ಬೆಳಗಾವಿ : ಕಳೆದ ಇಪ್ಪತ್ತು ತಿಂಗಳ ಆಡಳಿತದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ ಮಾತಿನಲ್ಲಿ ಮೈ ಮರೆತಿದೆಯೇ ಹೊರತು ಒಂದೇ ಒಂದು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಭ್ರಷ್ಟಾಚಾರದಲ್ಲಿ, ದುರಾಡಳಿತದಲ್ಲಿ ಮತ್ತು ಸ್ವಜನ ಪಕ್ಷಪಾತದಲ್ಲಿ ಈ ಸರ್ಕಾರ ಮುಳುಗಿದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡರು ಸೋಮವಾರ ವಿಧಾನಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾವು ಒಂದೇ ಒಂದು ಬೃಹತ್ ಅಭಿವೃದ್ಧಿ ಯೋಜನೆ ನೋಡಿಲ್ಲ. ಪಂಚ ಗ್ಯಾರಂಟಿಗಳ ಗುಂಗಿನಲ್ಲಿಯೇ ಈ ಸರ್ಕಾರ ಕಾಲ ಕಳೆಯುತ್ತಿದೆ. ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಿಕ್ಷಣದಂಥ ಕನಿಷ್ಠ ಅಗತ್ಯಗಳನ್ನು ಈಡೇರಿಸಲೂ ಈ ಸರ್ಕಾರದ ಬಳಿ ಹಣ ಇಲ್ಲದಂಥ ದುರ್ಗತಿ ಬಂದಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಈ ಗ್ಯಾರಂಟಿ ಯೋಜನೆಗಳನ್ನು ಮುಂದೆ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆ ಎದುರಿಸಿತು. ಆದರೆ, ಅವರ ಪಕ್ಷ ಒಂದAಕಿಯ ಗೆಲುವಿಗೇ ತೃಪ್ತಿ ಪಡಬೇಕಾಯಿತು. ಈ ಯೋಜನೆಗಳು ಸಂಪೂರ್ಣ ವಿಫಲ ಎಂದು ನಮಗಂತೂ ಅನಿಸಿದೆ. ಇಂಥ ಯೋಜನೆಗಳ ಫಲ ಉಳ್ಳವರಿಗೆ, ಶ್ರೀಮಂತರಿಗೆ ಏಕೆ ಸಿಗಬೇಕು. ಬಡವರಿಗೆ ಸಿಕ್ಕರೆ ನಮಗೂ ಸಂತೋಷ. ನಾವು ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಮ್ಮ ಜಿಲ್ಲೆಗೆ ಎರಡು ಸಾರಿ ಮುಖ್ಯಮಂತ್ರಿಗಳು ಬಂದು ಹಲವು ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಕಳೆದ ಸಾರಿ ಬಂದಾಗ ನನ್ನ ಕ್ಷೇತ್ರದಲ್ಲಿ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಕರ್ನಾಟಕ ಪಬ್ಲಿಕ್ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು 1.21 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಟೆಂಡರ್ ಕೂಡ ಆಗಿತ್ತು. 1314 ಮಕ್ಕಳು ಓದುವ ಶಾಲೆಗೆ ಬಿಡುಗಡೆಯಾಗಿದ್ದ ಹಣವನ್ನು ಏಕಾಏಕಿ ಹಿಂತೆಗೆದುಕೊAಡು ಬಿಟ್ಟರು. ಇದು ಈ ಸರ್ಕಾರದ ಆರ್ಥಿಕ ಸ್ಥಿತಿಯ ದ್ಯೋತಕ ಎಂದು ಅವರು ಟೀಕಿಸಿದರು. ಕ್ಷೇತ್ರಕ್ಕೆ ಯಾವುದೇ ಅನುದಾನ ಸಿಗದೇ ಇರುವ ಕಾರಣ ನಾವು ಕೇವಲ ಕಾಗದದ ಮೇಲೆ ಶಾಸಕರಾಗಿದ್ದೇವೆ. ನಾವು ಊರಿಗೆ ಹೋಗಿ ಜನರಿಗೆ ಮುಖ ತೋರಿಸಲು ಆಗುವುದಿಲ್ಲ. ಇದು ದರಿದ್ರ ಸರ್ಕಾರ. ಇದು ಭ್ರಷ್ಟ ಸರ್ಕಾರ ಆದಷ್ಟು ಬೇಗ ಈ ಸರ್ಕಾರ ತೊಲಗಬೇಕು ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
(Visited 1 times, 1 visits today)