ತುಮಕೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ ಮತ್ತು ವಾಸವಿ ಪದವಿಪೂರ್ವ ಕಾಲೇಜು ತುಮಕೂರು ವತಿಯಿಂದ ಜೀವಶಾಸ್ತ್ರ ವಿಷಯದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ತುಮಕೂರು ನಗರದ ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಜೀವಶಾಸ್ತ್ರ ವಿಷಯದ ವೇದಿಕೆ ಮೂಲಕ ಸಿದ್ಧಪಡಿಸಿರುವ 2024-25 ನೇ ಸಾಲಿನ ದ್ವಿತೀಯ ಪಿಯುಸಿ ಜೀವಶಾಸ್ತ್ರ ವಿಷಯದ ಪ್ರಾಯೋಗಿಕ ಯೋಜಿತ ಕಾರ್ಯಗಳ ಕೈಪಿಡಿ ಬಿಡುಗಡೆ ಮಾಡಿದ ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಮಾತನಾಡಿ, ಜಿಲ್ಲೆಯ ಫಲಿತಾಂಶ ಹೆಚ್ಚಿಸಲೂ ನಿಮ್ಮ ಸಹಕಾರ ಅಗತ್ಯ. ಇಲಾಖೆಯ ನಿಯಮದಂತೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ. ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ನೀವು ಸಿದ್ಧಪಡಿಸಿದ ಮಾದರಿಯ ಪ್ರಶ್ನೆಪತ್ರಿಕೆ ನೋಡಿ ವಾರ್ಷಿಕ ಪರೀಕ್ಷೆಯನ್ನೂ ಯಾವುದೇ ಆತಂಕ ಪಡದೆ ಪರೀಕ್ಷೆಯನ್ನೂ ಬರೆಯಬೇಕು ಎಂದರು.
ಈ ವರ್ಷ ಪ್ರಾಯೋಗಿಕ ಪರಿಕ್ಷೆಯಲ್ಲಿ ವೆಬ್ ಕ್ಯಾಮರಾ ಎಲ್ಲಾ ಪರೀಕ್ಷಾ ಕೇಂದ್ರಗಳು ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಎಲ್ಲಾ ಕಾಲೇಜಿನ ಮಕ್ಕಳು ನಮ್ಮ ಮಕ್ಕಳೇ ಎಂದು ತಿಳಿದು ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು. ತುಮಕೂರು ಜಿಲ್ಲೆ ಕಳೆದ ವರ್ಷ ದ್ವಿತೀಯ ಪಿಯುಸಿ ಪಲಿತಾಂಶದಲ್ಲಿ 24ನೇ ಸ್ಥಾನದಲ್ಲಿದ್ದು, ಈ ಶೈಕ್ಷಣಿಕ ಸಾಲಿನಲ್ಲಿ ಅತ್ಯುನ್ನತ ಸ್ಥಾನ ಪಡೆಯಲು ನಾವು ನೀವು ಒಟ್ಟಾಗಿ ಶ್ರಮಿಸೋಣ ಎಂದು ಹೇಳಿ, ಜೀವಶಾಸ್ತ್ರ ವಿಷಯದ ವಿಷಯ ಸಂಪನ್ಮೂಲ ವ್ಯಕಿಗಳಾದ ವೆಂಕಟೇಶ್, ನಾಗವೇಣಿ, ಡಾ. ದಿವಾಕರ ಹಾಗೂ ದಿನೇಶ್ ಎಂ.ವಿ. ರವರನ್ನು ಅಭಿನಂದಿಸಿದರು.
ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ಕೆ.ಎಂ. ಮಾತನಾಡಿ, ಉಪನಿರ್ದೇಶಕರ ಸಲಹೆಯ ಮೇರೆಗೆ ನಮ್ಮ ವೇದಿಕೆ ವತಿಯಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಎಲ್ಲಾ ಜೀವಶಾಸ್ತ್ರ ವಿಷಯದ ಪ್ರಾಚಾರ್ಯರ ಹಾಗೂ ಉನ್ಯಾಸಕರ ಸಹಕಾರದಿಂದ ವಾಸವಿ ಕಾಲೇಜಿನ ಉಪನ್ಯಾಸಕರು ಸಂಸ್ಥೆಯ ಮುಖ್ಯಸ್ಥರುಗಳಿಂದ ಈ ರೀತಿಯ ಉತ್ತಮ ಕಾರ್ಯಗಾರ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕಾಲೇಜಿನ ಪ್ರಾಚಾರ್ಯರು ಚಂದ್ರಶೇಖರ ಆರಾಧ್ಯ ಎಚ್.ವಿ. ಮಾತನಾಡಿ, ನಮ್ಮ ಜಿಲ್ಲೆಯ ಉಪನಿರ್ದೇಶಕರಾದ ಡಾ. ಬಾಲಗುರುಮೂರ್ತಿ ರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ರೀತಿಯ ಶೈಕ್ಷಣಿಕ ಕಾರ್ಯಾಗಾರಗಳು ಉಪನ್ಯಾಸಕರಲ್ಲಿ ಪರಿಣಿತಿಯನ್ನು ಹೆಚ್ಚಿಸಿ ಆತ್ಮವಿಶ್ವಾಸವನ್ನು ತುಂಬುಲು ಪ್ರೇರಣೆ ಎಂದರು.
ನಿರAತರ ಹೊಸ ವಿಚಾರಗಳಲ್ಲಿ ಉನ್ಯಾಸಕರು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ವೇದಿಕೆಯ ಪದಾಧಿಕಾರಿಗಳು, ವಿಷಯ ಸಂಪನ್ಮೂಲ ಉಪನ್ಯಾಸಕರು ಹಾಗೂ ವಾಸವಿ ಕಾಲೇಜಿನ ಉಪನ್ಯಾಸಕರಾದ ಹನುಮಂತಯ್ಯ, ಬೆಂಕಿ ವಸಂತಕುಮಾರ್, ಶಿವಣ್ಣ, ನರೇಂದ್ರಬಾಬು, ವಿನೋದ್, ಗೋವಿಂದರಾಜು, ನಟರಾಜು, ಸಂಧ್ಯಾ, ಪ್ರತಿಭಾ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)