ತುಮಕೂರು: ಇಂಡಿಯನ್‌ಪ್ರಿನ್ಯೂರ್ ನಿಯತಕಾಲಿಕ ಕೊಡಮಾಡುವ ಎಡೆಕ್ಸ್ ಅವಾರ್ಡ್ 2024ಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಪಿ. ಪರಮಶಿವಯ್ಯ ಹಾಗೂ ವಾಣಿಜ್ಯಶಾಸ್ತç ಸಹಪ್ರಾಧ್ಯಾಪಕ ಡಾ. ಬಿ. ಕೆ. ಸುರೇಶ್ ಭಾಜನರಾಗಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಇಬ್ಬರು ಪ್ರಾಧ್ಯಾಪಕರಿಗೆ ಈ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೆ. ಅರುಣ್ ಚಕ್ರವರ್ತಿ, ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮತ್ತಿತರ ಗಣ್ಯರು ಈ ಸಂದರ್ಭ ಹಾಜರಿದ್ದರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ್ದಾರೆ.
(Visited 1 times, 1 visits today)