ತುಮಕೂರು:

      ಪುಸ್ತಕಗಳು ಜೀವನದ ಸಂಗಾತಿ,ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವದರಿಂದ ಜಾÐನರ್ಜಾನೆ ಲಭಿಸುತ್ತದೆ ಹಾಗೂ ವಿದ್ಯಾರ್ಥಿಗಳು ಹೆಚ್ಚು- ಹೆಚ್ಚು ಪುಸ್ತಕಗಳನ್ನು ಓದಬೇಕು ,ವೃತಿಯ ಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಪ್ರೊ.ಕೆ.ಎಲ್.ರಾಮಲಿಂಗುರವರು ಪ್ರಶಿಕ್ಷಣಾರ್ಥಿಗಳಿಗೆ ಹೊರತಂದಿರುವ ಕಲಿಕೆ ಬೋಧನೆ ಮತ್ತು ಮೌಲ್ಯಾಂಕನ ಎಂಬ ಪುಸ್ತಕ ಹೆಚ್ಚು ಉಪಯುಕ್ತ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಎಸ್.ಜಗಧೀಶ್ ತಿಳಿಸಿದರು.

      ಇಂದು ನಗರದ ಶ್ರೀಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ(ಇಂದು) ಕಲಿಕೆ-ಬೋಧನೆ ಮತ್ತು ಮೌಲ್ಯಾಂಕನ ಎಂಬ ಪುಸ್ತಕ ಬಿಡುಗಡೆಮಾಡಿ ಮಾತನಾಡಿದರು.

      ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ.ವೈ.ಎಂ.ರೆಡ್ಡಿ ಮಾತನಾಡಿ ಈ ಪುಸ್ತಕದಲ್ಲಿ ಶಿಕ್ಷಣಕ್ಕೆ ಸಂಭದಿಸಿದಂತೆ ಎಲ್ಲವಿಚಾರಗಳನ್ನು ಒಳಗೊಂಡಿದೆ, ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.
ಪ್ರಾಂಶುಪಾಲರಾದ ಡಾ.ಗುರುಬಸಪ್ಪ ನವರು ಪುಸ್ತಕದ ಪರಿಚಯ ಮಾಡುತ್ತ ಬಿಇಡ್‍ನ ದ್ವೀತಿಯ ಸೆಮಿಸ್ಟ್‍ರ್ ವಿದ್ಯಾರ್ಥಿಗಳಿಗೆ ಉತ್ತಮ ಪುಸ್ತಕವಾಗಿದೆ,ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳನ್ನು ಬೋದಿಸಲು ಸಾದ್ಯವಿಲ್ಲ,ಪುಸ್ತಕಗಳು ಇನ್ನಷ್ಟು ಹೆಚ್ಚು ವಿಷಯಗಳನ್ನು ತಿಳಿಸುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಈ ಪುಸ್ತಕಗಳನ್ನು ಓದಬೇಕು ಎಂದರು.

      ಕಾರ್ಯಕ್ರಮದಲ್ಲಿ ಲೇಖಕರಾದ ಪ್ರೊ.ಕೆ.ಎಲ್.ರಾಮಲಿಂಗು,ಡಾ.ಕೆಎಸ್.ಕುಮಾರ್,ಕನ್ನಡ ವಿಭಾಗದ ಮುಖ್ಯಸ್ಥರಾದ ಪೊ.ಬಿ.ಮಂಜೇಗೌಡರು ಹಾಗು ಶಿಕ್ಷಣ ಸಂಸ್ಥೆಯ ವೃಂದವರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 148 times, 1 visits today)