ತುಮಕೂರು: ಮುಂಜಾನೆ ಗೆಳೆಯರ ಬಳಗ ಹಾಗೂ ವಿಘ್ನೇಶ್ವರ ಗೆಳೆಯರ ಬಳಗದವತಿಯಿಂದ ನಗರದ ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ 2024ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪಡೆದ ವೀರಶೈವ ಬ್ಯಾಂಕಿನ ಉಪಾಧ್ಯಕ್ಷರಾದ ಹೆಬ್ಬಾಕ ಮಲ್ಲಿಕಾರ್ಜುನಯ್ಯ ಅವರಿಗೆ ಅಭಿನಂದನೆ ಹಾಗೂ ಗೆಳೆಯರ ಬಳಗದ ಮಾರ್ಕೇಟ್ ದಿನೇಶ ಮತ್ತು ಕೃಷ್ಣರಾವ್ ಅವರ ಹುಟ್ಟು ಹಬ್ಬದ ಅಂಗವಾಗಿ ಮೂವರನ್ನು ಅಭಿನಂದಿಸಲಾಯಿತು.
ಮುAಜಾನೆ ಗೆಳೆಯರ ಬಳಗದ ಅಧ್ಯಕ್ಷ ಹಾಗೂ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಮಾತನಾಡಿ,ವಿದ್ಯಾರ್ಥಿ ದಿಸೆಯಿಂದಲೂ ನಾಯಕತ್ವದ ಗುಣ ಹೊಂದಿರುವ ಹೆಬ್ಬಾಕ ಮಲ್ಲಿಕಾರ್ಜುನ್ ಅವರು,ಸಹಕಾರ ಕ್ಷೇತ್ರವಲ್ಲದೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ರೀತಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ.ಕ್ರೀಡಾಪಟುಗಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಅವರು ರಾಜ್ಯಮತ್ತು ರಾಷ್ಟçಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಿದ್ದಾರೆ.ಅವರಿಗೆ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ನಮ್ಮಂತಹ ಹಲವರಿಗೆ ಸಂತೋಷವಾಗಿದೆ.ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡುವಂತಾಗಲಿ ಎಂದರು
ಮುAಜಾನೆ ಗೆಳೆಯರ ಬಳಗದ ಧನಿಯಕುಮಾರ್ ಮಾತನಾಡಿ, ಸರಳ ಸಜ್ಜನಿಕೆಗೆ ಹೆಸರಾದ ಹೆಬ್ಬಾಕ ಮಲ್ಲಿಕಣ್ಣ ಅವರಿಗೆ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇವರಿಗೆ ಸಹಕಾರರತ್ನ ಪ್ರಶಸ್ತಿ ನೀಡಿ,ಸಹಕಾರ ಯೂನಿಯನ್ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ.ಇವರೊAದಿಗೆ ಜಿಲ್ಲೆಯ 18 ಜನರು ಈ ಬಾರಿ ಸಹಕಾರ ರತ್ನ ಪ್ರಶಸ್ತಿ ಪಡೆದಿದ್ದು,ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರುಗಳು ಅರ್ಹರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ವೇಳೆ ಮುಂಜಾನೆ ಗೆಳೆಯರು ಬಳಗದ ಟಿ.ಕೆ.ಆನಂದ್, ಮಧು, ಮಲ್ಲಿಕಾರ್ಜುನಸ್ವಾಮಿ,ವೆಂಟಕೇಶ್ವಸ್ವಾಮಿ, ಚಂದ್ರಮೌಳಿ,ಧನಿಯಕುಮಾರ್, ವೆಂಕಟೇಶ್ವ, ದಿನೇಶ, ಉದಯ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)