ತುಮಕೂರು: ದೇಶದ ಪ್ರಜಾಪ್ರಭುತ್ವವು ವಿವಿಧ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗುತ್ತಿರುವುದು ದುರದೃಷ್ಟಕರ. ಗಾಂಧಿ, ಅಂಬೇಡ್ಕರ್ ಅವರ ಕೊಡುಗೆಗಳನ್ನು ಬಯಸುವ ನಾಗರಿಕನಿಗೆ, ಅವರ ಆದರ್ಶ, ನಿಷ್ಠೆ, ತತ್ತ÷್ವಗಳನ್ನೂ ಪಾಲಿಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲವಾಗಿದೆ ಎಂದು ಕರ್ನಾಟಕ ರಾಜ್ಯ ರಾಜ್ಯಶಾಸ್ತç ಶಿಕ್ಷಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರೊ. ಆರ್. ಎಲ್. ಎಂ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ರಾಜ್ಯ ರಾಜ್ಯಶಾಸ್ತç ಶಿಕ್ಷಕರ ಸಂಘ, ತುಮಕೂರು ವಿವಿ ರಾಜ್ಯಶಾಸ್ತç ಶಿಕ್ಷಕರ ಅಕಾಡೆಮಿ, ಸ್ನಾತಕೋತ್ತರ ರಾಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಸ್ನಾತಕೋತ್ತರ ಸಾರ್ವಜನಿಕ ಆಡಳಿತ ಅಧ್ಯಯನ ಮತ್ತು ಸಂಶೋಧನ ವಿಭಾಗದÀ ಸಹಯೋಗದಲ್ಲಿ ಆಯೋಜಿಸಿರುವ ‘ಭಾರತೀಯ ಪ್ರಜಾಪ್ರಭುತ್ವದ ಕಾಳಜಿಗಳು: ಅಸ್ಮಿತೆ, ಬಹುತ್ವ ಹಾಗೂ ಸಂಯುಕ್ತ ರಾಜಕಾರಣ’ ವಿಷಯದ ಕುರಿತ ಎರಡು ದಿನಗಳ 20ನೆಯ ಕರ್ನಾಟಕ ರಾಜ್ಯ ರಾಜ್ಯಶಾಸ್ತç ಶಿಕ್ಷಕರ ಸಮ್ಮೇಳನದಲ್ಲಿ ಮಾತನಡಿದರು.
ಭಾರತ ಸ್ವತಂತ್ರವಾದ ಸಂದರ್ಭದಲ್ಲಿ- ರಾಜಕೀಯವೆಂದರೆ ಪ್ರಜೆಗಳ ಸೇವೆ. ಅಭಿವೃದ್ಧಿಯೇತರ ಆಡಳಿತದಿಂದ ರಾಷ್ಟç ನಿರ್ಮಾಣ ಸಾಧ್ಯ. ದೇಶವನ್ನು ಮುನ್ನಡೆಸಲು ಸಂವಿಧಾನ, ಕಾನೂನಿನ ಅಗತ್ಯವಿದೆ. ಎಲ್ಲರೂ ಭಾರತವನ್ನು ಮರುನಿರ್ಮಿಸಲು ಶ್ರಮಿಸೋಣ ಎಂಬುದಾಗಿತ್ತು. ಈಗಿನ ಕಾಲಘಟ್ಟದ ಕಾನೂನು, ರಾಜಕಾರಣವನ್ನು ಮರು ವ್ಯಾಖ್ಯಾನಿಸಬೇಕಿದೆ ಎಂದರು.
ಮೈಸೂರು ವಿವಿಯ ರಾಜ್ಯಶಾಸ್ತç ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಚ್. ಎಂ. ರಾಜಶೇಖರ್ ದಿಕ್ಸೂಚಿ ಭಾಷಣ ಮಾಡಿ, ರಾಜಕೀಯ ಭ್ರಷ್ಟಾಚಾರದಿಂದ ಆಡಳಿತಾತ್ಮಕ ಭ್ರಷ್ಟಾಚಾರ, ಜನರ ತೆರಿಗೆಯ ಹಣದ ದುರುಪಯೋಗ, ಧಾರ್ಮಿಕ, ಜಾತಿ ಮತ್ತು ಸಮುದಾಯಗಳ ಧ್ರುವೀಕರಣದಿಂದ ರಾಜಕೀಯ ಧ್ರುವೀಕರಣ, ಕುಟುಂಬ ಆಧಾರಿತ ರಾಜಕೀಯದಿಂದ ಸ್ವಾರ್ಥ. ಇದರಿಂದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಪೆಟ್ಟಾಗಿದೆ. ಸಂಯುಕ್ತ ರಾಜಕಾರಣ ಮತ್ತು ಪ್ರಜಾಪ್ರಭುತ್ವ ಸಂವಿಧಾನದ ಎರಡು ಮುಖಗಳಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪ್ರಜೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಪ್ರಜೆಗಳ ನಿರೀಕ್ಷೆಗಳನ್ನು ನೆರವೇರಿಸಿರುವರೇ ಎಂಬ ಪ್ರಶ್ನೆ ಸದಾ ಕಾಡುತ್ತದೆ. ಅಭಿವೃದ್ಧಿ ಪೂರಕ ಆಡಳಿತದಿಂದ ಮಾತ್ರ ಪ್ರಜಾಪ್ರಭುತ್ವಕ್ಕೆ ಗೌರವ ಎಂದು ತಿಳಿಸಿದರು.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ಸಿ. ಸೂರಿ ‘ರಾಷ್ಟç, ರಾಜ್ಯ ಮತ್ತು ಗುರುತು: ಭಾರತೀಯ ಪ್ರಜಾಪ್ರಭುತ್ವದ ಕೆಲವು ಕೇಂದ್ರೀಯ ಕಾಳಜಿಗಳ ಕುರಿತಾದ ಪ್ರತಿಫಲನಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
(Visited 1 times, 1 visits today)