ತುಮಕೂರು: ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ವಿಶಾಲಾಕ್ಷಮ್ಮ ಸದಾಶಿವಯ್ಯ ಕಲ್ಯಾಣ ಮಂಟಪದಲ್ಲಿ 2024ರ ಡಿಸೆಂಬರ್ 26ರಿಂದ 29ರವರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಜಗದ್ಗುರು ಪಂಚಾಚಾರ್ಯಸೇವಾ ಟ್ರಸ್ಟ್ (ರಿ) ನ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಡಿಸೆಂಬರ್ 26 ರಿಂದ 29ರವರಗೆ ಪ್ರತಿದಿನ ಬೆಳಗ್ಗೆ 5 ಗಂಟೆಯಿAದ 7 ಗಂಟೆಯವರೆಗೆ ಇಷ್ಟಲಿಂಗಪೂಜೆ ಮತ್ತು ಸಂಜೆ 6:30ರಿಂದ ಜನಜಾಗೃತಿ ಧರ್ಮ ಸಮಾರಂಭ ಜರುಗಲಿದೆ. ಮುಖ್ಯ ಅಥಿತಿಗಳಾಗಿ ಶಾಸಕರಾದ ಜಿ.ಬಿ.ಜೋತಿಗಣೇಶ್,ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಂಬಿಕಾ ಹುಲಿನಾಯ್ಕರ್,ಜಿ.ಮರಿಸ್ವಾಮಿ, ಟಿ.ಸಿ.ಓಹಿಲೇಶ್ವರ್,ಶಶಿ ಹುಲಿಕುಂಟೆ ಮಠ ಅವರುಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯರಿಗೆ ಗುರುರಕ್ಷೆ ಇರುತ್ತದೆ. ಸುದ್ದಿಗೋಷ್ಠಿಯಲ್ಲಿ ಶ್ರೀಪಂಚಾಚಾರ್ಯ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಹೆಚ್.ಎಸ್.ಬಸ್ಮಾಂಗಿ ರುದ್ರಯ್ಯ, ಸಹಕಾರ್ಯದರ್ಶಿ ಜಿ.ಎಸ್.ಸಿದ್ದರಾಜು, ಧರ್ಮದರ್ಶಿಗಳಾದ ಜ.ಸಿ.ವಿರೂಪಾಕ್ಷ, ಶ್ರೀಮತಿ ವೈ.ಕೆ.ಜೋತಿ, ಪಾಲ್ಗೊಂಡಿದ್ದರು.
(Visited 1 times, 1 visits today)