ತುಮಕೂರು: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾಗಿದ್ದ ಎಸ್.ಎಂ ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2.30 ರ ಸುಮಾರಿಗೆ ನಿಧನರಾದರು. ಇವರ ನಿಧನಕ್ಕೆ ತುಮಕೂರಿನಲ್ಲಿಯೂ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.
ನಗರದ ಬಿಜಿಎಸ್ ವೃತ್ತದಲ್ಲಿ ಎಸ್ ಎಂ ಕೃಷ್ಣ ಅಭಿಮಾನಿಗಳು ಸೇರಿದಂತೆ ವಿವಿಧ ಮುಖಂಡರು ಜಾತ್ಯಾತೀತವಾಗಿ ಎಸ್ ಎಂ ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ಸೂಚಿಸಿದರು.
ಸಂತಾಪ ಸೂಚನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ‘ಎಸ್ ಎಂ ಕೃಷ್ಣ ಅವರು ಓರ್ವ ಅಜಾತ ಶತ್ರು ಆಗಿದ್ದರು. ಹಣಕಾಸು ಸಚಿವರಾಗಿ, ರಾಜ್ಯದ ಸಿಎಂ ಆಗಿ, ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ತುಂಬಾ ನೋವು ಉಂಟುಮಾಡಿದೆ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂತಾಪ ಸಭೆಯಲ್ಲಿ ಮುಖಂಡರಾದ ಸಿದ್ದಲಿಂಗೇಗೌಡ, ಹನುಮಂತೇಗೌಡ, ಗಿರೀಶ್, ದೊಡ್ಡಲಿಂಗಪ್ಪ, ವಿಜಯ್ ಗೌಡ, ರವೀಗೌಡ, ಮಂಜುಳಾಶಿವರಾಜ್ ಸೇರಿದಂತೆ ಇತರೆ ಅಭಿಮಾನಿಗಳು ಇದ್ದರು.
(Visited 1 times, 1 visits today)