ತುರುವೇಕೆರೆ: ರೈತರು ತಮ್ಮ ಕೃಷಿಯಲ್ಲಿ ಅದುನಿಕತೆ ಅಳವಡಿಸಿಕೊಂಡು ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಬೇಕು ಎಂದು ರಾಜ್ಯ ಸರ್ಕಾರದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ಬಳಿಯ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ವತಿಯಿಂದ ನೂತವಾಗಿ ಪ್ರಾರಂಬವಾಗಿರುವ ಖಾಸಗಿ ಕೃಷಿ ವಿಜ್ಞಾನ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು ರೈತರು ಸಂಪ್ರಾದಾಯಿಕ ಕೃಷಿ ಮಾಡುವ ಬದಲು ಕೃಷಿಯಿಂದ ಯಾವ ರೀತಿಯಲ್ಲಿ ಲಾಭ ಮಾಡಬೇಕು ಎಂಬುದನ್ನು ರೈತರು ಕಲಿಯಬೇಕಿದೆ. ರೈತರು ತಮ್ಮ ಜಮೀನಿನಲ್ಲಿ ಒಂದೇ ಬೆಳೆ ಬೆಳೆಯುವ ಬದಲು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿವಿದ ಬೆಳೆಗಳ ಸಂಶೋದನೆ ಮಾಡಿದ ತೆಳಿಗಳನ್ನು ಆಯ್ಕೆ ಮಾಡಿಕೊಂಡು ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆದು ಸರ್ಕಾರದಿಂದ ಸಿಗುವಂತಹ ಸವಲತ್ತು ಪ್ರೋಜನ ಪಡೆದುಕೊಂಡು ಕೃಷಿ ಮಾಡುವಂತೆ ಸಲಹೆ ನೀಡಿದರು.

ಸುಮಾರು 57 ವರ್ಷಗಳ ನಂತರ ಖಾಸಗಿ ಕೃಷಿ ವಿಜ್ಞಾನ ಕಾಲೇಜು ಸರ್ಕಾರ ನೀಡಲಾಗಿದೆ. ಸರ್ಕಾರದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಕೃಷಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಇತ್ತು. ಪ್ರತಿ ವರ್ಷ ಸರ್ಕಾರದ ಕೃಷಿ ವಿಶ್ವವಿದ್ಯಾನಿಯದಲ್ಲಿ ಕೃಷಿ ಕಾಲೇಜಿನಲ್ಲಿ ಕೃಷಿ ಪಧವಿ ಪಡೆಯಲು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲಿದ್ದು. ರಾಜ್ಯದಲ್ಲಿ ಸಿಇಟಿ ಮೂಲಕ ಕೇವಲ 5000 ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಲಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾದನೆ ಮಾಡುವ ಉದ್ದೇಶದಿಂದ ಕೃಷಿ ವಿಶ್ವವಿದ್ಯಾನಿಲಗಳಲ್ಲಿ ಇದ್ದ ನಿಬಂದನೆ, ಗೊಂದಲಗಳನ್ನು ನಿವಾರಿಸಿ ಮುಖ್ಯಮಂತ್ರಿಗಳು, ಸಚಿವರ ಬಳಿ ಚರ್ಚಿಸಿ ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್ಗೆ ಖಾಸಗಿ ಕೃಷಿ ವಿಜ್ಞಾನ ಕಾಲೇಜು ನೀಡಲಾಗಿದೆ ಎಂದರು.
ದಿವ್ಯ ಸಾನಿದ್ಯವನ್ನು ಆದಿಚುಂಚನಗಿರಿ ಮಠದ ಪೀಠಾದ್ಯಕ್ಷ ಡಾ. ನಿರ್ಮಾಲನಂದ ಸ್ವಾಮೀಜಿ ಮಾತನಾಡಿ ದೇಶದ ಶೇ 60 ರಷ್ಟು ಜನರು ಹಳ್ಳಿಗೃಉ ಅದಲ್ಲಿ ಶೇ 50ರಷ್ಟು ಜನರು ವ್ಯವಸಾಯ ಮಾಡಿ ದುಡಿಮೆ ಮಾಡುತ್ತಾರೆ. ಕೃಷಿಯಿಂದ ಶೇ 18 ರಷ್ಟು ಮಾತ್ರ ದೇಶಕ್ಕೆ ಜಿ.ಡಿ.ಪಿ ಆದಾಯ ಬರುತ್ತಿದೆ. ನಮ್ಮ ದೇಶದಲ್ಲಿ ಕೃಷಿ ವಿಜ್ಞಾನವಾಗಿ ಮಾರ್ಪಟಿಲ್ಲ ಕೃಷಿ ಕೃಷಿಯಾಗಿಯೇ ಉಳಿದಿದೆ. ಬೇರೆ ದೇಶದ ರೈತರು ಉತ್ಪಾದನೆ ಮಾಡುವಷ್ಟು ನಮ್ಮ ರೈತರು ಮಾಡಲು ಸಾದ್ಯವಾಗುತ್ತಿಲ್ಲ. ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಬೇಕಿದೆ. ಕೃಷಿ ಸಚಿವರು ಬಹಳ ರಿಸ್ಕ್ ತೆಗೆದುಕೊಂಡು ನಮ್ಮ ಶಿಕ್ಷಣ ಸಂಸ್ಥೆಗೆ ಕೃಷಿ ವಿಜ್ಞಾನ ಕಾಲೇಜು ನೀಡಿದ್ಧಾರೆ ಅವರಿಗೆ ಮಠದ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.

