ಚೇಳೂರು: ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ. ಅಪರಾಧಿ ಮೋಹನ ಮನೆಯವರ ಮೇಲೆ ನನಗೆ ಒಳ್ಳೆ ಹುಡುಗಿ ನೋಡಿ ಮದುವೆ ಮಾಡಲಿಲ್ಲ ಎಂದು ಆಗಾಗ್ಗೆ ಮನೆಯಲ್ಲಿ ಜಗಳ ಮಡುತ್ತಿದ್ದನು. ಈ ವಿಚಾರದಲ್ಲಿ ಮೋಹನನಿಗೂ ಅವನ ತಮ್ಮ ಉಮೇಶ ಮತ್ತು ತಂದೆ ಮಲ್ಲಯ್ಯ ವರಿಗೆ ಹಲವು ಬಾರೀ ಗಲಾಟೆ ಆಗಿತ್ತು. ಉಮೇಶನು ಮಲಗಿದ್ದಾಗ ಆರೋಪಿ ಇವನು ಯಾವಾಗಲೂ ಗಲಾಟೆ ಮಾಡುತ್ತಾನೆ ಹಾಗೂ ತನ್ನ ತಂದೆ ಮಲ್ಲಯ್ಯ ಗಲಾಟೆ ಬಿಡಿಸಲು ಬರುತ್ತಾನೆ ಎಂಬ ದ್ವೇಷದಿಂದ ಮಚ್ಚಿನಿಂದ ತನ್ನ ತಮ್ಮನನ್ನು ಹೊಡೆದು ಕೊಲೆಮಾಡಿದ್ದನು. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು. 50 ಸಾವಿರ ದಂಡ ಮತ್ತು 10 ವರ್ಷ ಕಾರಾಗೃಹ ಮತ್ತು 25 ಸಾವಿರ ದಂಢ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
(Visited 1 times, 1 visits today)