ತುರುವೇಕೆರೆ: ನಮ್ಮ ಕನ್ನಡ ಭಾಷೆಗೆ ದಕ್ಕೆಯಾಗದಂತೆ ಕನ್ನಡಿಗರು ನೆಡೆದುಕೊಳ್ಳಬೇಕು ಎಂದು ರಾಜ್ಯ ಯುವ ಜೆಡಿಎಸ್ ಪ್ರದಾನ ಕಾರ್ಯದರ್ಶಿ ದೊಡ್ಡಘಟ್ಟ ಚಂದ್ರೇಶ್ ತಿಳಿಸಿದರು.
ತಾಲೂಕಿನ ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ರಂಗ ತರಂಗ ಕ್ರೀಡೆ ಮತ್ತು ಸಾಂಸ್ಕೃತಿಕ ಗೆಳೆಯರ ಬಳಗವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 69ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ಹಾಗೂ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡ ನಾಡು ನುಡಿಗೆ ಹಲವರು ತನ್ನದೆಯಾದ ಸೇವೆ ಸಲ್ಲಿಸಿದ್ದಾರೆ.ಕನ್ನಡ ಬಾಷೆಗೆ ವಚನ ಹಾಗೂ ದಾಸ ಸಾಹಿತ್ಯ ಎರಡು ಕಣ್ಣಗಳಿದ್ದಂತೆ.ಹಲವಾರು ಕವಿಗಳು ತನ್ನ ಸಾಹಿತ್ಯ ಕ್ಷೇತ್ರದಲ್ಲಿ ದಲ್ಲಿ ಸಾದನೆ ಮೂಲಕ ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡ ಇತಿಹಾಸ ತಿಳಿಯುವದು ತುಂಬಾ ಇದೆ ವಿದ್ಯಾರ್ಥಿಗಳು ಕನ್ನಡ ನಾಡಿನ ಇತಿಹಾಸ ಪರಂಪರೆ ತಿಳಿದುಕೊಂಡು ಕನ್ನಡ ಉಳಿಸುವ ಬೆಳೆಸುವ ಜವಬ್ದಾರಿ ನಿಮ್ಮ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಸಾದನೆಗೈದ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಿದರು. ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೆಡೆಸಿಕೊಟ್ಟರು.
ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷ ಆರ್.ಹೇಮಚಂದ್ರು, ಮಾಜಿ ಅದ್ಯಕ್ಷ ಆರ್.ಶಿವಣ್ಣ ಮುಖಂಡರಾದ ತ್ಯಾಗರಾಜು, ಎ.ಬಿ.ಜಗದೀಶ್, ಹುಲಿಕಲ್ ಜಗದೀಶ್, ಪರಮೇಶ್, ರಮೇಶ್, ಗೋವಿಂದಯ್ಯ, ಕೆ.ಪಿ.ಜಯರಾಮ್, ಸ್ವರೂಪ್, ವೈದ್ಯ ಮಂಜಣ್ಣ ಗೆಳೆಯರ ಬಳಗದ ಅದ್ಯಕ್ಷ ಜಿ.ಗಗನ್, ಉಪಾಧ್ಯಕ್ಷ ಎ.ಎಸ್.ರಾಕೇಶ್, ಪ್ರದಾನ ಕಾರ್ಯದರ್ಶಿ ಜಗದೀಶ್, ವೇಣುಗೋಪಾಲ್ ಸೇರಿದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.
(Visited 1 times, 1 visits today)