ಚಿಕ್ಕನಾಯಕನಹಳ್ಳಿ: ಪಟ್ಟಣದ ಖಾಸಗಿಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಮಹಿಳೆಯರ ಶೌಚಾಲಯ ಕಟ್ಟಡ ಆರಂಭಗೊAಡು ವರ್ಷಕಳೆದರೂ ಕಾಮಗಾರಿ ಮುಗಿಯದ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಪುರಸಭಾ ಉಆಧ್ಯಕ್ಷರು ಸ್ಥಳಪರಿಶೀಲನೆ ನಡೆಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ ಕಳೆದ ಒಂದುವರ್ಷದಿAದ ನಡೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಮುಗಿಯದ ಈ ಕಟ್ಟಡದ ಕಾಮಗಾರಿಯ ಬಗ್ಗೆ ಸ್ಥಳೀಯರು ಪುರಸಭೆಯ ಗಮನಕ್ಕೆ ತಂದಾಗ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಉಪಾಧ್ಯಕ್ಷರಾದ ರಾಜಶೇಖರ್ ಆಗಮಿಸಿ ಕಟ್ಟಡವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಇತರರು ಸದರಿ ಕಟ್ಟಡದ ಕಳಪೆ ಕಾಮಗಾರಿಗಳ ಬಗ್ಗೆ ದೂರಿನ ಸುರಿಮಳೆಯನ್ನೆಸುರಿಸಿದರು. ಸದರಿ ಕಟ್ಟಡ ಅಭದ್ರವಾಗಿದೆ, ಒಂದು ದಿನವೂ ಕ್ಯೂರಿಂಗ್ ಕಾಣದೆ ಮೇಲ್ಚಾವಣಿ ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಿದೆ. ಶೌಚಾಲಯಕ್ಕೆ ಹಾಕಿರುವ ಎಲ್ಲಾ ಸಾಮಗ್ರಿಗಳು ಕಳಪೆಯಿಂದ ಕೂಡಿದ್ದು ಒಟ್ಟಾರೆ ಇಡೀ ಕಟ್ಟಡದ ಸ್ಥಿತಿ ಶೋಚನೀಯವಾಗಿದೆ ಎಂದು ದೂರಿದರು. ಕಟ್ಟಡ ನಿರ್ಮಾಣದ ವಿವಿದ ಹಂತದಲ್ಲಿ ಹಲವಾರು ಗುತ್ತಿಗೆದಾರರ ಕೈ ಬದಲಾಗಿದ್ದೆ ಈ ಸ್ಥಿತಿಗೆ ಕಾರಣವಾಗಿದೆ. ಈ ಕಾಮಗಾರಿಯಲ್ಲಿ ಭಾರಿ ಅವ್ಯಹಾರ ನಡೆದಿದ್ದು ಅಧಿಕಾರಿಗಳೂಸಹ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕೆಂದರು. ದೂರನ್ನು ಆಲಿಸಿದ ರಾಜಶೇಖರ್ ಮಾತನಾಡಿ ಕಟ್ಟಡದ ಸ್ಥಿತಿ ಗಮನಿಸದರೆ ಕಾಮಗಾರಿ ಕಳೆಪೆಯಾಗಿದೆ ಎಂದು ಕಾಣುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

(Visited 1 times, 1 visits today)