ಕೊರಟಗೆರೆ: ಡಿ.17ರಂದು ಲೋಕಸಭಾ ಸಂಸತ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತಾ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನ ಖಂಡಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ಮೂಲಕ ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್ ರಾಮ್ಪ್ರಸಾದ್ ಮುಖೇನಾ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದರು. ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಚಿಂತಕರ ಕೇಂದ್ರ ಗೃಹ ಸಚಿವರನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನ ಏರ್ಪಡಿಸಿದ್ದರು. ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಲೋಕಸಭಾ ಸಂಸತ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ದೇಶದ ಎಲ್ಲಾ ದಲಿತ ಸಂಘ-ಸAಸ್ಥೆಗಳು ಖಂಡಿಸುತ್ತೇವೆ. ದಲಿತರು ಶೋಷಣೆಗೆ ಒಳಗಾಗಿದ್ದಾಗ ಯಾವ ದೇವರು ಸಹ ನಮ್ಮನ್ನು ಕಾಪಾಡಲಿಲ್ಲ ಸಂವಿಧಾನವೊAದೇ ದಲಿತರಿಗೆ ರಕ್ಷಣೆ ನೀಡಿ ಸಮಾನತೆ ಕಲ್ಪಿಸಿರುವುದು ಎಂದು ಆಕ್ರೋಶ ಹೊರಹಾಕಿದರು. ಪಪಂ ಸದಸ್ಯ ಕೆ.ಎನ್.ನಟರಾಜು ಮಾತನಾಡಿ ಸಚಿವರಾಗಿ ನೀವು ಆಯ್ಕೆಯಾಗಿದ್ದೀರ ಎಂದರೆ ಅದು ನಮ್ಮ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿAದ ಎಂದು ಮರೆಯಬಾರದು, ಇದೆ ಸಂವಿಧಾನದಿAದಲೇ ನೀವು ಗಡಿಪಾರು ಆಗಿರೋದು ಎನ್ನವುದನ್ನ ಮರೆಯಬಾರದು. ಅಂಬೇಡ್ಕರ್ ಅವರ ನೀಡಿದ ಕೊಡುಗೆಯನ್ನ ಯಾರು ಕೂಡ ಇಲ್ಲಿವರೆಗೂ ನೀಡಲು ಸಾಧ್ಯವಿಲ್ಲ. ಈ ದೇಶದ ಕೋಟ್ಯಾಂತರ ಅಂಬೇಡ್ಕರ್ ಅಭಿಮಾನಿಗಳಿಗೆ ನೋವು ಉಂಟು ಮಾಡಿದ್ದೀರ, ಅದಕ್ಕೆ ಅದೆ ಸಂಸತ್ ಸದನದಲ್ಲಿ ಅಂಬೇಡ್ಕರ್ ಪೋಟೋ ಕೊರಳಿಗೆ ಹಾಕಿಕೊಂಡು ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯ ಮಾಡಿದರು. ದಲಿತ ಮುಖಂಡ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ. ದಲಿತ ವಿರೋಧಿ ಬಿಜೆಪಿಯು ದೇಶಕ್ಕೆ ಅಂಬೇಡ್ಕರ್ ರವರು ನೀಡಿರುವ ಸಂವಿಧಾನ ಮಹಾಗ್ರಂಥಕ್ಕೆ ಅಪಮಾನ ಮಾಡುತ್ತಿದ್ದಾರೆ.. ಸಂವಿಧಾನದಿAದಲೇ ಅಮಿತ್ ಶಾ ಜವಬ್ದಾರಿಯುತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು, ಸಂವಿಧಾನ ವಿರೋಧಿ ಅಮಿತ್ ಶಾ ಅವರನ್ನು ದೇಶದಿಂದ ಗಡಿಪಾರು ಮಾಡುವಂತೆ ಎಂದು ಅಗ್ರಹ ಮಾಡಿದರು. ಈ ವೇಳೆ ಪ.ಪಂ ಸದಸ್ಯ ಕೆ.ಎನ್ ನಟರಾಜ್, ದಲಿತ ಮುಖಂಡರಾದ ಚಿಕ್ಕರಂಗಯ್ಯ, ಕಾಮರಾಜನಹಳ್ಳಿ ದೊಡ್ಡಯ್ಯ, ದಾಸರಹಳ್ಳಿ ಶಿವರಾಮ್, ಗುಂಡಿನಪಾಳ್ಯ ನರಸಿಂಹಮೂರ್ತಿ, ಮಾಜಿ ಸೈನಿಕ ನರಸಿಂಹಮೂರ್ತಿ, ಹೊಳವನಹಳ್ಳಿ ನರಸಿಂಹಮೂರ್ತಿ, ಗಂಗಣ್ಣ, ವಿಭೂತಿ ಸಿದ್ದಪ್ಪ, ಹರೀಶ್, ನಾಗರಾಜು, ನಾಗೇಶ್, ವೀರಕ್ಯಾತಯ್ಯ ಸೇರಿದಂತೆ ರೈತ ಪರ ಮತ್ತು ಪ್ರಗತಿಪರ ಚಿಂತಕರು ಹಾಜರಿದ್ದರು.
(Visited 1 times, 1 visits today)