ತುಮಕೂರು: ಇತ್ತೀಚಗೆ ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವರು ಸಂಸತ್ತಿನಲ್ಲಿ ಮಾತನಾಡುವ ವೇಳೆ, ಅಂಬೇಡ್ಕರ್ ಎಂಬುದು ವ್ಯಸನವಾಗಿದೆ. ಅಂಬೇಡ್ಕರ್ ಅವರ ಬದಲು ದೇವರ ಹೆಸರು ಹೇಳಿದ್ದರೆ ಸ್ವರ್ಗ ಪ್ರಾಪ್ತಿಯಾಗುತಿತ್ತು ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ, ರೈತರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು, ರೈತ-ಕಾರ್ಮಿಕ ಸಂಘಟನೆ, ಸ್ಲಂ ಜನಾಂದೋಲನ ಸಮಿತಿ ಸದಸ್ಯರು, ಸ್ವಾತಂತ್ರ ಚೌಕದಲ್ಲಿ ಪ್ರತಿಭಟನೆ ನಡೆಸಿದರು. ಸ್ವಾತಂತ್ರ ಚೌಕದಲ್ಲಿ ಸಮಾವೇಶಗೊಂಡಿದ್ದ ಮುಖಂಡರು, ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಷಾ ಅವರನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿAದ ಕೈಬಿಡಬೇಕು, ಹಾಗೆಯೇ ಅವರ ಹೇಳಿಕೆಯನ್ನು ಸಮರ್ಥಿಸುತ್ತಿರುವ ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಹಿರಿಯ ಚಿಂತಕ ಕೆ.ದೊರೆರಾಜು ಮಾತನಾಡಿ, ಅಂಬೇಡ್ಕರ್ ಎಂಬುದು ವ್ಯಕ್ತಿಯಲ್ಲ. ಅದೊಂದು ಶಕ್ತಿ. ಇಡೀ ವಿಶ್ವವೇ ಅವರ ವಿದ್ವತ್‌ಗೆ ತಲೆಬಾಗಿದೆ. ಸಾವಿರಾರು ಭಾಷೆ, ಜಾತಿ, ಧರ್ಮಗಳಿರುವ ಭಾರತದಂತಹ ಬಹು ಸಂಸ್ಕೃತಿಯ ನಾಡಿಗೆ ಹೊಂದುವAತಹ, ಎಲ್ಲರಿಗೂ ಸಮಪಾಲು ದೊರೆಯುವಂತ ಸಂವಿಧಾನವನ್ನು ನೀಡಿದ್ದಾರೆ. ಇಂತಹ ಸರ್ವಗುಣ ಸಂಪನ್ನ ವ್ಯಕ್ತಿಯ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಅಮಿತ್ ಷಾ ತಮ್ಮ ಮನಸ್ಸಿನಲ್ಲಿರುವ ಕೊಳಕನ್ನು ಹೊರಗೆ ಹಾಕಿದ್ದಾರೆ. ಇವರ ನಡೆಯನ್ನು ಇಡೀ ಭಾರತದ ಶೋಷಿತರು, ದಲಿತರು, ಪ್ರಗತಿಪರರು, ರೈತ ಹೋರಾಟಗಾರರು, ಕಾರ್ಮಿಕರು ಖಂಡಿಸಿದಾರೆ. ಸಂವಿಧಾನ ನೀಡಿದ ವ್ಯಕ್ತಿಯ ಮೇಲೆಯೇ ಗೌರವವಿಲ್ಲದ ಅಮಿತ್ ಷಾ ಅಧಿಕಾರದಲ್ಲಿ ಮುಂದುವರೆಯುವುದು ಸರಿಯಲ್ಲ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಸಂವಿಧಾನ ಎಷ್ಟು ಪವಿತ್ರವೋ, ಸಂವಿಧಾನ ಬರೆದ ವ್ಯಕ್ತಿಯೂ ಅಷ್ಟೇ ಶ್ರೇಷ್ಠರು. ಅವರ ಸ್ಮರಣೆ ಮಾಡುವುದು ಫ್ಯಾಷನ್ ಎಂಬ ಹೇಳಿಕೆ ನೀಡಿ ಅಂಬೇಡ್ಕರ್ ಗೆ ಅಪಮಾನ ಮಾಡಿದ್ದಾರೆ. ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಅವರ ಹೇಳಿಕೆಯಿಂದ ಸಂವಿಧಾನದ ಬಗ್ಗೆ, ಅಂಬೇಡ್ಕರ್ ಅವರ ಬಗ್ಗೆ ಗೌರವವಿಲ್ಲ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಅವರು ರಾಜೀನಾಮೆ ನೀಡಬೇಕು. ಅವರನ್ನು ಮಂತ್ರಿಸ್ಥಾನದಿAದ ವಜಾಮಾಡಿ, ಪ್ರಧಾನಿ ಮೋದಿ ತಮಗೆ ಸಂವಿಧಾನದ ಬಗ್ಗೆ ಇರುವ ಗೌರವವನ್ನು ಸಾಭೀತು ಮಾಡಬೇಕೆಂದರು. ಕರ್ನಾಟಕ ಲೇಖಕಿಯರ ಬಳಗದ ಜಿಲ್ಲಾಧ್ಯಕ್ಷ ಮಲ್ಲಿಕಾ ಬಸವರಾಜು ಮಾತನಾಡಿ, ಸಂಸತ್ತಿನಲ್ಲಿ ಅಂಬೇಡ್ಕರ್ ಬಗೆಗಿನ ಅಮಿತ್ ಷಾ ಹೇಳಿಕೆಯನ್ನು ಖಂಡಿಸುತ್ತೇನೆ. ಸಂಸತ್ತಿನಲ್ಲಿಯೇ ಇಂತಹ ಮಾತುಗಳನ್ನಾಡುವ ಇವರು ತೆರೆಯ ಮರೆಯಲ್ಲಿ ಯಾವ ರೀತಿ ನಡೆದುಕೊಳ್ಳುಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದರು. ಪ್ರತಿಭಟನೆಯಲ್ಲಿ ಮುಖಂಡರಾದ ನಿವೃತ್ತ ಆಯುಕ್ತ ಚಂದ್ರಪ್ಪ, ದಲಿತ ಸಂಘರ್ಷ ಸಮಿತಿ ನರಸಿಂಹಯ್ಯ, ಮುರುಳಿ, ಬಿ.ಉಮೇಶ್, ಡಾ. ಬಸವರಾಜು, ಡಾ.ವೈ.ಕೆ.ಬಾಲಕೃಷ್ಣ ರೈತಮುಖಂಡರಾದ ಗುಬ್ಬಿ ಲೋಕೇಶ್,ವಿರೂಪಾಕ್ಷ ಡ್ಯಾಗೇರಹಳ್ಳಿ, ಮಾನವಬಂಧುತ್ವ ವೇದಿಕೆಯ ಮಾರುತಿ, ವಕೀಲರಾದ ರಂಗಧಾಮಯ್ಯ, ನರಸಿಂಹರಾಜು, ಪಾಲ್ಗೊಂಡಿದ್ದರು.
(Visited 1 times, 1 visits today)