ಚಿಕ್ಕನಾಯಕನಹಳ್ಳಿ: ಗ್ಯಾರೆಂಟಿ ಯೋಜನೆಯ ಉದ್ದೇಶ ಜನಸಾಮಾನ್ಯರಿಗೆ ಸಹಾಯ ಮಾಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಹಾಗೂ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸಿಡಿ ಚಂದ್ರಶೇಖರ್ ಹೇಳಿದರು.
ಅವರು ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿದ ಸಂದರ್ಭದಲ್ಲಿ ಮಾತನಾಡುತ್ತಾ ನಾವು ಸರ್ಕಾರದ ಪ್ರತಿನಿಧಿಗಳಾಗಿದ್ದೇವೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅಧಿಕಾರಿಗಳ ಮೂಲಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಈಗಿರುವಾಗ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಿದೆ ಎಂದು ವರದಿಗಳನ್ನು ಪರಿಶೀಲಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಆಗಸ್ಟ್ 23 ರಿಂದ ಸೆಪ್ಟೆಂಬರ್ 24ರ ವರೆಗೆ ಪರಿಶಿಷ್ಟ ಜಾತಿ ಮಹಿಳೆಯರು 9558 ಕುಟುಂಬಗಳು ಪರಿಶಿಷ್ಟ ಪಂಗಡದ 3835 ಕುಟುಂಬ ಅಲ್ಪಸಂಖ್ಯಾತರ ಪಂಗಡದಿAದ 3166 ಕುಟುಂಬ ಹಿಂದುಳಿದ ವರ್ಗದ 16537 ಕುಟುಂಬ ಇತರೆ ವರ್ಗದ 21293 ಒಟ್ಟಿಗೆ 54, 389 ಕುಟುಂಬದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ನೆರವು ಪಡೆಯುವ ಮೂಲಕ 144 ಕೋಟಿ 71 ಲಕ್ಷ ಹಣವನ್ನು ಪಡೆದಿರುತ್ತಾರೆ. ಗೃಹಜೋತಿಯ ಪ್ರತಿ ಬಳಕೆಯಲ್ಲಿ 26.9 ಕೋಟಿ ಬೇಡಿಕೆ ಇದ್ದು ಈಗಾಗಲೇ 23.80 ಕೋಟಿ ಹಣ ಬಿಡುಗಡೆಗೊಂಡಿದೆ. ಕುಟಿರ ಯೋಜನೆ ಅಡಿಯಲ್ಲಿ ಬಾಕಿ ಇದ್ದ ಹಣಕ್ಕೆ ಈಗಾಗಲೇ 27 ಲಕ್ಷ ಸರ್ಕಾರ ಮಂಜೂರು ಮಾಡಿದೆ. ಅನ್ನಭಾಗ್ಯ ಯೋಜನೆಯಲ್ಲಿ ತಾಲೂಕಿನ ಅಂತ್ಯೋದಯ ಕಾರ್ಡ್ದಾರರು ಬಿಪಿಎಲ್ ಕಾರ್ಡ್ದಾರರು ಒಟ್ಟಿಗೆ 52,823 ಕುಟುಂಬ ಪಡಿತರವನ್ನು ಪಡೆಯುತ್ತಿದ್ದೋ ಇದರಿಂದ 37 ಕೋಟಿಗೂ ಹೆಚ್ಚು ಹಣ ಈಗಾಗಲೇ ಇದರ ಸೌಲಭ್ಯ ಪಡೆದಿರುತ್ತಾರೆ. ನಾರಿಶಕ್ತಿ ಯೋಜನೆ, ಮೂಲಕ ಮಹಿಳೆಯರು 10 ಕೋಟಿ 35 ಲಕ್ಷ 22147 ಮಂದಿ ಪ್ರಯಾಣ ಮಾಡಿದ್ದು ಜಿಲ್ಲೆಯೊಳಗೆ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ 6 ಕೋಟಿ 94 ಲಕ್ಷದ 10,895 ಮಹಿಳೆಯರಾಗಿದ್ದು ಜಿಲ್ಲೆಯಿಂದ ಹೊರ ಜಿಲ್ಲೆಗೆ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ 3 ಕೋಟಿ 41,11252 ಮಹಿಳೆಯರು ಪ್ರಯಾಣ ಬೆಳೆಸಿ 302 ಕೋಟಿಗೊ ಹಣ ಹೆಚ್ಚು ಬಳಕೆಯಾಗಿದೆ. ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಯ ಎಲ್ಲಾ 15 ಮಂದಿ ಸದಸ್ಯರುಗಳು ಉಪಸ್ಥಿತರಿದ್ದರು ಅಧಿಕಾರಿಗಳಾದ ಬೆಸ್ಕಾಂನ ಎಇಇ ಗವಿರಂಗಯ್ಯ ಮಹಿಳಾ ಮಕ್ಕಳ ಕಲ್ಯಾಣ ಅಧಿಕಾರಿ ಹೊನ್ನಪ್ಪ ಉಪಸ್ಥಿತರಿದ್ದರು.

(Visited 1 times, 1 visits today)