ತುಮಕೂರು: ಭಾರತ ಸರಕಾರದ ಕ್ರೀಡಾ ಇಲಾಖೆಗೆ ನೋಂದಾಯಿತವಾಗಿರುವ ಭಾರತ್ ಒಲಂಪಿಕ್ ಸಂಸ್ಥೆಗೆ ಸದಸ್ಯ ಸಂಸ್ಥೆಯಾಗಿರುವ ಯೋಗಾಸನ ಭಾರತವು ಇದೇ ಡಿಸೆಂಬರ್ 12 ರಿಂದ 15 ರವರೆಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ
ಐದನೆಯ ಹಿರಿಯರ ರಾಷ್ಟಿçÃಯ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಮಹಢಸ್ವಾಮೀಜಿ ತಿಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್ ಜಿ ಎಸ್ ಅಂತರರಾಷ್ಟಿçÃಯ ಯೋಗ ಪ್ರತಿಷ್ಠಾನ ವಿದ್ಯಾಲಯ ಇವರುಗಳ ಸಹಯೋಗದೊಂದಿಗೆ ಡಿಸೆಂಬರ್ 12ರಿಂದ 15 ರವರೆಗೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಸುತ್ತಿದೆ. ಈ ಸ್ಪರ್ಧೆಗೆ 30 ರಾಜ್ಯ ತಂಡಗಳೊAದಿಗೆ ಒಟ್ಟು 32 ತಂಡಗಳಿAದ 800ಕ್ಕೂ ಹೆಚ್ಚು ಕ್ರೀಡಾಪಟುಗಳು, 80ಕ್ಕೂ ಹೆಚ್ಚು ತೀರ್ಪುಗಾರರು ಹಾಗೂ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಯೋಗಾಸಂಸ್ಥೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದರು.
ತುಮಕೂರು ನಗರದಲ್ಲಿ ಇಂತಹ ಬೃಹತ್ ಯೋಗಾಸನ ಸ್ವರ್ಧೆ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.ಒಳ್ಳೆಯ ಆರೋಗ್ಯದ ದೃಷ್ಟಿಯಿಂದ ಯೋಗಾಸನ ಒಳ್ಳೆಯದು. ಅಂತರರಾಷ್ಟಿçÃಯ ಮಟ್ಟದಲ್ಲಿ ಯೋಗಾಸನ ಬಹಳ ಪ್ರಸಿದ್ದಿ ಪಡೆದಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಮಾಡುವುದು ಸಹಕಾರಿಯಾಗಲಿದೆ.ಸರಕಾರಗಳು ಎಲ್ಲಾ ರೀತಿಯ ನೆರವನ್ನು ನೀಡುತ್ತಿದ್ದು,ಜಿಲ್ಲಾಡಳಿತ ಸಂಪೂರ್ಣ ವಾಗಿ ತೊಡಗಿಸಿಕೊಂಡಿದೆ. ಮುಂಬರುವ 2030 ರ ಎಷ್ಯಾ ಗೇಮ್ಸ್ ಮತ್ತು 2036 ರ ಒಲಂಪಕ್ ಗೆಮ್ಸ್ ನಲ್ಲಿ ಯೋಗಾಸನ ಸ್ಪರ್ಧೆಯನ್ಬು ಒಂದು ಪ್ರದರ್ಶನ ಕ್ರೀಡೆಯಾಗಿ ಭಾಗವಹಿಸಲು ಅವಕಾಶ ನೀಡಿರುವುದು ಸಂತೋಷದ ವಿಚಾರವಾಗಿದೆ. ನಾಲ್ಲು ದಿನಗಳ ಈ ಸ್ವರ್ಧೆ ಯಶಸ್ವಿಯಾಗಲಿ ಎಂದು ಶುಭಕೋರಿದರು.
