ತುಮಕೂರು: ಜೀವನದಲ್ಲಿ ಸ್ಪಷ್ಟ ಗುರಿ, ಛಲ, ಶ್ರಮ, ಶ್ರದ್ಧೆ ಹೊಂದಿದ್ದರೆ ಸಾಧನೆ ಮಾಡಬಹುದು. ತಮಿಳು ನಾಡಿನ 18ನೇ ವಯಸ್ಸಿನ ಗುಕೇಶ್ ಚೆಸ್‌ನಲ್ಲಿ 18ನೇ ವಿಶ್ವ ಚಾಂಪಿಯನ್ ಆಗಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಶ್ರದ್ಧೆ, ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಚೆಸ್ ನಮ್ಮ ದೇಶದ ಆಟ. ಏಕಾಗ್ರತೆ, ಬುದ್ಧಿಶಕ್ತಿ ವೃದ್ಧಿಸುವ ಆಟ ಎಂದು ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್ ಹೇಳಿದರು.
ನಗರದ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಶಾಲೆಗಳಲ್ಲಿ ಕ್ರೀಡೆಯೂ ಅಧ್ಯಯನದ ಭಾಗವಾಗಿ ಇರಬೇಕು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಇಂದು ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಕ್ರೀಡಾ ಸಾಧಕರಿಗೆ ಮೀಸಲಾತಿ ಸೌಲಭ್ಯವಿದೆ. ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.
ಚೆನ್ನೆöÊನಲ್ಲಿ ನಡೆದ ಚೆಸ್ ಒಲಂಪಿಯಾಡ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಪ್ರೋತ್ಸಾಹ ನೀಡಿದರು. ಇದಾಗಿ ಒಂದೂವರೆ ವರ್ಷದಲ್ಲಿ ಚೆಸ್‌ನಲ್ಲಿ ಚಿನ್ನದ ಪದಕ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಗುಕೇಶ್ ವಿಶ್ವ ಚಾಂಪಿಯನ್ ಆಗಿದ್ದಾರೆ. ಚೆಸ್ ಆಟಕ್ಕೆ ಮಾನ್ಯತೆ ದೊರೆತಾದ ಇದೆಲ್ಲಾ ಸಾಧ್ಯವಾಗುತ್ತದೆ ಎಂದರು.
ವಿದ್ಯಾನಿಕೇತನ್ ಸಂಸ್ಥೆಯ ಅಧ್ಯಕ್ಷ ಪಿ.ಪಾರಸ್ ಮಲ್, ಉಪಾಧ್ಯಕ್ಷ ಜಿ.ಆರ್.ಸುರೇಶ್, ಕಾರ್ಯದರ್ಶಿ ಡಾ.ಸಿ.ಜಯರಾಮರಾವ್, ಜಂಟಿ ಕಾರ್ಯದರ್ಶಿ ಟಿ.ಎನ್.ಚನ್ನಬಸವ ಪ್ರಸಾದ್, ಖಜಾಂಚಿ ಎಂ.ಆರ್.ಆನAದರಾಮು, ಸದಸ್ಯರಾದ ಕೆ.ಜಿ.ಮುನಿಗಂಗಪ್ಪ, ಸುರೇಂದ್ರ ಷಾ, ಕೆ.ವಿ.ಶ್ರೀನಿವಾಸ್, ರಾಜೇಶ್ ಹಿರೇಮಠ್, ಎಂ.ಎಸ್.ಜಿನೇಶ್ ಜೈನ್, ಡಾ.ಟಿ.ಆರ್.ಸಾಯಿಪ್ರಸಾದ್ ಭಾಗವಹಿಸಿದ್ದರು.
(Visited 1 times, 1 visits today)