ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆ ಹೋಬಳಿ ದೊಡ್ಡರಾಂಪುರ ಗ್ರಾಮದಲ್ಲಿ ಅಮಾಯಕ ಕುಟುಂಬವೊAದು ಊಟ, ಬಟ್ಟೆಯಿಲ್ಲದೆ ಸೋರುವ ಮನೆಯಲ್ಲೇ ವಾಸ ಮಾಡುತ್ತಿತ್ತು, ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಇದನ್ನು ನೋಡಿದ ಜಿಲ್ಲಾಧಿಕಾರಿಗಳು ಆ ಕುಟುಂಬಕ್ಕೆ ಬೇಕಾದ ಸೌಲಭ್ಯ ಒದಗಿಸುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ.
ಇದನ್ನು ಮನಗಂಡ ತುಮಕೂರಿನ ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮತ್ತು ಅವರ ತಂಡ ದೊಡ್ಡರಾಂಪುರ ಗ್ರಾಮಕ್ಕೆ ತೆರಳಿ ಕುಟುಂಬದ ಸಮಸ್ಯೆ ಆಲಿಸಿ ನೆರವಾಗುವ ಭರವಸೆ ನೀಡಿದ್ದಾರೆ.
ಮತ್ತೆ ಗ್ರಾಮಕ್ಕೆ ತೆರಳಿ ದೊಡ್ಡಮ್ಮ ಅವರ ಕುಟುಂಬಕ್ಕೆಅಗತ್ಯ ಆಹಾರ ಸಾಮಗ್ರಿ, ಬಟ್ಟೆ ಸೇರಿದಂತೆ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗುಂಬ ವೆಂಕಟೇಶ್ ಆ ಬಡ ಕುಟುಂಬದ ಲ್ಲಿ ವಿಕಲಚೇತನರು, ಬುದ್ಧಿಮಾಂದ್ಯರಿದ್ದಾತೆ, ಆ ಕುಟುಂಬಕ್ಕೆ ಜಿಲ್ಲಾಧಿಕಾರಿಗಳು ನೆರವಾಗಿರುವುದು ಶ್ಲಾಘನೀಯ ಕಾರ್ಯ, ಸೋರುತಿದ್ದ ಮನೆಗೆ ಶೀಟ್ ಹಾಕಿಸಿರುವುದು, ರೇಷನ್ ಕಾರ್ಡ್ ಕೊಟ್ಟಿರುವುದು, ಪಿಂಚಣಿ ಸೌಲಭ್ಯ ಒದಗಿಸಿರುವುದು, ಮನೆಗೆ ಗ್ಯಾಸ್ ಒದಗಿಸಿರುವುದು ಮೆಚ್ಚುವ ಕೆಲಸ ಎಂದರು.
ನಮ್ಮ ಸಂಮೃದ್ಧಿ ಶಿಕ್ಷಣ ಟ್ರಸ್ಟ್ ಮೂಲಕ ಆ ಕುಟುಂಬಕ್ಕೆ ನೆರವಾಗಲು ಮುಂದಾಗಿದ್ದು, ರೇಷನ್ ಸೇರಿದಂತೆ ಬಟ್ಟೆ, ಆ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಣ ಟ್ರಸ್ಟ್ನ ಕುಮಾರ್ ಹೆಬ್ಬಾಕ, ವಡ್ಡರಹಳ್ಳಿ ನರಸಿಂಹರಾಜ್, ತೊಂಡಗೆರೆ ಸುನೀಲ್, ಭೈರಸಂದ್ರ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)