ಈ ಕಂಪ್ಯೂಟರ್ ಯುಗದಲ್ಲಿ ಮನುಷ್ಯನ ಮನಸ್ಸು ಅತಿವೇಗವಾಗಿ ಚಲಿಸುತ್ತದೆ. ಇದಕ್ಕೆ ವಿವೇಕಾನಂದರ ಬದುಕೇ ಒಂದು ದೊಡ್ಡ ನಿದರ್ಶನ. ಆದುದರಿಂದ ಮನುಷ್ಯರು ಮೊದಲು ಸಂಸ್ಕಾರವಂತರಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಮತ್ತು ಸರ್ವೋದಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಹೆಚ್.ಸುಬ್ಬರಾಯ ಹೇಳಿದರು.
ಅವರು ದೇವರಾಯನ ದುರ್ಗದಲ್ಲಿರುವ ಯೋಗ ನರಸಿಂಹನ ಸನ್ನಿಧಿಯಲ್ಲಿ ಸುಬ್ಬರಾಯರಿಗೆ 90 ವರ್ಷ, ಕಮಲಮ್ಮನವರಿಗೆ 80 ವರ್ಷದ ಸವಿನೆನಪಿಗಾಗಿ ಇವರ ಪುತ್ರ, ಹೆಣ್ಣುಮಕ್ಕಳು, ಸೊಸೆ ಅಳಿಯಂದಿರು ಮತ್ತು ಮೊಮ್ಮಕ್ಕಳು ಸೇರಿ ಹುಟ್ಟುಹಬ್ಬ ಸಮಾರಂಭದಲ್ಲಿ ವಿಶೇಷ ಉಡುಗೊರೆಯೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮನುಷ್ಯರು ಸಂಸ್ಕಾರವಂತರಾಗಿರುತ್ತಾರೋ ಅವರಲ್ಲಿ ಸಂಸ್ಕøತಿ ಎಂಬುದು ಮನೆ ಮಾಡಿಕೊಂಡಿರುತ್ತದೆ. ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕøತಿಯ ವ್ಯಾಮೋಹದಿಂದ ನಮ್ಮ ದೇಶದ ಸಂಸ್ಕøತಿ ಸಂಸ್ಕಾರಗಳು ನಾಶವಾಗುತ್ತಿವೆ. ಆದುದರಿಂದ ಎಲ್ಲ ಯುವಕರು ನಮ್ಮ ದೇಶದ ಸಂಸ್ಕøತಿ ಮತ್ತು ಸಂಸ್ಕಾರಗಳನ್ನು ಉಳಿಸಿ ಬೆಳಸಬೇಕಾದ ಜವಾಬ್ದಾರಿ ಇದೆ ಎಂದರು.
ಮನುಷ್ಯರಲ್ಲಿ ಕನಿಷ್ಠ ಪಕ್ಷ ಇರಬೇಕಾದ ಗುಣಮೌಲ್ಯಗಳಂದರೆ ನ್ಯಾಯ, ನೀತಿ, ಸತ್ಯ, ಪ್ರಾಮಾಣಿಕತೆ ಎಲ್ಲಕ್ಕಿಂತ ಮಿಗಿಲಾಗಿ ಕರ್ತವ್ಯನಿಷ್ಠ. ಇವುಗಳಿಂದ ವೈಯಕ್ತಿಕವಾಗಿ ವ್ಯಕ್ತಿಗಳಿಗೂ ಮತ್ತು ಸಮಾಜಕ್ಕೂ ಒಳ್ಳೆಯದಾಗುತ್ತದೆ. ಪ್ರತಿಯೊಬ್ಬರು ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಹಣ ಸಂಪಾದನೆಗಿಂತಾ ಗುಣಸಂಪಾದಿಸಬೇಕು. ಕೊನೆಗೆ ಉಳಿಯುವುದು ಗುಣಮೌಲ್ಯ ಎಂದು ಹೇಳಿದರು.
