ತುಮಕೂರು: ಜಗತ್ತಿಗೆ ಯೋಗ ಹೇಳಿಕೊಟ್ಟವರು ಭಾರತೀಯರು.ಆದರೆ ಇಂದು ಪ್ರಪಂಚದಲ್ಲಿ ಯೋಗ ಅಭ್ಯಾಸವಿಲ್ಲದ ದೇಶಗಳೇ ಇಲ್ಲ.ಇದು ಭಾರತೀಯರೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದು ಯೋಗ ಗುರು ಡಾ.ಎಂ.ಕೆ.ನಾಗರಾಜರಾವ್ ತಿಳಿಸಿದ್ದಾರೆ.
ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜು ಯೋಗಾಸನ ಸ್ಪರ್ಧೆ ಹಾಗೂ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಸಮೀಕ್ಷೆಯ ಪ್ರಕಾರ 2028ನೇ ವರ್ಷದ ವೇಳೆಗೆ ಜಗತ್ತಿನಲ್ಲಿ 18 ಮಿಲಿಯನ್ ಯೋಗ ಮ್ಯಾಟ್‌ಗಳು ಮಾರಾಟವಾಗಲಿವೆ ಎಂಬ ನಿರೀಕ್ಷೆಯಿದೆ ಎಂದರು.
ಯೋಗ ಎನ್ನುವಂತಹದ್ದು, ಅನುಭವಿಸಿ ಮಾಡುವ ಒಂದು ದೈಹಿಕ ಚಟುವಟಿಕೆ. ಯೋಗಕ್ಕೆ ಭಾರತವೇ ತವರೂರಾದರೂ ವಿದೇಶಗಳ ರೀತಿ ಶಿಸ್ತು ಮತ್ತು ಶಾಸ್ತಿçÃಯ ಬದ್ದ ಅಭ್ಯಾಸ ನಮ್ಮಲ್ಲಿ ಕಡಿಮೆಯಾಗಿದೆ.ಇದು ಭಾರತೀಯರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರವಾಗಿದೆ. ಯೋಗವನ್ನು ಒಂದು ಚಿಕಿತ್ಸೆ,ಔಷದಿ ಎನ್ನುವ ರೀತಿಯಲ್ಲಿ ನೋಡುವ ಬದಲು ಒಂದು ಜೀವನ ಕ್ರಮವಾಗಿ ಅಳವಡಿಸಿಕೊಂಡರೆ ಹೆಚ್ಚಿನ ಉಪಯೋಗವಾಗಲಿದೆ.45ವರ್ಷದ ನಂತರ ಒಂದಿಲೊAದು ರೋಗವಿಲ್ಲ ಎಂದು ಹೇಳುವ ಮನುಷ್ಯರ ಅಪರೂಪವಾಗಿದ್ದಾರೆ.ಯೋಗ ಮನುಷ್ಯನಿಗೆ ಸರ್ವತೋಮುಖ ಮತ್ತು ಸಂಪೂರ್ಣ ಆರೋಗ್ಯ ನೀಡುವ ಕ್ರಮ ಎಂದು ಡಾ.ಎಂ.ಕೆ.ನಾಗರಾಜರಾವ್ ನುಡಿದರು.
ದೇಹದ ಎಲ್ಲಾ ಜಾಯಿಂಟ್‌ಗಳನ್ನು ಉಪಯೋಗಿಸುವ ಮಾಡುವ ದೈಹಿಕ ಚಟುವಟಿಕೆಯೇ ಯೋಗ. ಶರೀರದ ಎಲ್ಲಾ ಕೀಲುಗಳನ್ನು ಉಪಯೋಗಿಸುವ ಯೋಗ ಮಾಡುವುದರಿಂದ ರೋಗ ರಹಿತ ಜೀವನ ನಡೆಸಬಹುದು. ಇದೇ ನಿಜವಾದ ರಾಷ್ಟçಸೇವೆ.ಯೋಗ ಸ್ಪರ್ಧೆ ಏರ್ಪಡಿಸುವ ಮೂಲಕ ವಿದ್ಯೋದಯ ಕಾನೂನು ಕಾಲೇಜು ಪ್ರಶಂಶನೀಯ ಕೆಲಸ ಮಾಡಿದೆ. ಎಲ್ಲರೂ ಚನ್ನಾಗಿ ಯೋಗ ಪ್ರದರ್ಶನ ನೀಡಲಿ ಎಂದು ಡಾ.ಎಂ.ಕೆ.ನಾಗರಾಜರಾವ್ ಶುಭ ಹಾರೈಸಿದರು.
ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥ ಆರ್.ಎ.ಸುರೇಶಕುಮಾರ್ ಮಾತನಾಡಿ,ಒತ್ತಡದ ಜೀವನದಿಂದ ಮುಕ್ತರಾಗಿ, ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿಯಾಗಿದೆ.ಇದೊಂದು ವಿಶ್ವಿಷ್ಟ ಜೀವನ ಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಗುರು ಹಾಗೂ ವಿದ್ಯೋದಯ ಪೌಂಢೇಷನ್‌ನ ಸಿಇಓ ಪ್ರೊ.ಕೆ.ಚಂದ್ರಣ್ಣ, ಎರಡು ದಿನಗಳ ಕಾಲ ನಡೆಯುವ ಈ ಯೋಗ ಸ್ಪರ್ಧೆ ರಾಜ್ಯಮಟ್ಟದ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯರಾಗಿ ಪಾಲ್ಗೊಂಡು, ತಾವು ಪ್ರತಿನಿಧಿಸುವ ಕಾಲೇಜುಗಳಿಗೆ ಒಳ್ಳೆಯ ಹೆಸರು ತರುವಂತೆ ಸಲಹೆ ನೀಡಿದರು.
ವಿದ್ಯೋದ್ಯಯ ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್.ವಿ., ಮಾತನಾಡಿ,ರಾಜ್ಯದ 20ಕ್ಕೂ ಹೆಚ್ಚು ಕಾನೂನು ಕಾಲೇಜುಗಳ 150ಕ್ಕೂ ಹೆಚ್ಚು ಯೋಗಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡಿದವರು, ಒರಿಸ್ಸಾದಲ್ಲಿ ನಡೆಯುವ ರಾಷ್ಟçಮಟ್ಟದ ಅಂತರ ವಿವಿ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆರ್ಹತೆ ಪಡೆಯುತ್ತಾರೆ ಎಂದರು.
ವೇದಿಕೆಯಲ್ಲ್ಲಿ ವಿದ್ಯೋದಯ ಪೌಂಢೇಷನ್‌ನ ಮ್ಯಾನೇಜಿಂಗ್ ಟ್ರಸ್ಟಿ ಹೆಚ್.ಎಸ್.ರಾಜು,ವಿದ್ಯೋದ್ಯಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಮ ಸೈಯಿದ್, ಐಕ್ಯೂಎಸಿ ಸಂಚಾಲಕರಾದ ಕುಮಾರ್.ಎನ್.ಹೆಚ್,ವಿದ್ಯೋದಯ ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಕಿಶೋರ್.ವಿ, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪುಷ್ಪ.ಕೆ.ಎಸ್, ಟ್ರಸ್ಟಿ ಕೃಷ್ಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ವೇಳೆ ಯೋಗ ಸಾಧಕರಾದ ಮಹಾವೀರ ನಿಟ್ಟೂರು ಅವರನ್ನು ವಿದ್ಯೋದ್ಯಯ ಕಾನೂನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.

(Visited 1 times, 1 visits today)