ಶಿರಾ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಚಿಕ್ಕನಹಳ್ಳಿಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ.
ಶಿರಾ ತಾಲ್ಲೂಕು ಚಿಕ್ಕನಹಳ್ಳಿಯಲ್ಲಿ ದಿನಾಂಕ 16- 12- 2024 ನೇ ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ
ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ದೇವರಹಳ್ಳಿ ಗ್ರಾಮದ ನಾಗಪ್ಪ ಅಧ್ಯಕ್ಷರಾಗಿ ಮತ್ತು ಚಿಕ್ಕದಾಸರಹಳ್ಳಿಯ
ಮಂಜುನಾಥ್ ಸಿ. ಪಿ. ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ದಿನಾಂಕ: 08-12-2024 ರಂದು ನಡೆದ ಆಡಳಿತ ಮಂಡಲಿ ನಿರ್ದೇಶಕರುಗಳ ಚುನಾವಣೆಯಲ್ಲಿ ಸಾಮಾನ್ಯ, ಅನುಸೂಚಿತ
ಜಾತಿ/ಪರಿಶಿಷ್ಟಪಂಗಡ, ಹಿಂದುಳಿದ ಪ್ರವರ್ಗ ಹಾಗೂ ಮಹಿಳೆಯರಿಗೆ ಮೀಸಲಿಸಿದ ಸ್ಥಾನಗಳಿಗೆ ಸ್ಪರ್ಥಿಸಿ, ಈ ಕೆಳಕಂಡ
ಅಭ್ಯರ್ಥಿಗಳು ಚುನಾವಣೆ ಮೂಲಕ ಸಹಕಾರ ಸಂಘಗಳ ನಿಯಮ 1960, ನಿಯಮ14ಜಿ ಅಡಿಯಲ್ಲಿ ಒಟ್ಟು 12 ಜಯಶೀಲರಾಗಿ
ನಿರ್ದೇಶಕರುಗಳಾಗಿ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಇಂದ್ರಮ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ
ಭೂತೇಶ್, ರಾಜಣ್ಣ, ಮಂಜುನಾಥ್. ಎನ್., ಲೋಕೇಶ್ ಬಿ. ಆರ್., ಪರುಶುರಾಮಯ್ಯ, ತಿಮ್ಮಣ್ಣ, ಬ್ಯಾಟೇಗೌಡ, ಉಮಾ
ಪ್ರಕಾಶ್, ವಿಜಯಲಕ್ಷ್ಮಿ ಪುಟ್ಟಲಿಂಗಪ್ಪ, ಯೋಗೀಶ್ ಕುಮಾರ್, ಮುಖಂಡರುಗಳದ ಉಪಸ್ಥಿತರಿದ್ದರು.

(Visited 1 times, 1 visits today)