ಹುಳಿಯಾರು: ಕೇಂದ್ರ ಸರ್ಕಾರವು ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಬ್ಯಾಂಕುಗಳ ಮುಖಾಂತರ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿರುವುದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಯಳನಾಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾಧಿಕಾರಿ ಬಿ.ಆರ್.ರಕ್ಷಿತ್‌ಕುಮಾರ್ ತಿಳಿಸಿದರು. ಹುಳಿಯಾರು ಹೋಬಳಿಯ ಯಳನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಮ್ಮಡಿಹಳ್ಳಿ ಗ್ರಾಮದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಜಂಟಿಯಾಗಿ ಗುರುವಾರ ಏರ್ಪಡಿಸಿದ್ದ ಜನ ಸುರಕ್ಷಾ ಯೋಜನೆ ಅಭಿಯಾನದಲ್ಲಿ ಮಾತನಾಡಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಶ್ರೀ ಆರ್ ಎಂ ಕುಮಾರಸ್ವಾಮಿ ಮಾತನಾಡುತ್ತಾ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪೆನ್ಷನ್ ಯೋಜನೆ ಹಾಗೂ ಜನದನ್ ಖಾತೆ ಯೋಜನೆಗಳು ಜನರಿಗೆ ತುಂಬಾ ಉಪಯುಕ್ತವಾಗಿವೆ ಎಂದು ತಿಳಿಸಿದರು. ಈ ಶಿಬಿರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಯಳನಾಡು ಶಾಖೆಯ ನವೀನ್, ಬ್ಯಾಂಕ್ ಮಿತ್ರರಾದ ಧರಣೇಶ್, ಅಪ್ಸರ್, ರಾಜಶೇಖರ್ ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು.

(Visited 1 times, 1 visits today)