ರೈತ ಗೀತೆಗೆ ಅವಮಾನ : ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳು ರೈತ ಗೀತೆಯನ್ನು ಹಾಡಿದರು ಆದರೆ ಕೃಷಿ ಸಚಿವರು ಸೇರಿದಂತೆ ಗಣ್ಯರು ಯಾರು ಸಹ ಎದ್ದು ನಿಂತು ಗೌರವ ನೀಡದೇ ಅಗೌರವ ತೋರಿದರು. ಕಾರ್ಯಕ್ರಮ ಆಯೋಜಕರು ರೈತ ಗೀತೆಗೆ ಎಲ್ಲರೂ ಎದ್ದು ನಿಂತು ಗೌರವ ನೀಡುವಂತೆ ಸಲಹೆಯನ್ನು ಸಹ ನೀಡಲಿಲ್ಲ. ಕೃಷಿ ವಿಜ್ಞಾನ ಕಾಲೇಜು ಉದ್ಗಾಟನೆಯಲ್ಲಿ ರಾಜ್ಯದ ಅನ್ನದಾತನಿಗೆ ಹಾಗೂ ರೈತ ಗೀತಗೆ ಅವಮಾನ ಮಾಡಿದರು ಎಂದು ನೆರದಿದ್ದ ರೈತರು ಅಸಮಾದಾನ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೂ ಮುನ್ನಾ ಶಾಲಾ ಮಕ್ಕಳು ಆಯೋಜಿಸಿದ್ದ ಮಕ್ಕಳ ಸಂತೆಗೆ ಕೃಷಿ ಸಚಿವ ಬೇಟಿ ನೀಡಿ ಮಕ್ಕಳ ವ್ಯಾಪಾರವನ್ನು ಪರಿಶೀಲಿಸಿದರು. ಶ್ರೀ ಮಠದ ಪರವಾಗಿ ಡಾ. ನಿರ್ಮಾಲಾನಂದ ಸ್ವಾಮೀಜಿ ಹಸಿರು ಶಾಲು ಹೊದಿಸಿ ಸಚಿವ ಚಲುವರಾಯಸ್ವಾಮಿಯರನ್ನು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥಸ್ವಾಮೀಜಿ, ವಿವಿದ ಶಾಖಾ ಮಠದ ಸ್ವಾಮಿಜಿಗಳಾದ ಸೋಮನಾಥಸ್ವಾಮೀಜಿ, ಮಂಗಳಾನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ. ಎಸ್.ವಿ.ಸುರೇಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಎ.ಶೇಖರ್, ಆದಿಚುಂಚನಗಿರಿ ಮಠದ ಸಿಇಓ ಎನ್.ಎಸ್.ರಾಮೇಗೌಡ, ಕೃಷಿ ವಿಜ್ಞಾನ ಕಾಲೇಜು ಪ್ರಾಚಾರ್ಯ ಶಿವಲಿಂಗೇಗೌಡರು ಇತರರು ಇದ್ದರು.

(Visited 1 times, 1 visits today)