ಕರ್ನಾಟಕ ಯೋಗಾಸನ ಸಂಸ್ಥೆಯ ಕಾರ್ಯದರ್ಶಿ ನಿರಂಜನಮೂರ್ತಿ ಮಾತನಾಡಿ, ಕೇಂದ್ರದ ಕ್ರೀಡಾ ಇಲಾಖೆಯ ಅಯ್ಯುಷ್ ಮಂತ್ರಾಲಯದ ಅಡಿಯಲ್ಲಿ ಯೋಗಾಸನ ಬಂದ ನಂತರ 2020 ರಲ್ಲಿ ಕೇಂದ್ರ ಸರಕಾರ ಯೋಗವನ್ನು ಕ್ರೀಡೆ ಎಂದು ಮಾನ್ಯ ಮಾಡಿದ ನಂತರ ಇದುವರೆಗೂ ನಾಲ್ಕು ರಾಷ್ಟಿçÃಯ ಯೋಗಾಸನ ಸ್ಪರ್ಧೆಗಳನ್ನು ನಡೆಸಲಾಗಿದೆ.ಡಿಸೆಂಬರ್ 12 ರಿಂದ 15 ರವರಗೆ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಐದನೇ ಹಿರಿಯರ ರಾಷ್ಟಿçÃಯ ಯೋಗಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.31ರಾಜ್ಯಗಳ ತಲಾ ಒಂದೊAದು ಪುರುಷ ಮತ್ತು ಮಹಿಳಾ ತಂಡಗಳ ಜೊತೆಗೆ, ನ್ಯಾಷನಲ್ ಪೊಲೀಸ್ ಅಕಾಡೆಮಿಯ ಒಂದು ತಂಡ ಸೇರಿ 32 ತಂಡಗಳ ನಾಲ್ಕು ನೂರು ಮಹಿಳಾ ಮತ್ತು ನಾಲ್ಕು ನೂರು ಪುರುಷ ತಂಡಗಳ 800 ಕ್ರೀಡಾಪಟು ಗಳ ಜೊತೆಗೆ, 200ಜನ ಅಧಿಕಾರಿಗಳು ಸೇರಿ ಒಟ್ಟು 1000 ಜನರು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಪಟುಗಳಿಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಾಸ್ಯವ್ಯ ವ್ಯವಸ್ಥೆ ಮಾಡಲಾಗಿದೆ.ಅಧಿಕಾರಿಗಳಿಗೆ ಮಠದ ಯಾತ್ರಿನಿವಾಸದಲ್ಲಿ ತಂಗಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಕ್ರೀಡಾಂಗಣದಲ್ಲಿಯೇ ನಡೆಸಲಾಗುವುದು ಎಂದರು. ಡಿಸೆಂಬರ್ 12 ರ ಗುರುವಾರ ಬೆಳಗ್ಗೆ 9 ಗಂಟೆಗೆ ಐದನೇ ರಾಷ್ಟಿçÃಯ ಹಿರಿಯ ಯೋಗಾಸನ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ.ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗಸ್ವಾಮಿಜಿ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಮಾಜಿ ಸಚಿವರಾದ ಸೊಗಡು ಶಿವಣ್ಣ, ಏಷಿಯನ್ ಯೋಗಾಸನದ ಉಪಾಧ್ಯಕ್ಷರು ಹಾಗೂ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಎಂ ನಿರಂಜನ ಮೂರ್ತಿಯವರು ಮತ್ತು ತುಮಕೂರು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೋಹಿತ್ ಗಂಗಾಧರ್ ಅವರುಗಳು ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಕರ್ನಾಟಕ ಯೋಗಾಸನ ಸಂಸ್ಥೆಯ ಕಾರ್ಯದರ್ಶಿ ಡಾ.ನಿರಂಜನಮೂರ್ತಿ ,ಶ್ರೇಯಸ್, ಪರುಶುರಾಮಪ್ಪ, ಶ್ರೀ ಮತಿ ಕವಿತಾ, ದಿವ್ಯಾ, ರವಿ ಪಾಲ್ಗೊಂಡಿದ್ದರು.

(Visited 1 times, 1 visits today)