೊರಟಿರುವುದು ಯಾವ ನ್ಯಾಯ. ಬಿಜೆಪಿ ಹೊಡೆದ ಮನೆಯಾಗಿ ಮೂರು ಬಾಗಿಲಾಗಿದೆ. ಯತ್ನಾಳ್, ಪ್ರಹಲ್ಲಾ ಜೋಶಿ ವಿಜಯೇಂದ್ರ ಯಾರ್ ಮಾತನ್ನು ಪರಿಗಣಿಸಲು ಸಾಧ್ಯವಾಗುತ್ತದೆ ಎಂದರು. ಪಕ್ಷದ ಮುಖಂಡರುಗಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸೇರಿದಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ, ನಿಖಿತ್ ರಾಜ್ ಮೌರ್ಯ ಉಪಸ್ಥಿತರಿದ್ದರು.

(Visited 1 times, 1 visits today)