ಭೀಷ್ಮ-ಧರ್ಮರಾಯನಿಗೆ ಹೇಳಿದ ಕತೆ ಅಮೂಲ್ಯವಾದುದು. ನಾರದ ಮಹರ್ಷಿಯ ಚಿಂತನಾ ಲಹರಿಯ ಕತೆಯನ್ನು ಅದರೊಗಳಿರುವ ನೀತಿಯನ್ನು ಮಾರ್ಮಿಕವಾಗಿ ವಿವರಿಸಿದರು. ಈ ದಿನ ನೀವೆಲ್ಲ ಸೇರಿ ನನ್ನ ಹುಟ್ಟಹಬ್ಬವನ್ನು ಆಚರಿಸಿ ಸನ್ಮಾನ ಮಾಡಿದ್ದೀರಿ. ಇದು ನನಗೆ ಮರೆಯಲಾರದ ಸುದಿನ. ಸದಾ ನನ್ನ ಮನಸ್ಸಿನಲ್ಲಿ ಹಸಿರಾಗಿ ಉಳಿದುರುತ್ತದೆ ಎಂದು ಸಂತಸವನ್ನು ಹಂಚಿಕೊಂಡರು.
ಈ ಕಾರ್ಯಕ್ರಮ ರಾಘವೇಂದ್ರ – ರೇಣುಕಾ, ಶಾಂತಾ-ನಾಗಪ್ಪ, ರಮೇಶ್-ವಾಣಿ, ಜಗನ್ನಾಥ್-ವತ್ಸಲ, ನರಸಿಂಹಮೂರ್ತಿ- ವೀಣಾ ಎಲ್ಲರ ಪರವಾಗಿ ತಮ್ಮ ಅಂತರಾಳದ ಮಾತುಗಳನ್ನಾಡಿ ಸನ್ಮಾನಿತರಿಗೆ ಶುಭಕೋರಿದರು. ಕೆಲವು ಸ್ಪರ್ಧೆಗಳನ್ನು ಮಾಡಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲರಿಗೂ ಬೆಲೆಬಾಳುವ ಬಹುಮಾನ ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಮತ್ತು ವಾಸವಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್. ನಾಗಪ್ಪ ಇವತ್ತು ಇಡೀ ದೇಶದಲ್ಲಿ ಶ್ರೇಷ್ಠ ಗಣಿತಶಾಸ್ತ್ರಜ್ಞರಾದ ರಾಮಾನುಜಮ್ ಅವರನ್ನು ಸ್ಮರಿಸುತ್ತಿದೆ. ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಗಣಿತ ಎಂದರೆ ಹೆಚ್.ಸುಬ್ಬರಾಯರು ಎಂದೇ ಹೆಸರು ಮಾಡಿರುವವರ ಹುಟ್ಟು ಹಬ್ಬದ ಸವಿನೆನಪಿನಲ್ಲಿ ಅವರ ಕುಟುಂಬ ಪರಿವಾರ ಬಂಧುಬಳಗ ಸನ್ಮಾನ ಮಾಡಿರುವುದು. ಇದೊಂದು ಅವಿಸ್ಮರಣೀಯ ದಿನ ಎಂದು ಹೇಳಿದರು.
ಬೆಂಗಳೂರಿನಿಂದ ಬಂದಿದ್ದ ಹಾಡುಗಾರ್ತಿ ರಷಿತ ಸೊಗಸಾಗಿ ಪ್ರಾರ್ಥನೆ ಮಾಡಿದರೆ, ನರಸಿಂಹಮೂರ್ತಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಯಶ್ಸು, ವಿಶ್ವ, ವಿಜಿತ್, ಜಯು, ಚುಪ್ಪಿ ಮತ್ತು ರುಸ್ವಂತ್ ನಿರೂಪಣೆ ಮಾಡಿದರು.