ತುರುವೇಕೆರೆ:
ನಾನು ಈ ತಾಲೂಕಿನ ಶಾಸಕ ಇಲ್ಲಿಗೆ ಒಂದು ರೂಪಾಯಿ ಅಭಿವೃದ್ದಿ ಕಾಮಗಾರಿಗೆಂದು ಮುಂಜೂರಾದರೂ ಅದು ನನ್ನ ಪರಿಶ್ರಮ ಎಂದು ಶಾಸಕ ಮಸಾಲೆ ಜಯರಾಮ್ ರವರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ತಿರುಗೇಟು ನೀಡಿದ್ದಾರೆ.
ತಾಲೂಕಿನ ಅಭಿವೃಧ್ದಿ ಗಮನದಲ್ಲಿರಿಸಿಕೊಂಡು ಕೇಂದ್ರ ಸಚಿವರಾದ ನಿತಿನ್ ಗಢ್ಕರಿಯವರಿಗೆ 500ಕೋಟಿ ರೂಪಾಯಿಗಳ ಅನುದಾನವನ್ನು ಮುಂಜೂರು ಮಾಡುವಂತೆ ಮನವಿ ಪತ್ರ ಸಲ್ಲಿಸಲಾಗಿದ್ದು, ಇದು ಹಂತ ಹಂತವಾಗಿ ಬಿಡುಗಡೆಯಾಗುತ್ತಲಿದೆ ಹಾಗೂ ಬೆಳಗಾವಿಯಲ್ಲಿ ನಡೆದ ಸದನದಲ್ಲಿಯೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅಭಿವೃದ್ದಿ ಕಾಮಗಾರಿಗಳಿಗೆ ಬೇಕಾಗಿರುವ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಲಾಗಿದ್ದು, ನನ್ನ ತಾಲೂಕಿನ ಅಭಿವೃದ್ದಿ ಬಗ್ಗೆ ನನಗೆ ಅರಿವಿದೆ ನಾನು ಈ ತಾಲೂಕಿನ ಶಾಸಕ. ಇಲ್ಲಿಗೆ ಒಂದು ರೂಪಾಯಿ ಅಭಿವೃದ್ದಿ ಕಾಮಗಾರಿಗೆಂದು ಮುಂಜೂರಾದರೂ ಅದು ನನ್ನ ಫರಿಶ್ರಮದಿಂದ ಮಾತ್ರ ಎಂದು ಶಾಸಕ ಮಸಾಲೆ ಜಯರಾಮ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ತಿರುಗೇಟು ನೀಡಿದರು.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹೋರಾಟದ ಮೂಲಕ ರಾಜಕಾರಣಕ್ಕೆ ಬಂದವನು ಶಾಸಕನಾಗಿ ಮೊದಲ ಬಾರಿಗೆ ಆಯ್ಕೆಯಾದರೂ ತಾಲೂಕಿನ ಸಮರ್ಗ ಅಭಿವೃದ್ದಿಯ ಕನಸನ್ನು ಹೊಂದಿದ್ದೇನೆ, ಬೆಳಗಾವಿಯಲ್ಲಿ ನಡೆದ ಅದಿವೇಶನದಲ್ಲಿ ವೃಥಾ ಕಾಲಹರಣ ಮಾಡದೆ ತಾಲೂಕಿನ ಸಮರ್ಗ ಅಭಿವೃದ್ದಿ ಕುರಿತು ಚರ್ಚಿಸಿದ್ದೇನೆ, ಈಗಾಗಲೇ 65ರಿಂದ 70ಕೋಟಿರೂಪಾಯಿಗಳ ಅನುದಾನ ತಾಲೂಕಿಗೆ ಬಂದಿದ್ದು, ಕೂಡಲೇ ಅದರ ಪಟ್ಟಿಯನ್ನು ದಾಖಲೆ ಸಮೇತ ಬಿಡುಗಗೊಳಿಸುತ್ತೇನೆ, ಮುಂಬರುವ ಬರಗಾಲವನ್ನು ಗಮನದಲ್ಲಿರಿಸಿಕೊಂಡು ನೀರಿನ ಬವಣೆ ನೀಗಿಸಲು ಸಮರೋಪಾದಿಯಲ್ಲಿ ಸಿದ್ದತೆಗಳು ನಡೆದಿದೆ, ಪಟ್ಟಣದ ಯುಜಿಡಿ ಕಾಮಗಾರಿಗೆ ಕಾಯಕಲ್ಪ ಕಲ್ಪಿಸುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಗುವುದು, ಹಾಗೂ ವಾಣಿಜ್ಯ ಸಂಕೀರ್ಣ ಕಾಮಗಾರಿಗೆ 1.50ಕೋಟಿರೂಪಾಯಿಗಳ ಅನುದಾನ ಬಿಡುಗಡೆಗೊಂಡಿದ್ದು ಶೀಗ್ರದಲ್ಲಿಯೇ ಕಾಮಗಾರಿಗೆ ಮರು ಚಾಲನೆ ನೀಡಲಾಗುವುದು.
ತಾಲೂಕಿನ ಅಜ್ಜನಹಳ್ಳಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳುತ್ತಿದ್ದಾರೆ ಆದರೆ ಚಿನ್ನದ ಗಣಿ ನೆಡೆಸಲು ನಾನು ಅವಕಾಶ ಕೊಡುವುದಿಲ್ಲ, ಇದರಿಂದಾಗಿ ಅಂತರ್ಜಲ ಬತ್ತಿಹೋಗಿ ಕುಡಿಯಲು ನೀರು ಸಿಗದಂತ ಪರಿಸ್ಥಿತಿ ಎದುರಾಗುತ್ತದೆ ಹಾಗೂ ತಾಲೂಕಿನ ರೈತರು ಊರುಗಳನ್ನು ತೊರೆಯುವ ಪರಿಸ್ಥಿತಿ ಎದುರಾಗುತ್ತದೆ ಆದ್ದರಿಂದ ಚಿನ್ನದ ಗಣಿಗೆ ನನ್ನ ಸಂಪೂರ್ಣ ವಿರೋಧವಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಗಣಿ ಫ್ರಾರಂಭವಾಗಲು ಬಿಡುವುದಿಲ್ಲ ಎಂದರು.
ಪಕ್ಷದ ಅಧ್ಯಕ್ಷ ದುಂಡ ರೇಣುಕಯ್ಯ ಮಾತನಾಡಿ ಮಾಜಿ ಶಾಸಕ ಕೃಷ್ಣಪ್ಪನವರು ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ ಕಾಮಗಾರಿಯನ್ನು ತಾಲೂಕಿಗೆ ತರಲು ಅವರೇನು, ಎಂ.ಪಿ.ಯೋ, ಎಂ.ಎಲ್.ಎ. ಅತವಾ ಸಚಿವರೇ ಈ ರೀತಿ ಕೀಳು ಮಟ್ಟದ ರಾಜಕಾರಣ ಮಾಡುವುದನ್ನು ಬಿಟ್ಟು, ನಮ್ಮ ಶಾಸಕರಿಗೆ ಸಹಕಾರ ನೀಡಲಿ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ಟಿ.ಸಿ.ರಾಜು, ಪಕ್ಷದ ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ಡಿ.ಆರ್.ಬಸವರಾಜು, ಜಿ.ವಿ.ಪ್ರಕಾಶ್, ಸೋಮೇನಹಳ್ಳಿಜಗಧೀಶ್, ಸೋಮಶೇಕರ್, ಮಂಜುನಾಥ್ ಇತರರು ಇದ್ದರು.